'ಅನವರತ ಅಪ್ಪು' ಪುಸ್ತಕ ಬಿಡುಗಡೆ: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಬದುಕಿನ ಸಾರ್ಥಕ ಪುಟಗಳು

ಸಮಾಜಮುಖಿ ಕೆಲಸಗಳಿಂದ ಮನೆಮಾತಾಗಿರುವ ಅಪ್ಪು ಅಂಥವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಜರೂರತ್ತು ಬಹಳವೇ ಇದೆ. ಈ ಸದುದ್ದೇಶವೇ ಲೇಖಕ ರಾಘವೇಂದ್ರ ಅಡಿಗ 'ಅನವರತ ಅಪ್ಪು' ಪುಸ್ತಕ ಬರೆಯಲು ಪ್ರೇರಣೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪುನೀತ್ ರಾಜಕುಮಾರ್ ಇಂದು ನಮ್ಮೊಡನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಕನ್ನಡಿಗರಿಗೆ ಸಾಧ್ಯವಾಗಿಲ್ಲ. ಬಾಲನಟರಾಗಿ ತೆರೆ ಮೇಲೆ ಕಾಣಿಸಿಕೊಂಡಾಗಿನಿಂದ, ಉಸಿರು ನಿಲ್ಲಿಸುವ ಕಡೆಯವರೆಗೂ ಉತ್ಸಾಹದ ಚಿಲುಮೆಯಂತಿದ್ದವರು ಪುನೀತ್. 

<strong>ಲೇಖಕ ರಾಘವೇಂದ್ರ ಅಡಿಗ</strong>
ಲೇಖಕ ರಾಘವೇಂದ್ರ ಅಡಿಗ

ಪುನೀತ್ ರಾಜಕುಮಾರ್ ಅವರಿಗೆ ಅಕ್ಷರ ನಮನ ಸಲ್ಲಿಸುವ ವಿಶಿಷ್ಟ ಪುಸ್ತಕ 'ಅನವರತ ಅಪ್ಪು' ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪತ್ರಕರ್ತ, ಲೇಖಕ ರಾಘವೇಂದ್ರ ಅಡಿಗ ಎಚ್ಚೆನ್ ಈ ಪುಸ್ತಕದ ಕರ್ತೃ. 

ಸಮಾಜಮುಖಿ ಕೆಲಸಗಳಿಂದ ಮನೆಮಾತಾಗಿರುವ ಅಪ್ಪು ಅಂಥವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಜರೂರತ್ತು ಬಹಳವೇ ಇದೆ. ಈ ಸದುದ್ದೇಶವೇ ಲೇಖಕ ರಾಘವೇಂದ್ರ ಅಡಿಗ 'ಅನವರತ ಅಪ್ಪು' ಪುಸ್ತಕ ಬರೆಯಲು ಪ್ರೇರಣೆ. 

ಪುನೀತ್ ಅವರ ಹುಟ್ಟಿನಿಂದ ಈವರೆಗೆ ಅವರ ಸಾಧನೆಯ ಹೆಜ್ಜೆಗಳು ಮತ್ತು ಅವರ ವ್ಯಕ್ತಿತ್ವ ಪರಿಚಯವನ್ನು ಸರಳವಾಗಿ ಪ್ರಸ್ತುತ ಪಡಿಸುವುದರ ಮೂಲಕ ಪುನೀತ್ ರನ್ನು ಜೀವಂತವಾಗಿಡುವ ಕಾರ್ಯದಲ್ಲಿ ಅವರು ಯಶ ಕಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ (7338437666) ಈ ಪುಸ್ತಕವನ್ನು ಹೊರತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com