ಕನ್ನಡ ಸಾಹಿತ್ಯ ಪ್ರಚಾರಕ್ಕೆ ಒತ್ತು, ಇ-ಲೈಬ್ರರಿ ಸ್ಥಾಪನೆಗೆ ಒಲವು: ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಮಹೇಶ್ ಜೋಶಿ

ಇತ್ತೀಚಿಗಷ್ಟೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಜೋಶಿ ತಾವು ಕೈಗೊಳ್ಳಲಿರುವ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಮಹೇಶ್ ಜೋಶಿ
ಮಹೇಶ್ ಜೋಶಿ

ಬೆಂಗಳೂರು: ಇತ್ತೀಚಿಗಷ್ಟೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ದೂರದರ್ಶನದ ಮಾಜಿ ಹೆಚ್ಚುವರಿ ನಿರ್ದೇಶಕ ಮಹೇಶ್ ಜೋಶಿ ತಾವು ಕೈಗೊಳ್ಳಲಿರುವ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಮುಂದಿನ 5 ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಅವರು ತಿಳಿಸಿದ್ದಾರೆ. ಮೊದಲಿಗೆ ಕನ್ನಡ ಪುಸ್ತಕಗಳ ಇ-ಲೈಬ್ರರಿಯನ್ನು ಸ್ಥಾಪಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅದರಿಂದ ಪ್ರಪಂಚದಾದ್ಯಂತ ಕನ್ನಡಿಗರು ಕನ್ನಡ ಸಾಹಿತ್ಯದ ಜೊತೆ ಒಡನಾಟ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಮಹೇಶ್ ಜೋಶಿ ಅವರು ಕಸಾಪ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಶೇಖರಗೌಡ ಮಾಲಿಪಾಟೀಲ ವಿರುದ್ಧ ಸುಮಾರು 46,000 ಮತಗಳ ಅಂತರದಿಂದ ಗೆದ್ದಿದ್ದರು. ಕಸಾಪ ಆಜೀವ ಸದಸ್ಯತ್ವ ಶುಲ್ಕವನ್ನು 500 ರೂ.ಗಳಿಂದ 250 ರೂ.ಗಳಿಗೆ ಇಳಿಸುವ ಯೋಜನೆಯನ್ನೂ ಮಹೇಶ್ ಜೋಶಿ ಹೊಂದಿದ್ದಾರೆ. ವಿದ್ಯಾರ್ಥಿಗಳು ಕಸಾಪ ಸದಸ್ಯರಾಗಲು ಉತ್ತೇಜನ ನೀಡಬೇಕು ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com