ಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ ಹರ್ಷ: ಮಾರ್ಷಲ್ ಆರ್ಟ್ ನಲ್ಲಿ ವಿಶೇಷ ಸಾಧನೆ

ಸಮಾಜದ ಕಟ್ಟುಪಾಡುಗಳನ್ನು ಬದಿಗೊತ್ತಿ ಮೈಸೂರಿನ 30 ವರ್ಷದ ಮಹಿಳೆಯೊಬ್ಬರು ಮಾರ್ಷಲ್ ಆರ್ಟ್(ಸಮರ ಕಲೆ) ನಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಮೈಸೂರು ಮೂಲದ ಕಿಕ್ ಬಾಕ್ಸಿಂಗ್ ರಾಷ್ಟ್ರೀಯ ಪದಕ ವಿಜೇತೆ ಮತ್ತು ಕೋಚ್ ಆಗಿರುವ ಪೂಜಾ ಹರ್ಷ ತಾವು ಸಾಧನೆ ಮಾಡಿ ತೋರಿಸಿರುವುದಲ್ಲದೆ ಇಂದಿನ ಮಕ್ಕಳು ಮತ್ತು ಯುವಜನತೆಯನ್ನು ಕ್ರೀಡಾ ಕ್ಷೇತ್ರಕ್ಕೆ ತರಲು ಪ್ರಯತ್ನಿಸುತ್ತಿದ್ದಾರ
ಮೈಸೂರಿನಲ್ಲಿ ನಡೆದಿದ್ದ ಮೊದಲ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್
ಮೈಸೂರಿನಲ್ಲಿ ನಡೆದಿದ್ದ ಮೊದಲ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್

ಮೈಸೂರು: ಸಮಾಜದ ಕಟ್ಟುಪಾಡುಗಳನ್ನು ಬದಿಗೊತ್ತಿ ಮೈಸೂರಿನ 30 ವರ್ಷದ ಮಹಿಳೆಯೊಬ್ಬರು ಮಾರ್ಷಲ್ ಆರ್ಟ್(ಸಮರ ಕಲೆ) ನಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಮೈಸೂರು ಮೂಲದ ಕಿಕ್ ಬಾಕ್ಸಿಂಗ್ ರಾಷ್ಟ್ರೀಯ ಪದಕ ವಿಜೇತೆ ಮತ್ತು ಕೋಚ್ ಆಗಿರುವ ಪೂಜಾ ಹರ್ಷ ತಾವು ಸಾಧನೆ ಮಾಡಿ ತೋರಿಸಿರುವುದಲ್ಲದೆ ಇಂದಿನ ಮಕ್ಕಳು ಮತ್ತು ಯುವಜನತೆಯನ್ನು ಕ್ರೀಡಾ ಕ್ಷೇತ್ರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ಪೂಜಾ ಅವರು 8 ವರ್ಷದ ಚಿಕ್ಕ ಹುಡುಗಿಯಾಗಿದ್ದಾಗ ಜಾಕಿ ಚಾನ್ ಅಥವಾ ಇತರರ ಆಕ್ಷನ್ ಮೂವಿಗಳನ್ನು ನೋಡಿ ತಾನು ಕಿಕ್ ಬಾಕ್ಸರ್ ಮತ್ತು ಕೋಚ್ ಆಗುತ್ತೇನೆ ಎಂದು ಭಾವಿಸಿಯೇ ಇರಲಿಲ್ಲವಂತೆ. ಇಂದು ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ನ ರಾಜ್ಯ ಮುಖ್ಯಸ್ಥೆ ಮತ್ತು ವಾಕೊ(WAKO) ವಾಕೊ ಭಾರತ ಮಹಿಳಾ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ.

