ಸಸಿಗಳನ್ನು ಪಡೆಯುತ್ತಿರುವ ಕೋಚಿಂಗ್ ಕೇಂದ್ರದ ರಾಜೇಶ್ ಕುಮಾರ್
ಸಸಿಗಳನ್ನು ಪಡೆಯುತ್ತಿರುವ ಕೋಚಿಂಗ್ ಕೇಂದ್ರದ ರಾಜೇಶ್ ಕುಮಾರ್

ಬಿಹಾರ: ನಾಗರಿಕ ಸೇವಾ ಪರೀಕ್ಷೆ ತರಬೇತಿಗೆ ಶುಲ್ಕವಾಗಿ 18 ಸಸಿ ಪಡೆಯುವ ಕೋಚಿಂಗ್ ಸೆಂಟರ್!

ವಿದ್ಯಾರ್ಥಿಗಳಿಂದ ಶುಲ್ಕವಾಗಿ ಸಸಿಯನ್ನು ಪಡೆಯುವ ಶಾಲೆಯೊಂದರ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ 'ಗ್ರೀನ್- ಪಾಠಶಾಲಾ' ಹೆಸರಿನ ಇಂತಹ ಶಾಲೆಯೊಂದನ್ನು 2008 ರಿಂದಲೂ ಯುವಕರೊಬ್ಬರು ನಡೆಸುತ್ತಿದ್ದಾರೆ. 

ಪಾಟ್ನಾ: ವಿದ್ಯಾರ್ಥಿಗಳಿಂದ ಶುಲ್ಕವಾಗಿ ಸಸಿಯನ್ನು ಪಡೆಯುವ ಶಾಲೆಯೊಂದರ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ  'ಗ್ರೀನ್- ಪಾಠಶಾಲಾ' ಹೆಸರಿನ ಇಂತಹ ಶಾಲೆಯೊಂದನ್ನು 2008 ರಿಂದಲೂ ಯುವಕರೊಬ್ಬರು ನಡೆಸುತ್ತಿದ್ದಾರೆ. 

ಬಿಹಾರದ ಸಮಷ್ಟಿಪುರ ಜಿಲ್ಲೆಯ ರೊಸಾರಾದಲ್ಲಿ 33 ವರ್ಷದ ರಾಜೀಶ್ ಕುಮಾರ್ ಸುಮನ್ ಅವರ ಕೋಚಿಂಗ್ ಕೇಂದ್ರ, ವಿವಿಧ ಸ್ವಯಂಸೇವಕರ ನೆರವಿನಿಂದ ವಿವಿಧ ಸರ್ಕಾರಿ ಹುದ್ದೆ ಸೇರಬಯಸುವ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಕುಮಾರ್ ಟ್ರೀ ಮ್ಯಾನ್ ಎಂದೇ ಹೆಸರಾಗಿದ್ದು, 18 ಸಸಿಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ಶುಲ್ಕವಾಗಿ ವಿಧಿಸುತ್ತಾರೆ.

ರಾಜ್ಯಾದ್ಯಂತ ಮರಗಳ ತೋಟಗಳನ್ನು ಉತ್ತೇಜಿಸುವ ಹಂಬಲದೊಂದಿಗೆ ಸುಮನ್, ಬಿನೋದ್ ಸ್ಮೃತಿ ಸ್ಟಡಿ ಕ್ಲಬ್‌ನಡಿಯಲ್ಲಿ ತಮ್ಮ ದಿವಂಗತ ಮಾವನ ನೆನಪಿನಲ್ಲಿ ಈ ವಿಶಿಷ್ಟ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಹಸಿರು- ಪಾಠಶಾಲೆಯಲ್ಲಿ ಸರ್ಕಾರಿ ಹುದ್ದೆಗಳಿಗೆ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಬೆಳಗ್ಗೆ ಹಾಗೂ ಸಂಜೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. 

18 ಸಸಿಗಳನ್ನು ಶುಲ್ಕವಾಗಿ ಪಡೆಯುವ ಹಿಂದೆಯೂ ವೈಜ್ಞಾನಿಕ ಲೆಕ್ಕಾಚಾರವಿದೆ. ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ 18 ಸಸ್ಯಗಳನ್ನು ಉತ್ಪಾದಿಸುವಷ್ಟು ಆಮ್ಲಜನಕವನ್ನು ಉಸಿರಾಡುತ್ತಾನೆ. ಆದ್ದರಿಂದ, ನಾವು 18 ಸಸಿಗಳನ್ನು ಶುಲ್ಕವಾಗಿ ವಿಧಿಸುತ್ತೇವೆ, ನಂತರ ಅವುಗಳನ್ನು ವಿವಿಧ ಸ್ಥಳಗಳಲ್ಲಿ ನೆಡಲಾಗುತ್ತದೆ ಎಂದು ಸುಮನ್ ಹೇಳುತ್ತಾರೆ. ಭಾನುವಾರ ಕೋಚಿಂಗ್ ಇರುವುದಿಲ್ಲ, ರಾಜೇಶ್ ಕುಮಾರ್ ರಾಜ್ಯಾದ್ಯಂತ ಸಂಚರಿಸಿ, ಸಸಿಗಳನ್ನು ಹೆಚ್ಚಿಗೆ ನೆಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

2008ರಿಂದಲೂ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರೀನ್- ಪಾಠಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಇತ್ತೀಚಿಗೆ ಮೂವರು ಮಹಿಳೆಯರು ಸೇರಿದಂತೆ 13 ವಿದ್ಯಾರ್ಥಿಗಳು ಬಿಹಾರ ಪೊಲೀಸ್ ಪರೀಕ್ಷೆಯನ್ನು ತೇರ್ಗೆಡೆಯಾಗಿ, ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.

ಈ ಕೇಂದ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ಸುಮಾರು 40% ರಷ್ಟು ಮಹಿಳೆಯರಾಗಿದ್ದಾರೆ. ಕೋಚಿಂಗ್ ಕೇಂದ್ರ ಪ್ರಾರಂಭದಿಂದಲೂ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ 90,000 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದು ರಾಜೇಶ್ ಕುಮಾರ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com