ಎಳನೀರು ಗ್ರಾಮ
ಎಳನೀರು ಗ್ರಾಮ

ಕೋವಿಡ್ ನಿಯಮ ಪಾಲಿಸಿ ಕೊರೋನಾವನ್ನು ಊರಿನಿಂದ ಹೊರಗಿಟ್ಟ ಮಂಗಳೂರಿನ ಎಳನೀರು ಗ್ರಾಮ!

ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಪುಟ್ಟ ಹಳ್ಳಿ ಎಳನೀರು ಗ್ರಾಮ ಕಳೆದ ಒಂದುವರ್ಷದಿಂದ ಕೋವಿಡ್ ಸೋಂಕಿನಿಂದ ಹೊರಗುಳಿದಿದೆ.
Published on

ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಪುಟ್ಟ ಹಳ್ಳಿ ಎಳನೀರು ಗ್ರಾಮ ಕಳೆದ ಒಂದು ವರ್ಷದಿಂದ ಕೋವಿಡ್ ಸೋಂಕಿನಿಂದ ಹೊರಗುಳಿದಿದೆ.

ಬೆಳ್ತಂಗಡಿ ತಾಲೂಕಿನಲ್ಲಿರುವ ಎಳನೀರು ಗ್ರಾಮದಲ್ಲಿ 136 ಕುಟುಂಬಗಳಿದ್ದು 600 ಜನ ವಾಸಿಸುತ್ತಿದ್ದಾರೆ, ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಂದೇ ಒಂದು ಪ್ರಕರಣ ಕೂಡ ಈ ಊರಿನಲ್ಲಿ ಕಾಣಿಸಿಕೊಂಡಿಲ್ಲ.

ಮಲವಂತಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಈ ಎಳನೀರು ಗ್ರಾಮ ಕೊರೋನಾದ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಅನಗತ್ಯವಾಗಿ ಮನೆಯಿಂದ ಹೊರಬರುವುದಿಲ್ಲ ಎಂದು ಆರೋಗ್ಯಾಧಕಾರಿಗಳು ತಿಳಿಸಿದ್ದಾರೆ.

ಗ್ರಾಮದಲ್ಲಿರುವ 632 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಒಬ್ಬರಿಗೂ ಸೋಂಕು ಕಾಣಿಸಿಕೊಂಡಿಲ್ಲ, 45 ವರ್ಷ ಮೇಲ್ಪಟ್ಟ 135 ಮಂದಿಯಲ್ಲಿ 120 ಜನ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಎರಡನೇ ಸುತ್ತಿನ ಲಸಿಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಕಾವ್ಯ ತಿಳಿಸಿದ್ದಾರೆ.

ಮಾಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಕಾವ್ಯ ಮತ್ತು ಇತರ ಸಿಬ್ಬಂದಿ ಎಳನೀರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಆರೋಗ್ಯವನ್ನು ಮಾನಿಟರ್ ಮಾಡುತ್ತಿದ್ದಾರೆ.

ಬೆಳ್ತಂಗಡಿ ತಾಲ್ಲೂಕು ಕಚೇರಿಯಿಂದ ದಿದೂಪ್ ಮೂಲಕ ಈ ಹಳ್ಳಿಗೆ 35 ಕಿ.ಮೀ. ದೂರವಿದೆ. ಆದರೆ ಮಳೆಗಾಲದಲ್ಲಿ ಈ ಮಾರ್ಗವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಕಾರ್ಕಳಾ-ಬಜಗೋಳಿ ಅಥವಾ ಚಾರ್ಮಡಿ-ಸಾಮ್ಸೆ ಮೂಲಕ 120 ಕಿ.ಮಿ ಪರ್ಯಾಯ ಮಾರ್ಗವಿದೆ ಎಂದು ಕಳೆದ ಎರಡು ವರ್ಷಗಳಿಂದ ಪಿಎಚ್‌ಸಿಯಲ್ಲಿ ಕೆಲಸ ಮಾಡುತ್ತಿರುವ ಡಾ. ಕಾವ್ಯ ತಿಳಿಸಿದ್ದಾರೆ.

ಯಾರಿಗಾದರೂ ಜ್ವರ ಅಥವಾ ಇತರ ಲಕ್ಷಣಗಳು ಇದೆಯೇ ಎಂದು ಕಂಡುಹಿಡಿಯಲು ಆಶಾ ಕಾರ್ಮಿಕರು ಪ್ರತಿದಿನ ನಿವಾಸಿಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ನಿವಾಸಿಗಳು ಜಾಗರೂಕರಾಗಿದ್ದು, ಯಾವುದೇ ಹೊರಗಿನವರು ಗ್ರಾಮಕ್ಕೆ ಬಂದರೆ ಅವರು ಆರೋಗ್ಯ ಕಾರ್ಯಕರ್ತರಿಗೆ ತಿಳಿಸುತ್ತಾರೆ. ಮತ್ತು ಗ್ರಾಮಕ್ಕೆ ಹಿಂದಿರುಗಿದವರನ್ನು ಅವರ ಮನೆಗಳಲ್ಲಿ ನಿರ್ಬಂಧಿಸಲಾಗುತ್ತದೆ. ಐಸೋಲೇಶನ್ ಪೂರ್ಣಗೊಳಿಸುವ ಮೊದಲು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಲು ಬಿಡುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು
ತಿಳಿಸಿದ್ದಾರೆ.

ದಿನಸಿ ಮತ್ತು ಧವಸ ಧಾನ್ಯ ಹಾಗೂ ಇತರ ಅಗತ್ಯ ವಸ್ತುಗಳಿಗಾಗಿ, ಅವರು ಸುಮಾರು 6 ಕಿ.ಮೀ ದೂರದಲ್ಲಿರುವ ಕಲ್ಸಾವನ್ನು ಅವಲಂಬಿಸಿದ್ದಾರೆ. ಕೋವಿಡ್-19 ಟಾಸ್ಕ್ ಫೋರ್ಸ್ ಸದಸ್ಯರು ಗ್ರಾಮಸ್ಥರಿಗೆ ಅಗತ್ಯವಾದ ವಸ್ತುಗಳನ್ನು ತಂದು ಸಹಕರಿಸುತ್ತಾರೆ. 

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು ಮತ್ತು ನಿವಾಸಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಗ್ರಾಮದಲ್ಲಿ ಯಾರೂ ವೈರಸ್ ಸೋಂಕಿಗೆ ಒಳಗಾಗದಂತೆ ತಮ್ಮ ಗ್ರಾಮದಲ್ಲಿಯೇ ಲಸಿಕಾ ಶಿಬಿರಗಳನ್ನು ನಡೆಸುವಂತೆ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com