ಹರಿ ಮತ್ತು ಜಾನಕಿ ದಾಸ್ ದಂಪತಿಯ ಏಕೈಕ ಪುತ್ರಿ ಪೂಜಾ ಅವರನ್ನು ಮನೆಯಲ್ಲಿ ಎಂದಿಗೂ ಹೆಣ್ಣು ಮಗು ಎಂದು ತಿರಸ್ಕಾರದಿಂದ ನೋಡಿರಲಿಲ್ಲವಂತೆ. ನನ್ನ ತಂದೆ ಒಬ್ಬ ಮಾರ್ಷಲ್ ಆರ್ಟ್ ಪ್ರೇಮಿ. ಅವರಿಂದಾಗಿ ನನಗೆ ಈ ಕಲೆ ಬಂತು. ಅವರು ನನ್ನನ್ನು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎಬ್ಬಿಸಿ 8 ಕಿಲೋ ಮೀಟರ್ ಕಾಲ್ನಡಿಗೆ ನಡೆಸಿ ಕರಾಟೆ ತರಗತಿಗೆ ಕರೆದುಕೊಂಡು ಹೋಗುತ್ತಿದ್ದರು. ಯಾವ ತರಗತಿಗೂ ತಪ್ಪಿಸಲು ಬಿಡುತ್ತಿರಲಿಲ್ಲ. ಆರಂಭದಲ್ಲಿ ತಂದೆಯವರು ಈ ರೀತಿ ಕಟ್ಟುನಿಟ್ಟು ಮಾಡುತ್ತಿದ್ದುದು ಕಷ್ಟವಾಗುತ್ತಿತ್ತು, ನಿಧಾನವಾಗಿ ನನಗೆ ಅದು ಹೊಂದಿಕೆಯಾಗಿ ಇಷ್ಟವಾಯಿತು, ಎರಡು ವರ್ಷಗಳಲ್ಲಿ ಕರಾಟೆ ಟೂರ್ನಮೆಂಟ್ ಗೆ ಸಿದ್ಧಳಾದೆ ಎನ್ನುತ್ತಾರೆ ಪೂಜಾ.

ಬೆಂಗಳೂರಿನಲ್ಲಿ ಕರಾಟೆಯ ಮೊದಲ ಪಂದ್ಯದಲ್ಲಿ ಪೂಜಾ ಗೆದ್ದಿರಲಿಲ್ಲವಂತೆ. ಆದರೆ ಸೋಲು ಅವರನ್ನು ಗಟ್ಟಿ ಮಾಡಿತು. ಮುಂದಿನ ಎರಡು ದಶಕಗಳಲ್ಲಿ ರಾಜ್ಯವನ್ನು ಅವರು 60ಕ್ಕೂ ಹೆಚ್ಚು ಬಾರಿ ಪ್ರತಿನಿಧಿಸಿದ್ದಾರೆ. 43 ಚಿನ್ನ, 28 ಬೆಳ್ಳಿ ಮತ್ತು 19 ಕಂಚಿನ ಪದಕ ಗೆದ್ದು ತಂದಿದ್ದಾರೆ. ಪೂಜಾ 14 ಬಾರಿ ನ್ಯಾಷನಲ್ ಚಾಂಪಿಯನ್ ಆಗಿದ್ದಾರೆ.

ಪೂಜಾ ಅವರ ಸಹಪಾಠಿಗಳು ಕಿಕ್ ಬಾಕ್ಸಿಂಗ್ ನ್ನು ತಿರಸ್ಕರಿಸಿದ್ದರೆ, ಪೂಜಾ ಮಾತ್ರ ಅವರ ಪತಿ ಏಷ್ಯನ್ ಕಂಚಿನ ಪದಕ ಗೆದ್ದಿರುವ, ಅಕಾಡೆಮಿ ಆಫ್ ಸೆಲ್ಫ್ ಡಿಫೆನ್ಸ್(ASD) ಮುಖ್ಯ ಕೋಚ್ ಆಗಿರುವ ಹರ್ಷ ಅವರಿಂದ ಪ್ರೇರಣೆ ಪಡೆದು ಕಷ್ಟಪಟ್ಟು ಕಲಿತು ಇಂದು ಈ ಸ್ಥಾನಕ್ಕೆ ಬಂದಿದ್ದಾರೆ.

ಕೆಲವೇ ವರ್ಷಗಳಲ್ಲಿ, ಅವರು ರಾಷ್ಟ್ರೀಯ ಮಟ್ಟಕ್ಕೆ ಪ್ರವೇಶಿಸಿದರು. WAKO ಅಡಿಯಲ್ಲಿ K1 ಶೈಲಿಯಲ್ಲಿ ಕಪ್ಪು ಬೆಲ್ಟ್ ಎರಡನೇ ಪದವಿಯನ್ನು ಪಡೆದ ಕರ್ನಾಟಕದ ಮೊದಲ ಮಹಿಳೆಯಾಗಿದ್ದಾರೆ. ಮೈಸೂರಿನಲ್ಲಿ ಪ್ರತಿಭಾವಂತರ ದೊಡ್ಡ ಗುಂಪಿಗೆ ತರಬೇತಿ ನೀಡಿದ ಅವರು ರಿಂಗ್ ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ತೀರ್ಪುಗಾರರಾದರು. ಕ್ರೀಡಾ ಸಮಿತಿಯಲ್ಲಿ WAKO ವರ್ಲ್ಡ್ ಮಹಿಳೆಯರಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ ಮತ್ತು ಸದಸ್ಯರಾಗಿ ಆಯ್ಕೆಯಾದ ಮೊದಲಿಗರು. ಅವರು ಪ್ರಸ್ತುತ WAKO ಇಂಡಿಯಾ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

