ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ

17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ. 
ಹೆತ್ತವರೊಂದಿಗೆ ಸ್ವೇಗಾ ಸ್ವಾಮಿನಾಥನ್
ಹೆತ್ತವರೊಂದಿಗೆ ಸ್ವೇಗಾ ಸ್ವಾಮಿನಾಥನ್

ಚೆನ್ನೈ: 17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ. 

ತಮಿಳುನಾಡಿನ ಈರೋಡ್ ಜಿಲ್ಲೆಯವರಾದ ಸ್ವೇಗಾ, ರೈತನ ಮಗಳು ಎನ್ನುವುದು ವಿಶೇಷ. ಅವರು ಶಿಕಾಗೊ ವಿವಿಯಲ್ಲಿ ಬ್ಯಾಚೆಲರ್ ಡಿಗ್ರಿ ವ್ಯಾಸಂಗ ಮಾಡಲು ಈ ಸ್ಕಾಲರ್ ಶಿಪ್ ಅವಕಾಶ ಒದಗಿಸಿದೆ.

ಸ್ವೇಗಾ ಅವರನ್ನು ಡೆಕ್ಸ್ಟೆರಿಟಿ ಗ್ಲೋಬಲ್ ಎನ್ನುವ ಸಂಸ್ಥೆ ಗುರುತಿಸಿ ಅವರಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡಿತ್ತು. ತಮ್ಮ ಸಾಧನೆಯನ್ನು ಸ್ವೇಗಾ ಡೆಕ್ಸ್ಟೆರಿಟಿ ಸಂಸ್ಥೆಯ ಸ್ಥಾಪಕರಾದ ಶರದ್ ಸಾಗರ್ ಅವರಿಗೆ ಅರ್ಪಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com