
ಲಂಡನ್: ಅಪರೂಪರ ಘಟನೆಯೊಂದರಲ್ಲಿ ಇಂಗ್ಲೆಂಡಿನ ಪೂರ್ವ ಕರಾವಳಿಯ ಜನರು ಅಚ್ಚರಿ ವಿದ್ಯಮಾನಕ್ಕೆ ಸಾಕ್ಷಿಯಾದರು. ಎಸೆಕ್ಸ್, ನಾರ್ಫಾಕ್ ಮತ್ತು ಸಫಾಕ್ ನಗರಗಳ ಜನರು ಬಿಳಿ ಬಣ್ಣದ ಕಾಮನಬಿಲ್ಲನ್ನು ಕುತೂಹಲದಿಂದ ನೋಡಿದ್ದಾರೆ.
ಇದನ್ನೂ ಓದಿ: ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ
ಬಿಳಿ ಬಣ್ಣದ ಕಾಮನಬಿಲ್ಲಿಗೆ ವೈಜ್ನಾನಿಕ ವಿವರಣೆಯೂ ಇದೆ. ಮಂಜಿನ ಕಣಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಈ ಬಗೆಯ ಕಾಮನಬಿಲ್ಲು ನಿರ್ಮಾಣವಾಗುತ್ತದೆ.
A lovely #fogbow at the #fog margin on the #Cotswold hills this morning! @UKWX_ @ScottDuncanWX @liamdutton pic.twitter.com/A1qduQruPb
— Oskar Brennan (@Oskar_Brennan) December 19, 2021
ಮಂಜಿನ ಕಣಗಳು ಮಸುಕಾದ ಹಬೆಯನ್ನು ಉಂಟುಮಾಡುವುದರಿಂದ ಕಾಮನಬಿಲ್ಲಿನ ಮಿಕ್ಕ ಬಣ್ಣಗಳು ಮರೆಯಾಗಿ ಬರೀ ಬಿಳಿ ಬಣ್ಣ ಮಾತ್ರವೇ ಕಾಣಿಸುತ್ತದೆ ಎಂದು ಪರಿಣತರು ಹೇಳಿದ್ದಾರೆ.
ಇದನ್ನೂ ಓದಿ: ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