ವೈದ್ಯೆ ಡಾ. ರೇಖ್ ಕೃಷ್ಣನ್
ವೈದ್ಯೆ ಡಾ. ರೇಖ್ ಕೃಷ್ಣನ್

ಕೋವಿಡ್ ರೋಗಿ ಸಾಯುವ ಮುನ್ನ ಆಕೆಯ ಕಿವಿಯಲ್ಲಿ 'ಇಸ್ಲಾಂ ಪ್ರಾರ್ಥನೆ' ಪಠಿಸಿದ ಹಿಂದೂ ವೈದ್ಯೆ!

ಪಾಲಕ್ಕಾಡ್‌ನ ಪಟ್ಟಂಬಿಯ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಯುವತಿಯೋರ್ವಳಿಗೆ ಹಿಂದೂ ವೈದ್ಯೆಯೊಬ್ಬರು ಶಹಾದತ್ ಪಠಿಸಿದ್ದು ನಂತರ ಯುವತಿ ಕಣ್ಣುಮುಚ್ಚಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೋಝಿಕೋಡ್: ಪಾಲಕ್ಕಾಡ್‌ನ ಪಟ್ಟಂಬಿಯ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಯುವತಿಯೋರ್ವಳಿಗೆ ಹಿಂದೂ ವೈದ್ಯೆಯೊಬ್ಬರು ಶಹಾದತ್ ಪಠಿಸಿದ್ದು ನಂತರ ಯುವತಿ ಕಣ್ಣುಮುಚ್ಚಿರುವ ಘಟನೆ ಕೇರಳದಲ್ಲಿ ನಡೆದಿದೆ. 

ಇಸ್ಲಾಂನಲ್ಲಿ ಸಾಯುವ ಮುನ್ನ ಅವರ ಕಿವಿಯಲ್ಲಿ ಶಹಾದತ್ ಪಠಿಸಲಾಗುತ್ತದೆ. ಇನ್ನು ಕೊರೋನಾ ಮಾರ್ಗಸೂಚಿ ಕಾರಣ ಕೊನೆಯ ಗಳಿಗೆಯಲ್ಲಿ ರೋಗಿಯ ಸಮೀಪ ಯಾರೂ ಇಲ್ಲದ ಪರಿಸ್ಥಿತಿಯನ್ನು ಮನಗಂಡ ಡಾ. ರೇಖಾ ಕೃಷ್ಣನ್ ಅವರು ಯುವತಿಯ ಕಿವಿಯಲ್ಲಿ ಶಹಾದತ್ ಪಠಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದ ಯುವತಿಯನ್ನು ಎರಡು ವಾರಗಳಿಂದ ಐಸಿಯೂನಲ್ಲಿಟ್ಟು ವೆಂಟಿಲೇಟರ್‌ ಅಳವಡಿಸಲಾಗಿತ್ತು. ಇತ್ತ ಆಕೆಯ ಸಂಬಂಧಿಕರು ಐಸಿಯುಗೆ ಪ್ರವೇಶಿಸಲು ಅನುಮತಿ ನೀಡಲಾಗಿರಲಿಲ್ಲ.  ಮೇ 17ರಂದು ರೋಗಿಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ವಿಧಿಯಿಲ್ಲದೆ ವೆಂಟಿಲೇಟರ್‌ ತೆಗೆಯಬೇಕಾಯಿತು. ಇನ್ನು ಕೊನೆಗಳಿಯಲ್ಲಿ ಯುವತಿ ಯಾವುದಕ್ಕೊ ಚಡಪಡಿಸುತ್ತಿರುವುದನ್ನು ಗಮನಿಸಿದ ನಾನು ನಿಧಾನವಾಗಿ ಅವಳ ಕಿವಿಯಲ್ಲಿ ಕಲಿಮಾ(ಲಾ ಇಲಾಹ ಇಲ್ಲಲ್ಲಾ, ಮುಹಮ್ಮದೂರ್ ರಸುಲುಲ್ಲಾ) ಪಠಿಸಿದೆ. ಅವಳು ಕೆಲ ಸೆಕೆಂಡ್ ಆಳವಾಗಿ ಉಸಿರೆಳೆದುಕೊಂಡು ಜೀವ ಬಿಟ್ಟಳು ಎಂದು ವೈದ್ಯರು ತಿಳಿಸಿದ್ದಾರೆ. 

