ರಾಜ್ಯದ ಠಾಣೆಗಳನ್ನು ಹಿಂದಿಕ್ಕಿ ಅತ್ಯುತ್ತಮ ಸ್ಥಾನ ಪಡೆದ ಬೀದರ್ ಪೊಲೀಸ್ ಸ್ಟೇಷನ್!

ಬೀದರ್‌ನ ಮಾರುಕಟ್ಟೆ ಪೊಲೀಸ್ ಠಾಣೆ, ಸಬ್ ಇನ್ಸ್‌ಪೆಕ್ಟರ್ ಕುಮಾರಿ ಸಂಗೀತ ಎಸ್ ನೇತೃತ್ವದಲ್ಲಿ, ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಇತರ ಠಾಣೆಗಳು ಸೇರಿದಂತೆ ರಾಜ್ಯದಾದ್ಯಂತ ನೂರಾರು ಪೊಲೀಸ್ ಠಾಣೆಗಳ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಬೀದರ್ ಠಾಣೆ ಸಿಬ್ಬಂದಿ
ಬೀದರ್ ಠಾಣೆ ಸಿಬ್ಬಂದಿ

ಬೀದರ್: ಪೊಲೀಸ್ ಠಾಣೆ ಎಂದರೇ ಭಯಪಟ್ಟು ಠಾಣೆಗೆ ಹೋಗಲು ಎದುರುವ ಈ ಸಮಯದಲ್ಲಿ ವಿವಿಧ ಕಾರಣಗಳಿಗಾಗಿ ಬೀದರ್ ಪೊಲೀಸ್ ಠಾಣೆ ಉತ್ತಮ ಸ್ಥಾನ ಪಡೆದಿದೆ.

ಬೀದರ್‌ನ ಮಾರುಕಟ್ಟೆ ಪೊಲೀಸ್ ಠಾಣೆ, ಸಬ್ ಇನ್ಸ್‌ಪೆಕ್ಟರ್ ಕುಮಾರಿ ಸಂಗೀತ ಎಸ್ ನೇತೃತ್ವದಲ್ಲಿ, ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಇತರ ಠಾಣೆಗಳು ಸೇರಿದಂತೆ ರಾಜ್ಯದಾದ್ಯಂತ ನೂರಾರು ಪೊಲೀಸ್ ಠಾಣೆಗಳ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ದೇಶದ ಅತ್ಯುತ್ತಮ ಠಾಣೆಗಳಲ್ಲಿ ಬೀದರ್ 22ನೇ ಸ್ಥಾನ ಪಡೆದಿದೆ. ಸೆಪ್ಟೆಂಬರ್-ಅಕ್ಟೋಬರ ನಲ್ಲಿಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ತಂಡವು ಬೀದರ್ ಗೆ ಆಗಮಿಸಿ ವಿವರವಾದ ಸಮೀಕ್ಷೆ ನಡೆಸಿತ್ತು ಎಂದು ಸಂಗೀತ ಕುಮಾರಿ ಸಂಗೀತ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಆಸ್ತಿ ಸಂಬಂಧಿತ ಅಪರಾಧಗಳ ವಿಲೇವಾರಿ, ಕೇಸ್ ಫೈಲ್‌ಗಳ ತೆರವುಗೊಳಿಸುವುದು, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಪರಿಹಾರ, ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಉಪಸ್ಥಿತಿ, ನಿಲ್ದಾಣದ ಆವರಣದ ಸ್ವಚ್ಚತೆ ಮತ್ತು ಜನರ ಪ್ರತಿಕ್ರಿಯೆಗಳು ಸೇರಿದಂತೆ ಹಲವು ಅಂಶಗಳ ಬಗ್ಗೆ ತಂಡವು  ನೆರೆಹೊರೆಯವರಿಂಗ ಮಾಹಿತಿಯನ್ನು ಸಂಗ್ರಹಿಸಿತ್ತು. 

ಈ ಸಂಬಂಧ ಅಭಿನಂದನೆ ಸಲ್ಲಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೇಂದ್ರ ಗೃಹ ಸಚಿವಲಾಯದಿಂದ ಗೌರವ ಪಡೆದಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ. ಸಬ್ ಇನ್ಸ್ ಪೆಕ್ಟರ್, ಎಎಸ್ ಐ ಮುಖ್ಯ ಪೇದೆ ಹಾಗೂ ಪೇದೆಗಳು ಸೇರಿದಂತೆ ಠಾಣೆಯಲ್ಲಿ 51 ಸಿಬ್ಬಂದಿಯಿದ್ದಾರೆ.

ಕೇಂದ್ರ ಸಮಿತಿ ವಿವರವಾಗಿ ಸಮೀಕ್ಷೆ ನಡೆಸಿದೆ, ಠಾಣೆಗೆ ಭೇಟಿ ನೀಡುವ ಸಾರ್ವಜನಿಕರಿಂಗ ಸಮಿತಿ ಮಾಹಿತಿ ಪಡೆದುಕೊಂಡಿದೆ ಎಂದು ಬೀದರ್ ಸೂಪರಿಂಡೆಂಟ್ ಆಪ್ ಪೊಲೀಸ್ ಡಿ.ಎಲ್ ನಾಗೇಶ್ ತಿಳಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಮತ್ತು ಗೃಹ ಕಾರ್ಯದರ್ಶಿ  ಅಜಯ್ ಕುಮಾರ ಭಲ್ಲಾ ಅವರ ಸಹಿ ಇರುವ ಪ್ರಮಾಣ ಪತ್ರವನ್ನು ಡಿಜಿ ಐಜಿಪಿ ಪ್ರವೀಣ್ ಸೂದ ಅವರಿಗೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com