ದೇವರ ನಾಡಲ್ಲಿ ಗಜರಾಜನಿಗೆ ಪುನರ್ವಸತಿ ಕೇಂದ್ರ: ಆನೆಗಳಿಗೆ ಮಾರ್ನಿಂಗ್ ವಾಕ್ ಮತ್ತು ಉತ್ಕೃಷ್ಟ ಆಹಾರ

ಕಾಯಿಲೆ ಬಿದ್ದ ಮನುಷ್ಯರಿಗೆ ರಿಫ್ರೆಷ್ ಆಗಲು ಪುನರ್ವಸತಿ ಕೇಂದ್ರ, ವಿಶ್ರಾಂತಿ ಧಾಮಗಳೆಂದು ಹಲವು ಸೌಲಭ್ಯಗಳುಂಟು. ಆದರೆ ಅವೆಲ್ಲಾ ಪುನರ್ವಸತಿ ಕೇಂದ್ರಗಳಿಗಿಂತ ಕೇರಳದ ಎಂ.ಆರ್ ಪಾಳಯಂನಲ್ಲಿನ ಪುನರ್ವಸತಿ ಕೇಂದ್ರ ವಿಭಿನ್ನವಾದುದು. ಏಕೆಂದರೆ ಇದು ಆನೆಗಳಿಗೆ ಮೀಸಲು.
ಪುನರ್ವಸತಿ ಕೇಂದ್ರದಲ್ಲಿ ಆನೆಗಳು
ಪುನರ್ವಸತಿ ಕೇಂದ್ರದಲ್ಲಿ ಆನೆಗಳು

ತಿರುಚ್ಚಿ: ಕಾಯಿಲೆ ಬಿದ್ದ ಮನುಷ್ಯರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಿದ್ದ ನಂತರ ರಿಫ್ರೆಷ್ ಆಗಲು ಪುನರ್ವಸತಿ ಕೇಂದ್ರ, ವಿಶ್ರಾಂತಿ ಧಾಮಗಳೆಂದು ಹಲವು ಸೌಲಭ್ಯಗಳುಂಟು. ಆದರೆ ಅವೆಲ್ಲಾ ಪುನರ್ವಸತಿ ಕೇಂದ್ರಗಳಿಗಿಂತ ಕೇರಳದ ಎಂ.ಆರ್ ಪಾಳಯಂನಲ್ಲಿನ ಪುನರ್ವಸತಿ ಕೇಂದ್ರ ವಿಭಿನ್ನವಾದುದು. ಏಕೆಂದರೆ ಇದು ಆನೆಗಳಿಗಾಗಿಯೇ ಇರುವ ಪುನರ್ವಸತಿ ಕೇಂದ್ರ.

ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಆನೆಗಳಿಗೆ ಪೂಜ್ಯನೀಯ ಸ್ಥಾನವಿದೆ. ಅಲ್ಲಿನ ದೇವಾಲಯಗಳಲ್ಲಿಯೂ ಕಂಡುಬರುವ ಆನೆಗಳಿಗೆ ಭಕ್ತಾದಿಗಳು ನಮಸ್ಕರಿಸಿ ಒಳಕ್ಕೆ ತೆರಳುತ್ತಾರೆ. 

ಕಾಯಿಲೆ ಬಿದ್ದ ಆನೆಗಳಿಗೆ ಚಿಕಿತ್ಸಾಧಾಮವಾಗಿಯೂ, ವಿಶ್ರಾಂತಿಧಾಮವಾಗಿಯೂ ಈ ಎಂ.ಆರ್ ಪಾಳಯಂ ಪುನರ್ವಸತಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ತೂಕದ ಸಮಸ್ಯೆ, ಕಣ್ಣಿನ ಕಾಟರಾಕ್ಟ್ ಸಮಸ್ಯೆ ಮತ್ತಿತರ ವಯೋಸಹಜ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 6ಕ್ಕೆ ಆನೆಗಳ ದಿನ ಪ್ರಾರಂಭವಾಗುತ್ತದೆ. ಮೊದಲಿಗೆ 10 ಕಿ.ಮೀ ವಾಕಿಂಗ್. ನಂತರ ಸ್ನಾನ. ಅದಕ್ಕಾಗಿ ಮಾವುತರಿದ್ದಾರೆ.

ಬೆಳಿಗ್ಗೆ ತಿಂಡಿ ನಂತರ ಪಶುವೈದ್ಯರು ಆನೆಗಳ ಆರೋಗ್ಯ ತಪಾಸಣೆ ಮಾಡುತ್ತಾರೆ. ಆನೆಗಳಿಗೆ ನೀಡುವ ಆಹಾರದ ಬಗ್ಗೆ ರಾಜ್ಯ ಅರಣ್ಯ ಇಲಾಖೆ ತೀವ್ರ ಮುತುವರ್ಜಿ ವಹಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com