ನಾನು ಹುಟ್ಟಿ ಬೆಳೆದದ್ದು ದುಬೈನಲ್ಲಿ. ಅಲ್ಲಿ ಮುಸ್ಲಿಂರು ಅನುಸರಿಸುವ ಪದ್ಧತಿಗಳು ಮತ್ತು ಆಚರಣೆಗಳು ನನಗೆ ತಿಳಿದಿವೆ. 
"ನಾನು ಕೊಲ್ಲಿಯಲ್ಲಿದ್ದಾಗ ನನ್ನ ನಂಬಿಕೆಯೊಂದಿಗೆ ನಾನು ಎಂದಿಗೂ ತಾರತಮ್ಯ ಮಾಡಲಿಲ್ಲ. ನನ್ನದು ಧಾರ್ಮಿಕ ಸೂಚಕ ಎಂದು ನಾನು ಭಾವಿಸುವುದಿಲ್ಲ; ಇದು ಮಾನವೀಯ ಕ್ರಿಯೆ ಎಂದು ರೇಖಾ ಹೇಳಿದ್ದಾರೆ.  

ಕೋವಿಡ್-19 ರೋಗಿಗಳ ಒಂದು ಪ್ರಮುಖ ಸಮಸ್ಯೆ ಎಂದರೆ ಅವರೆಲ್ಲಾ ಒಂಟಿತನ ಮತ್ತು ಪ್ರತ್ಯೇಕತೆಯನ್ನು ಅನುಭವಿಸುತ್ತಾರೆ. ಕುಟುಂಬದ ಸಂಪರ್ಕವಿಲ್ಲದೆ ಬರೀ ಆರೋಗ್ಯ ಕಾರ್ಯಕರ್ತರ ಜೊತೆ ಮಾತ್ರ ಸಂಪರ್ಕವಿರುತ್ತದೆ. ಹೀಗಾಗಿ ನಾವು ರೋಗಿಗಳಿಗೆ ಸಹಾಯ ಮಾಡಲು ಎಲ್ಲವನ್ನು ಮಾಡಬೇಕು ಎಂದು ಹೇಳುವ ಮೂಲಕ ವೈದ್ಯೆ ದೇಶಕ್ಕೆ ಹೊಸ ಉದಾಹರಣೆಯೊಂದನ್ನು ನೀಡಿದ್ದಾರೆ. 

ಕೋವಿಡ್ -19 ರ ಸಮಯದಲ್ಲಿನ ಅಸಾಧಾರಣ ಅನುಭವಗಳನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ರೇಖಾ ಅವರು ಹಂಚಿಕೊಂಡಿದ್ದು ಇದರ ನಂತರ ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದೀಗ ವೈರಲ್ ಆಗೆದೆ. ಇನ್ನು ವೈದ್ಯೆಯ ಅಸಾಧಾರಣ ಕೆಲಸವನ್ನು ಮುಸ್ಲಿಂ ಮೌಲ್ವಿಗಳು ಅಭಿನಂದಿಸಿದ್ದಾರೆ. ಇದನ್ನು ಸಾಮಾನ್ಯವಾಗಿ ಸಂಬಂಧಿಕರು ಮಾಡುವ ಪದ್ಧತಿ. ಆದರೆ ಇದನ್ನು ಇನ್ನೊಂದು ಧರ್ಮದವರು ಮಾಡಿರುವುದು ಹೃದಯಸ್ಪರ್ಶಿಯಾಗಿದೆ. ಈ ಮೂಲಕ ವೈದ್ಯರು ದೇಶಕ್ಕೆ ಹೊಸ ಉದಾಹರಣೆ ನೀಡಿದ್ದಾರೆ ಎಂದು ಸುನ್ನಿ ವಿದ್ವಾಂಸ ಅಬ್ದುಲ್ ಹಮೀದ್ ಫೈಜಿ ಅಂಬಲಕ್ಕದವು ಬರೆದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com