ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯ
ಹಬ್ಬ ಹರಿದಿನಗಳಾಗಲಿ, ಶುಭ ದಿನಗಳ ಸಮಯದಲ್ಲೇ ಅಗಲಿ ಒಂದಷ್ಟು ಮಂದಿಗೆ ಮನೆಯೂಟ ಬಡಿಸಿದರೆ ನಾವು ಸಂತೃಪ್ತರಾಗುತ್ತೇವೆ. ಅಂಥದ್ದರಲ್ಲಿ ಆಂಧ್ರದ ನೆಲ್ಲೂರಿನ ವಿಜಯ್- ರಾಜ್ಯಲಕ್ಷ್ಮಿ ದಂಪತಿ ಪ್ರತಿನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಊಟದ ಮೆನು ಪಾರ್ಲೆ ಜಿ ಬಿಸ್ಕತ್ತಿನಿಂದ ಶುರುವಾಗಿ, ಹುಲ್ಲು, ಚಿಕನ್ ಕರ್ರಿ ತನಕ ವೈವಿಧ್ಯಮಯ.
Published: 13th December 2021 04:38 PM | Last Updated: 13th December 2021 05:00 PM | A+A A-

ಸಾಂದರ್ಭಿಕ ಚಿತ್ರ
ನೆಲ್ಲೂರು: ಕಷ್ಟಕಾಲದಲ್ಲಿ ಅಸಹಾಯಕರಿಗೆ, ನಿರ್ಗತಿಕರಿಗೆ ನೆರವಾಗುವುದು ಮಾನವಶ್ರೇಷ್ಠ ಗುಣ. ಮಾನವೀಯತೆ ಎಂದು ಕರೆಯುವುದು ಅದನ್ನೇ. ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪೀಡಿತ ಪ್ರದೇಶಕ್ಕೆ ದೇಶದ ಮೂಲೆ ಮೂಲೆಗಳಿಂದ ನೆರವು ಹರಿದುಬರುತ್ತದೆ. ಆಹಾರ ಪದಾರ್ಥಗಳಿಂದ, ದಿನಬಳಕೆಯ ವಸ್ತುಗಳ ತನಕ ವಸ್ತುಗಳು ಸರಬರಾಜಾಗುತ್ತವೆ.
ಇದನ್ನೂ ಓದಿ: ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಕಪ್ಪೆಗಳ ಹಬ್ಬ ಆಯೋಜನೆ

ಅದೇನೋ ಸರಿ, ಆಂದ್ರಪ್ರದೇಶದ ನೆಲ್ಲೂರಿನ ದಂಪತಿ ಅದಕ್ಕೂ ಮಿಗಿಲಾದ ಸೇವೆಯಲ್ಲಿ ನಿರತರಾಗಿದ್ದಾರೆ. ಮೂಕ ಪ್ರಾಣಿಗಳ ಹೊಟ್ಟೆ ತಣಿಸುವ ಪುಣ್ಯಕಾರ್ಯದಲ್ಲಿ ವಿಜಯ್- ರಾಜ್ಯಲಕ್ಷ್ಮಿ ದಂಪತಿ ದಶಕಗಳಿಂದ ತೊಡಗಿದ್ದಾರೆ.
ಇದನ್ನೂ ಓದಿ: ಭೂಮಿಯಡಿ ಸಿಲುಕಿದ ಗಣಿಕಾರ್ಮಿಕರು: 22 ಗಂಟೆಗಳ ಕಾಲ ಮಣ್ಣು ಅಗೆದು ಸ್ವಪ್ರಯತ್ನದಿಂದ ಸಮಾಧಿಯಿಂದ ಮೇಲೆದ್ದು ಬಂದರು
ಕೇಬಲ್ ಆಪರೇಟರ್ ಆಗಿರುವ ವಿಜಯ್ ಪ್ರತಿದಿನ 500 ರೂ.ಗಳನ್ನು ಪ್ರಾಣಿಗಳ ಹೊಟ್ಟೆ ತುಂಬಿಸಲು ವ್ಯಯ ಮಾಡುತ್ತಿದ್ದಾರೆ. 17 ವರ್ಷದ ಪುತ್ರಿ ಕೂಡಾ ಅವರಿಗೆ ನೆರವು ನೀಡುತ್ತಾರೆ. ಹೀಗೆೀ ಕುಟುಂಬ ಮೂಕಪ್ರಾಣಿಗಳಿಗೆ ತಮ್ಮ ಕೈಲಾದಷ್ಟು ಆಹಾರ ಒದಗಿಸುವ ಮಹತ್ ಕಾರ್ಯದಲ್ಲಿ ತೊಡಗಿದೆ. ಊಟದ ಮೆನು ಪಾರ್ಲೆ ಜಿ ಬಿಸ್ಕತ್ತಿನಿಂದ ಶುರುವಾಗಿ, ಹುಲ್ಲು, ಚಿಕನ್ ಕರ್ರಿ ತನಕ ವೈವಿಧ್ಯಮಯ ಎನ್ನುವುದು ಕುತೂಹಲದ ಸಂಗತಿ.
ಇದನ್ನೂ ಓದಿ: ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್
ನಾಯಿ, ದನಗಳು, ಪಕ್ಷಿಗಳು, ಕೋತಿ ಹೀಗೆ ಬೀದಿಯಲ್ಲಿ ಕಂಡು ಬರುವ ಪ್ರಾಣಿಗಳಿ ಈ ದಂಪತಿಗಳ ಕೈರುಚಿಯನ್ನು ಸವಿದಿವೆ. ಹಬ್ಬ ಹರಿದಿನಗಳಾಗಲಿ, ಶುಭ ದಿನಗಳ ಸಮಯದಲ್ಲೇ ಅಗಲಿ ಒಂದಷ್ಟು ಮಂದಿಗೆ ಮನೆಯೂಟ ಬಡಿಸಿದರೆ ನಾವು ಸಂತೃಪ್ತರಾಗುತ್ತೇವೆ. ಅಂಥದ್ದರಲ್ಲಿ ವಿಜಯ್- ರಾಜ್ಯಲಕ್ಷ್ಮಿ ದಂಪತಿ ಪ್ರತಿನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯ 1 ರೂಪಾಯಿ ಭಿಕ್ಷುಕನ ಅಂತ್ಯಕ್ರಿಯೆಗೆ 4 ಸಾವಿರಕ್ಕೂ ಹೆಚ್ಚು ಜನ!
ಈ ಗುಣ ಎಲ್ಲಿಂದ ಬಂತು ಎಂದು ಕೇಳಿದಾಗ ವಿಜಯ್ ಅವರ ತಂದೆಯನ್ನು ನೆನೆಯುತ್ತಾರೆ. ಅವರು ಬದುಕಿದ್ದಷ್ಟೂ ದಿನ ಬೀದಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಅದನ್ನು ತಾವು ಮುಂದುವರಿಸಿಕೊಂಡು ಬರುತ್ತಿರುವುದಾಗಿ ವಿಜಯ್ ಭಾವುಕರಾಗುತ್ತಾರೆ. ಈ ಕೆಲಸದಿಂದ ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ ಎನ್ನುವುದು ದಂಪತಿಯ ಅಭಿಪ್ರಾಯ.
ಇದನ್ನೂ ಓದಿ: ಕೋಟಿ ಕೋಟಿ ಬೆಲೆಯ ದುಬಾರಿ ಮೀನು: ನೋಡೋದಕ್ಕೆ ಜನ ಜಂಗುಳಿ; ಈ ಮೀನು ಹಿಡಿದರೆ ಜೈಲೇ ಗತಿ!