ಆಹಾರ ತ್ಯಾಜ್ಯದಿಂದ ಅಡುಗೆ ಅನಿಲ: ಜಾರ್ಖಂಡ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಈ ಬಯೊ ಗ್ಯಾಸ್ ಪ್ಲ್ಯಾಂಟ್ ಕಾರ್ಯಾರಂಭಗೊಂಡಿದ್ದು ದಿನಕ್ಕೆ 100 ಕೆ.ಜಿ ಆಹಾರ ತ್ಯಾಜ್ಯವನ್ನು 8 ಕೆ.ಜಿ ಅಡುಗೆ ಅನಿಲವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.
ಬಯೊ ಗ್ಯಾಸ್ ಪ್ಲ್ಯಾಂಟು
ಬಯೊ ಗ್ಯಾಸ್ ಪ್ಲ್ಯಾಂಟು

ರಾಂಚಿ: ಬಿರ್ಲಾ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಸಂಗ್ರಹವಾಗಿ ತೊಟ್ಟಿ ಸೇರುತ್ತಿದ್ದ ಆಹಾರ ತ್ಯಾಜ್ಯದಿಂದ ಅಡುಗೆ ಅನಿಲವಾಗಿ ಬಳಸಬಹುದಾದ ಬಯೋ ಗ್ಯಾಸ್ ಅನ್ನು ಆವಿಷ್ಕರಿಸಿದ್ದಾರೆ.

ಒಂದು ವರ್ಷದ ಹಿಂದೆಯೇ ಈ ಪ್ರಾಜೆಕ್ಟ್ ಪ್ರಾರಂಭಗೊಂಡಿತ್ತು. ಇದೀಗ ಈ ಬಯೊ ಗ್ಯಾಸ್ ಪ್ಲ್ಯಾಂಟ್ ಕಾರ್ಯಾರಂಭಗೊಂಡಿದ್ದು ದಿನಕ್ಕೆ 100 ಕೆ.ಜಿ ಆಹಾರ ತ್ಯಾಜ್ಯವನ್ನು 8 ಕೆ.ಜಿ ಅಡುಗೆ ಅನಿಲವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.

ಮುಂದಿನ ದಿನಗಳಲ್ಲಿ ಇದೇ ಮಾದರಿಯ ಬಯೊ ಗ್ಯಾಸ್ ಪ್ಲ್ಯಾಂಟುಗಳನ್ನು ಇತರೆ ಕಾಲೇಜುಗಳ ಹಾಸ್ಟೆಲ್ಲುಗಳಲ್ಲಿಯೂ ಸ್ಥಾಪಿಸುವ ಇರಾದೆಯನ್ನು ವಿದ್ಯಾರ್ಥಿಗಳ ತಂಡ ಹೊಂದಿದೆ.

ಅಲ್ಲದೆ ಈ ಪ್ರಾಜೆಕ್ಟ್ ಅನ್ನು ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸದೆ ನವೀಕೃತ ಇಂಧನ ಕ್ಷೇತ್ರಕ್ಕೂ ಪರಿಚಯಿಸುವುದಾಗಿ ಬಿರ್ಲಾ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com