"ಇದು ನನ್ನ ಕನಸಾಗಿದ್ದು, ಅದನ್ನು ಸಾಧಿಸಲು ನಾನು ಎಂಟು ವರ್ಷಗಳ ಕಾಲ ಹೋರಾಡಿದೆ. ನನ್ನ ಎರಡೂವರೆ ದಶಕಗಳ ಸಮರ ಕಲೆಗಳ ಪಯಣದಲ್ಲಿ ಇದು ದೊಡ್ಡ ಸಾಧನೆಯಾಗಿದೆ. ನನ್ನ ಗುರು ಸಂತೋಷ್ ಅಗರ್ವಾಲ್ ಅವರಿಗೆ ನಾನು ಋಣಿಯಾಗಿದ್ದೇನೆ ಎನ್ನುತ್ತಾರೆ.

ಎರಡನೇ ಕೋವಿಡ್ ಲಾಕ್‌ಡೌನ್‌ಗೆ ಕೇವಲ ಎರಡು ವಾರಗಳ ಮೊದಲು ಅವರು ಕರ್ನಾಟಕ ವಾಕೊ ಮುಖ್ಯಸ್ಥರಾಗಿ, ಲಾಕ್‌ಡೌನ್ ಸಮಯದಲ್ಲಿ ಅವರು ತಂಡವನ್ನು ರಚಿಸಿದರು. ಕಿಕ್‌ಬಾಕ್ಸಿಂಗ್ ಬಗ್ಗೆ ಜನರಿಗೆ ಶಿಕ್ಷಣ ನೀಡಲು ನೂರಾರು ಫೋನ್ ಕರೆಗಳನ್ನು ಮಾಡಿದರು, ವರ್ಚುವಲ್ ಸಭೆಗಳನ್ನು ನಡೆಸಿದರು. ಅವರು ಕರ್ನಾಟಕದ 18 ಜಿಲ್ಲೆಗಳಲ್ಲಿ ಕಿಕ್ ಬಾಕ್ಸಿಂಗ್ ಅನ್ನು ಪರಿಚಯಿಸುವಲ್ಲಿ ಯಶಸ್ವಿಯಾದರು.

ಇತ್ತೀಚೆಗೆ ಗೋವಾದಲ್ಲಿ ನಡೆದ WAKO ಇಂಡಿಯಾ ಸೀನಿಯರ್ಸ್ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಕರ್ನಾಟಕದ 103 ಕಿಕ್‌ ಬಾಕ್ಸರ್‌ಗಳ ದೊಡ್ಡ ತಂಡವನ್ನು ಮುನ್ನಡೆಸಿದರು, ಅಲ್ಲಿ ಹದಿನೆಂಟನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕಿಕ್ ಬಾಕ್ಸಿಂಗ್ ಅನ್ನು ಪರಿಚಯಿಸಿದ್ದಾರೆ. ಮೈಸೂರು ಮತ್ತು ಬೆಂಗಳೂರಿನ 16 ಶಾಲೆಗಳಲ್ಲಿ ಕಲಿಸುತ್ತಿದ್ದಾರೆ. ಲಿಂಗ ಸಮಸ್ಯೆಗಳು ಸಮರ ಕಲೆಗಳನ್ನು ತೆಗೆದುಕೊಳ್ಳದಂತೆ ಮಹಿಳೆಯರನ್ನು ನಿರುತ್ಸಾಹಗೊಳಿಸಿವೆ. ಮಹಿಳೆಯರು ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಉಳಿಸಿಕೊಳ್ಳಲು ಅಪಾರ ಶಕ್ತಿ ಗಳಿಸಲು ಇದು ಉತ್ತಮ ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com