ಸ್ವಾತಂತ್ರ್ಯ ಸಂಗ್ರಾಮ: ಉಪ್ಪಿನ ಸತ್ಯಾಗ್ರಹದಲ್ಲಿ ಅಂಕೋಲಾದ ಪಾತ್ರ

ಏಪ್ರಿಲ್ 13, 1930, ಕಾಂಗ್ರೆಸ್ ನಾಯಕ ಎಂಪಿ ನಾಡಕರ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರ ಯಾತ್ರೆ ಅಂಕೋಲ ಹತ್ತಿರ ಸಮುದ್ರ ತೀರಕ್ಕೆ ಸಾಗಿತ್ತು. ಸಮುದ್ರ ನೀರನ್ನು ಮಡಕೆಯಲ್ಲಿ ತುಂಬಿ, ಉಪ್ಪು ಮಿಶ್ರಿತ ಮರಳನ್ನು ತುಂಬಿಕೊಂಡು ಅಂಕೋಲಕ್ಕೆ ಬಂದರು.
ಅಂಕೋಲದ ಪುಜಗೆರೆಯಲ್ಲಿ ಅಂದು ಉಪ್ಪಿನ ಸತ್ಯಾಗ್ರಹಕ್ಕೆ ಸೇರಿದ್ದ ಜನರು
ಅಂಕೋಲದ ಪುಜಗೆರೆಯಲ್ಲಿ ಅಂದು ಉಪ್ಪಿನ ಸತ್ಯಾಗ್ರಹಕ್ಕೆ ಸೇರಿದ್ದ ಜನರು

ಅಂಕೋಲ: ಏಪ್ರಿಲ್ 13, 1930, ಕಾಂಗ್ರೆಸ್ ನಾಯಕ ಎಂಪಿ ನಾಡಕರ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರ ಯಾತ್ರೆ ಅಂಕೋಲ ಹತ್ತಿರ ಸಮುದ್ರ ತೀರಕ್ಕೆ ಸಾಗಿತ್ತು. ಸಮುದ್ರ ನೀರನ್ನು ಮಡಕೆಯಲ್ಲಿ ತುಂಬಿ, ಉಪ್ಪು ಮಿಶ್ರಿತ ಮರಳನ್ನು ತುಂಬಿಕೊಂಡು ಅಂಕೋಲಕ್ಕೆ ಬಂದರು.

ಅವರು ಮೂರು ಕಲ್ಲುಗಳಿಂದ ತಾತ್ಕಾಲಿಕ ಒಲೆಯನ್ನು ನಿರ್ಮಿಸಿದರು. ನೀರನ್ನು ಕಲ್ಲಿನ ಉಪ್ಪು ಆಗುವವರೆಗೆ ಬಿಸಿ ಮಾಡಿದರು. ಉಪ್ಪಿನ ಮೊದಲ ಚೀಲವನ್ನು ಹರಾಜು ಹಾಕಲಾಯಿತು, ಸ್ಥಳೀಯರಾದ ಹೊನ್ನಪ್ಪ ದೇವಿ ನಾಯಕ್ ಇದನ್ನು 30ರೂಪಾಯಿಗೆ ಖರೀದಿಸಿದರು. ಈ ರೀತಿ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹವು ಆರಂಭವಾಯಿತು. ನಂತರ ದಕ್ಷಿಣದಲ್ಲಿ ಅತಿದೊಡ್ಡ ಸ್ವಾತಂತ್ರ್ಯ ಚಳವಳಿಯಾಗಿ ರೂಪುಗೊಂಡಿತು.

ಮಹಾತ್ಮ ಗಾಂಧಿಯವರ ಮಾರ್ಚ್ 1930 ರ ದಂಡಿ ಸತ್ಯಾಗ್ರಹ ರಾಜ್ಯದ ಸ್ವಾತಂತ್ರ್ಯ ಹೋರಾಟ ನಾಯಕರಿಗೆ ಹುಬ್ಬಳ್ಳಿಯಲ್ಲಿ ಪ್ರೇರಣೆ ನೀಡಿತು, ಇಲ್ಲಿಯೂ ಇದೇ ರೀತಿಯ ಸಾಧನೆ ಮಾಡಲಾಯಿತು. ಅಂಕೋಲಾದ ಕಾಂಗ್ರೆಸಿಗರು, ನಾಡವರ್ ಸಮುದಾಯಕ್ಕೆ ಸೇರಿದವರು, ಅವರಿಗೆ ಉತ್ತಮ ಶೈಕ್ಷಣಿಕ ಹಿನ್ನೆಲೆಯಾಗಲಿ ಅಥವಾ ಹಣಕಾಸಿನ ಬೆಂಬಲವಾಗಲಿ ಇರಲಿಲ್ಲ. ಸತ್ಯಾಗ್ರಹವನ್ನು ತಮ್ಮ ಕರಾವಳಿ ಗ್ರಾಮದಲ್ಲಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು. 1929 ರಲ್ಲಿ ಸತ್ಯಾಗ್ರಹಕ್ಕೆ ಅಂಕೋಲಾ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಕಾಂಗ್ರೆಸ್ ನಾಯಕ ಹನುಮಂತ ರಾವ್ ಕೌಜಲಗಿ ವರದಿ ಮಾಡಿದಾಗ ಉಪ್ಪಿನ ಸತ್ಯಾಗ್ರಹವನ್ನು ಮೊದಲೇ ನಿರ್ಧರಿಸಲಾಯಿತು.

ಸ್ಥಳೀಯ ನಾಯಕರು ಅಂಕೋಲಾದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಪೂಜೆಗೆರೆಯನ್ನು ಸ್ಥಳವಾಗಿ ಆಯ್ಕೆ ಮಾಡಿದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಾರ್ಷಿಕೋತ್ಸವವಾದ ಏಪ್ರಿಲ್ 13 ರಂದು ಈ ಚಳುವಳಿಯನ್ನು ಆಯೋಜಿಸಲಾಗಿತ್ತು. "ಇದು ಕೇವಲ ಉಪ್ಪು ಸತ್ಯಾಗ್ರಹಕ್ಕೆ ಸೀಮಿತವಾಗಿರದೆ 'ತೆರಿಗೆ ಇಲ್ಲ' ನೀತಿಗೆ ವಿಸ್ತರಿಸಿದೆ. ಕಾಂಗ್ರೆಸ್ ನ ನಾಯಕರಾದ ಹಮ್ಮಣ್ಣ ಗೋವಿಂದ ನಾಯಕ್ ವಂಡಿಗೆ, ಬೊಮ್ಮಯ್ಯ ರಾಕು ಗಾಂವ್ಕರ್ ಬಾಸ್ಗೋಡ್, ವೀರಣ್ಣ ಬೊಮ್ಮಯ್ಯ ನಾಯಕ್ ಕಾಂಗಿಲ್ ಮತ್ತು ಅಂಕೋಲಾದ ಬಸ್ಗೊಡ್ ರಾಮ ನಾಯ್ಕ್ ಅವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com