ಭಿಕ್ಷುಕ ಬಸಪ್ಪ ಅಲಿಯಾಸ್ ಹುಚ್ಚ ಬಶ್ಯ (ಸಂಗ್ರಹ ಚಿತ್ರ)
ಭಿಕ್ಷುಕ ಬಸಪ್ಪ ಅಲಿಯಾಸ್ ಹುಚ್ಚ ಬಶ್ಯ (ಸಂಗ್ರಹ ಚಿತ್ರ)

ಬಳ್ಳಾರಿಯ 1 ರೂಪಾಯಿ ಭಿಕ್ಷುಕನ ಅಂತ್ಯಕ್ರಿಯೆಗೆ 4 ಸಾವಿರಕ್ಕೂ ಹೆಚ್ಚು ಜನ!

ತಬ್ಬಲಿಯಾಗಿ ಬೆಳೆದ ವ್ಯಕ್ತಿ ಆತ. ಬಸ್ ನಿಲ್ದಾಣದ ಹತ್ತಿರವಿರುವ ಸಣ್ಣ ಶೆಡ್ ಕಳೆದ ನಾಲ್ಕು ದಶಕಗಳಿಂದ ಆತನ ಆಶ್ರಯ ತಾಣ. ಮಾನಸಿಕ ಅಸ್ವಸ್ಥನಾಗಿದ್ದ ಆತ ಜೀವನೋಪಾಯಕ್ಕೆ ಭಿಕ್ಷೆ ಬೇಡುತ್ತಿದ್ದ. ರಸ್ತೆ ಅಪಘಾತವೊಂದರಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ ಆತನ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದ್ದರು. 
Published on

ಹುಬ್ಬಳ್ಳಿ: ತಬ್ಬಲಿಯಾಗಿ ಬೆಳೆದ ವ್ಯಕ್ತಿ ಆತ. ಬಸ್ ನಿಲ್ದಾಣದ ಹತ್ತಿರವಿರುವ ಸಣ್ಣ ಶೆಡ್ ಕಳೆದ ನಾಲ್ಕು ದಶಕಗಳಿಂದ ಆತನ ಆಶ್ರಯ ತಾಣ. ಮಾನಸಿಕ ಅಸ್ವಸ್ಥನಾಗಿದ್ದ ಆತ ಜೀವನೋಪಾಯಕ್ಕೆ ಭಿಕ್ಷೆ ಬೇಡುತ್ತಿದ್ದ. ರಸ್ತೆ ಅಪಘಾತವೊಂದರಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ ಆತನ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದ್ದರು. 

ಬಸಪ್ಪ ಅಲಿಯಾಸ್ ಹುಚ್ಚ ಬಶ್ಯ ಬಳ್ಳಾರಿಯ ಹೂವಿನ ಹಡಗಲಿ ಬಸ್ ನಿಲ್ದಾಣದ ಸುತ್ತಮುತ್ತ ಜನರಿಗೆ ಜನಪ್ರಿಯ. ಭಿಕ್ಷುಕನಾದರೂ ಈತ ಏಕೆ ಅಷ್ಟು ಜನಪ್ರಿಯನೆಂದರೆ ಜನರಲ್ಲಿ ಇವನು ಕೇಳುತ್ತಿದ್ದುದು ಕೇವಲ ಒಂದು ರೂಪಾಯಿ ಭಿಕ್ಷೆ. ಯಾರ ಬಳಿಯಿಂದಲೂ ಅದಕ್ಕಿಂತ ಹೆಚ್ಚು ಹಣ ಕೇಳುತ್ತಿರಲಿಲ್ಲ. ಆತ ಎಲ್ಲಿಂದ ಬಂದವನು ಎಂದು ಯಾರಿಗೂ ಗೊತ್ತಿಲ್ಲ, ಸ್ಥಳೀಯರಿಗೆ ಮಾತ್ರ ಆತನೆಂದರೆ ಅಚ್ಚುಮೆಚ್ಚು.

