ಆರೋಗ್ಯಕ್ಕೆ ಆದ್ಯತೆ: ಸಾರ್ವಜನಿಕ ಶೌಚಾಲಯದಲ್ಲಿ ನೈರ್ಮಲ್ಯ ಕಿಟ್ ವ್ಯವಸ್ಥೆ ಮಾಡಿದ ಮಹಿಳೆ!

ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ನೈರ್ಮಲ್ಯ ಕಿಟ್, ಪ್ಯಾಡ್ ಗಳು ಲಭ್ಯವಾಗುವಂತೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಸ್ಯಾನಿಟರಿ ಕಿಟ್ ವಿತರಿಸುತ್ತಿರುವ ಇರ್ಫಾನ
ಸ್ಯಾನಿಟರಿ ಕಿಟ್ ವಿತರಿಸುತ್ತಿರುವ ಇರ್ಫಾನ

ಶ್ರೀನಗರ: ಮಹಿಳೆಯರ ನೈರ್ಮಲ್ಯ ಹಾಗೂ ಆರೋಗ್ಯಕ್ಕಾಗಿ ಶ್ರೀನಗರದ ಯುವ ಮಹಿಳೆಯೊಬ್ಬರು ಕಾಳಜಿ ವಹಿಸಿದ್ದು ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ನೈರ್ಮಲ್ಯ ಕಿಟ್, ಪ್ಯಾಡ್ ಗಳು ಲಭ್ಯವಾಗುವಂತೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಶ್ರೀನಗರದ ಕೆಳಭಾಗದ ಪಟ್ಟವಾಗಿರುವ ನೌಶೆರಾದ ಇರ್ಫಾನಾ ಝರ್ಗರ್ ಈ ಉದಾತ್ತ ಕೆಲಸಕ್ಕಾಗಿ ದುಡಿಯುತ್ತಿದ್ದಾರೆ. 2013 ರಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡ ಬಳಿಕ ಮಹಿಳೆಯರಿಗೆ ನೈರ್ಮಲ್ಯ ಕಿಟ್ (ಸ್ಯಾನಿಟರಿ ಕಿಟ್) ಗಳನ್ನು ಒದಗಿಸುವ ಮೂಲಕ ಋತು ಚಕ್ರದ ವೇಳೆ ಮಹಿಳೆಯರಿಗೆ ಹೆಚ್ಚಿನ ನೈರ್ಮಲ್ಯ ಕಾಪಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.

"ನನ್ನ ತಂದೆ ನನಗಾಗಿ ಮಾರುಕಟ್ಟೆಯಿಂದ ಸ್ಯಾನಿಟರಿ ಪ್ಯಾಡ್ ಗಳನ್ನು ತಂದುಕೊಡುತ್ತಿದ್ದರು. ಅವರ ನಿಧನದ ನಂತರ ಸ್ಯಾನಿಟರಿ ಪ್ಯಾಡ್ ಬದಲು ಬಟ್ಟೆ ಬಳಕೆ ಮಾಡುತ್ತಿದ್ದೆ. ಕೆಲವು ದಿನಗಳ ನಂತರ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಕೆ ಮಾಡಲು ಪ್ರಾರಂಭಿಸಿದೆ. ಹಲವು ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿ ಮಾಡುವುದಕ್ಕೆ ಸಂಪನ್ಮೂಲಗಳಿರುವುದಿಲ್ಲ ಋತು ಚಕ್ರದಲ್ಲಿರುವ ಯಾತನೆ ಎದುರಿಸುವ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಇತರ ಅಗತ್ಯ ವಸ್ತುಗಳನ್ನು ನನ್ನ ಸ್ವಂತ ಖರ್ಚಿನಿಂದ ನೀಡುವುದಕ್ಕೆ ನಿರ್ಧರಿಸಿದೆ" ಎನ್ನುತ್ತಾರೆ ಇರ್ಫಾನ

ಆದರೆ ಋತು ಚಕ್ರದಲ್ಲಿರುವ ಮಹಿಳೆಯರ ಮನೆ-ಮನೆಗಳಿಗೆ ತೆರಳುವುದು ಕಷ್ಟ ಸಾಧ್ಯವಾಗಿತ್ತು. ಆದ್ದರಿಂದ ಸ್ಯಾನಿಟರಿ ಪ್ಯಾಡ್, ಪ್ಯಾಂಟೀಸ್, ಆಂಟಿಸ್ಪಾಸ್ಮೊಡಿಕ್ ಔಷಧಗಳು ಕೈ ತೊಳೆಯುವುದು ಮತ್ತು ಸ್ಯಾನಿಟೈಸರ್ ಗಳು ಸಾರ್ವಜನಿಕ ಶೌಚಾಲಯದಲ್ಲಿ ಲಭ್ಯವಾಗುವಂತೆ ಮಾಡಿದೆ.

ಶ್ರೀನಗರ ನಗರಸಭೆ ಕೌನ್ಸಿಲ್ ನಲ್ಲಿ ಕುಂದುಕೊರತೆ ಸೆಲ್ ನಲ್ಲಿ 2014 ರಲ್ಲಿ ಉದ್ಯೋಗ ದೊರೆತ ನಂತರ ಈ ಉದಾತ್ತ ಚಿಂತನೆಯ ಕೆಲವನ್ನು ಇರ್ಫಾನಾ ಪ್ರಾಂಭಿಸಿದರು. ಸ್ಯಾನಿಟರಿ ಕಿಟ್ ನ್ನು ನೀಡುವುದಕ್ಕೆ ನನ್ನ ಉದ್ಯೋಗ ನನಗೆ ಬೆನ್ನೆಲುಬಾಯಿತು. ಉದ್ಯೋಗದಿಂದ ದುಡಿದ ಹಣದಲ್ಲಿ ನನಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸಿ ಅದನ್ನು ಮಹಿಳೆಯರಿಗೆ ನೀಡಲು ಸಾಧ್ಯವಾಗುತ್ತದೆ, ಕರ್ತವ್ಯದ ಕೆಲಸದ ನಂತರ, ಭಾನುವಾರ, ರಜೆ ದಿನಗಳಲ್ಲಿ ಈ ಸಾಮಾಜಿಕ ಕಳಕಳಿ ಇರುವ ಕೆಲಸ ಮಾಡುತ್ತೇನೆ ಎಂದು ಇರ್ಫಾನ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com