ಸಮುದ್ರ ತಟದ ಬಂಕರ್
ಸಮುದ್ರ ತಟದ ಬಂಕರ್

ನ್ಯೂಕ್ಲಿಯರ್ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಿದ್ದ ಬಂಕರ್ ಗಳು ನೀರು ಪಾಲು: ಸಮುದ್ರ ಮಟ್ಟ ಏರಿಕೆ ಕಾರಣ!

ಹಿಂದೆ ಅಲ್ಬೇನಿಯಾ ಅಮೆರಿಕ ಮತ್ತು ರಷ್ಯಾ ದೇಶಗಳಿಂದ ದಾಳಿ ಭೀತಿಯನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ಅಲ್ಬೇನಿಯ ಸರ್ವಾಧಿಕಾರಿಯಾಗಿದ್ದ ಎನ್ವೆರ್ ಹೋಕ್ಸಾ ತಮ್ಮ ದೇಶದ ಮೇಲೆ ಅಮೆರಿಕ ಪರಮಾಣು ದಾಳಿ ನಡೆಸಿ ನೆಲವನ್ನು ವಶಪಡಿಸಿಕೊಳ್ಳುವ ಆತಂಕ ವ್ಯಕ್ತಪಡಿಸಿದ್ದರು.  

ಸೇಮನ್: ಅಲ್ಬೇನಿಯ ದೇಶದಲ್ಲಿ ಕಮ್ಯುನಿಸ್ಟ್ ಕಾಲದಲ್ಲಿ ನ್ಯೂಕ್ಲಿಯರ್ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಾಣಗೊಂಡಿದ್ದ ಬಂಕರ್ ಗಳು ಸಮುದ್ರ ಪಾಲಾಗಿವೆ. 

ಈ ಹಿಂದೆ ಅಲ್ಬೇನಿಯಾ ಅಮೆರಿಕ ಮತ್ತು ರಷ್ಯಾ ದೇಶಗಳಿಂದ ದಾಳಿ ಭೀತಿಯನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ಅಲ್ಬೇನಿಯ ಸರ್ವಾಧಿಕಾರಿಯಾಗಿದ್ದ ಎನ್ವೆರ್ ಹೋಕ್ಸಾ ತಮ್ಮ ದೇಶದ ಮೇಲೆ ಅಮೆರಿಕ ಪರಮಾಣು ದಾಳಿ ನಡೆಸಿ ನೆಲವನ್ನು ವಶಪಡಿಸಿಕೊಳ್ಳುವ ಆತಂಕ ವ್ಯಕ್ತಪಡಿಸಿದ್ದರು. 

ಆ ಸಮಯದಲ್ಲಿ ಪರಮಾಣು ದಾಳಿಯಿಂದ ಬಚಾವಾಗಲು ಬಂಕರ್ ಗಳನ್ನು ನಿರ್ಮಿಸಲಾಗಿತ್ತು. ಕಾಲಕ್ರಮೇಣ ಶಿಥಿಲಗೊಂಡ ಈ ಬಂಕರ್ ಗಳು ಸಮುದ್ರಪಾಲಾಗಿವೆ. ಅಡ್ರಿಯಾಟಿಕ್ ಸಮುದ್ರ 800 ಮೀಟರುಗಳಷ್ಟು ಮುಂದಕ್ಕೆ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ನಿರ್ಮಾಣಗೊಳ್ಳುವ ಸಮಯದಲ್ಲಿ ಸಮುದ್ರ ಪ್ರದೇಶ ಬಂಕರ್ ಗಳಿಂದ ದೂರವೇ ಇತ್ತು. ಆದರೆ ಜಾಗತಿಕ ಹವಾಮಾನ ಬದಲಾವಣೆ, ತಾಪಮಾನ ಏರಿಕೆಯಿಂದಾಗಿ ಸಮುದ್ರ ನೀರಿನ ಮಟ್ಟ ಏರಿಕೆಯಾಗಿದ್ದು ಬಂಕರ್ ಗಳು ಸಮುದ್ರ ಪಾಲಾಗಲು ಕಾರಣವಾಗಿವೆ.  

Related Stories

No stories found.

Advertisement

X
Kannada Prabha
www.kannadaprabha.com