ಯುವಕನಾಗಿದ್ದಾಗಿನಿಂದಲೇ ಬಸಪ್ಪ ಹೂವಿನ ಹಡಗಲಿ ಪಟ್ಟಣದಲ್ಲಿ ಭಿಕ್ಷೆ ಬೇಡುತ್ತಿದ್ದ. ಈಗ ಆತನಿಗೆ 40ರಿಂದ 45 ವರ್ಷ ವಯಸ್ಸಾಗಿರಬಹುದು. ಸ್ಥಳೀಯರು ಆತನಿಗೆ ಆಗಾಗ ಊಟ-ತಿಂಡಿ ನೀಡುತ್ತಿದ್ದರು. ಸಾಯುವಲ್ಲಿಯವರೆಗೂ ಆತನಿಗೆ ಒಂದು ಆಶ್ರಯ ಸಿಗಲಿಲ್ಲ, ಸ್ಥಳೀಯರು ಅದಕ್ಕೆ ಅಧಿಕಾರಿಗಳ ಬಳಿ ಹೋಗಿ ಕೇಳುವ ಪ್ರಯತ್ನವನ್ನು ಬಿಟ್ಟುಬಿಟ್ಟಿದ್ದರು ಎಂದು ಹೂವಿನ ಹಡಗಲಿಯ ಶ್ರೀನಿವಾಸ್ ರೆಡ್ಡಿ ಹೇಳುತ್ತಾರೆ.

ವಾರದ ಹಿಂದೆ ಸರ್ಕಾರಿ ಬಸ್ಸು ಡಿಕ್ಕಿ ಹೊಡೆದು ಗಾಯವಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಮೂರು ದಿನಗಳ ಬಳಿಕ ನಿಧನನಾದನು. ಭಿಕ್ಷುಕನ ಸಾವು ಹೂವಿನ ಹಡಗಲಿ ಪಟ್ಟಣದಲ್ಲಿ ಸುದ್ದಿಯಾಗಿ ಜನರು ಆಸ್ಪತ್ರೆಯತ್ತ ಧಾವಿಸುತ್ತಿದ್ದರು. ಹಲವು ಸಂಘಟನೆಗಳ ಸದಸ್ಯರು, ಅಂಗಡಿ ಮಾಲೀಕರು, ವ್ಯಕ್ತಿಗಳು ಬಂದು ಭಿಕ್ಷುಕನ ಅಂತ್ಯಕ್ರಿಯೆಗೆ ಮುನ್ನ ಮೆರವಣಿಗೆ ಮಾಡಿ ನೆರವೇರಿಸಿದರು. ಅಂದಾಜಿನ ಪ್ರಕಾರ 3ರಿಂದ 4 ಸಾವಿರ ಜನರು ಬಸಪ್ಪನ ಅಂತ್ಯಕ್ರಿಯೆಗೆ ಸೇರಿದ್ದರಂತೆ.

ಒಂದು ಬಾರಿ ಬಸಪ್ಪ ತನ್ನ ಎಂದಿನ ಸ್ಥಳದಲ್ಲಿ ಇರಲಿಲ್ಲ. ಆಗ ಜನರು ಗಾಬರಿಗೊಂಡು ಹುಡುಕಲು ಆರಂಭಿಸಿದರು. ಕೊನೆಗೆ ಆತ ಬಸ್ ನಿಲ್ದಾಣದ ಶೆಡ್ ನಲ್ಲಿಯೇ ಇದ್ದ. ಪೊಲೀಸರು ಮತ್ತು ಇತರ ಇಲಾಖೆಯವರು ಬಸ್ ನಿಲ್ದಾಣಕ್ಕೆ ಬಂದು ಆತನಿಗೆ ಕಿರುಕುಳ ನೀಡುವುದನ್ನು ಸ್ಥಳೀಯರು ತಡೆಯುತ್ತಿದ್ದರು. ಚಿಕ್ಕವನಿದ್ದಾಗಲೇ ಬಸಪ್ಪ ತನ್ನೂರನ್ನು ಬಿಟ್ಟು ಬಂದಿದ್ದ. ಆತನಿಗೆ ಮಾನಸಿಕ ಸಮಸ್ಯೆಯಿದ್ದ ಕಾರಣ ಹೀಗೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಜನರು ಆತನಿಗೆ ದುಡ್ಡು ಕೊಟ್ಟಾಗ ಖುಷಿಯಿಂದ ಸ್ವೀಕರಿಸುತ್ತಿದ್ದ. ಯಾರಿಗೂ ತೊಂದರೆ ನೀಡುತ್ತಿರಲಿಲ್ಲ, ಹೂವಿನ ಹಡಗಲಿ ಪಟ್ಟಣದ ಜನರು ಈಗ ನಿಜಕ್ಕೂ ಆತನನ್ನು ಕಳೆದುಕೊಂಡ ಬೇಸರದಲ್ಲಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com