ಮಿಸ್ ಇಂಡಿಯಾ ರನ್ನರ್ ಆಪ್ ಮಾನ್ಯ ಸಿಂಗ್: ರಿಕ್ಷಾ ಚಾಲಕನ ಪುತ್ರಿಯ ಹೃದಯಸ್ಪರ್ಶಿ ಯಶೋಗಾಥೆ!

ರನ್ನರ್ ಆಫ್ ಮಾನ್ಯ ಸಿಂಗ್ ಪ್ರಯಾಣ ತುಂಬಾ ವಿಶೇಷವಾಗಿದ್ದು, ಆಕೆಯ ಗೆಲುವು ಅನೇಕರ ಗಮನ ಸೆಳೆದಿದೆ. ಮಾನ್ಯ ಸಿಂಗ್, ಉತ್ತರ ಪ್ರದೇಶದ ಕುಶಿನಗರದ ಆಟೋ ರಿಕ್ಷಾವೊಂದರ ಚಾಲಕರ ಪುತ್ರಿಯಾಗಿದ್ದಾರೆ. 
ಮಿಸ್ ಇಂಡಿಯಾ ರನ್ನರ್ ಆಪ್ ಮಾನ್ಯ ಸಿಂಗ್
ಮಿಸ್ ಇಂಡಿಯಾ ರನ್ನರ್ ಆಪ್ ಮಾನ್ಯ ಸಿಂಗ್

ಲಖೌನ್:  ಗುರುವಾರ ನಡೆದ ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ತೆಲಂಗಾಣದ ಎಂಜಿನಿಯರ್  ಮಾನಸ ವಾರಣಾಸಿ, ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟವನ್ನು ಮುಡಿಗೇರಿಸಿಕೊಂಡರೆ, ಹರಿಯಾಣದ ಮಾನಿಕಾ ಶಿಯೋಕಂಡ್ ವಿಎಲ್ ಸಿಸಿ ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ 2020 ಪ್ರಶಸ್ತಿ ಹಾಗೂ ಉತ್ತರ ಪ್ರದೇಶದ ಮಾನ್ಯ ಸಿಂಗ್ ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ರನ್ನರ್ ಆಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರನ್ನರ್ ಆಫ್ ಮಾನ್ಯ ಸಿಂಗ್ ಪ್ರಯಾಣ ತುಂಬಾ ವಿಶೇಷವಾಗಿದ್ದು, ಆಕೆಯ ಗೆಲುವು ಅನೇಕರ ಗಮನ ಸೆಳೆದಿದೆ. ಮಾನ್ಯ ಸಿಂಗ್, ಉತ್ತರ ಪ್ರದೇಶದ ಕುಶಿನಗರದ ಆಟೋ ರಿಕ್ಷಾವೊಂದರ ಚಾಲಕರ ಪುತ್ರಿಯಾಗಿದ್ದಾರೆ. 14ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ಸಿಂಗ್, ತುಂಬಾ ಕಷ್ಟ ಪಟ್ಟು, ತಮ್ಮ ಮಗಳನ್ನು ಅಲ್ಲಿಯವರೆಗೂ ತಲುಪಿಸುವ ಮೂಲಕ ಜನಸಾಮಾನ್ಯರಿಗೂ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ.

ಊಟ, ನಿದ್ರೆ ಇಲ್ಲದೆ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ. ಅನೇಕ ವೇಳೆಯಲ್ಲಿ ಮೈಲುಗಟ್ಟಲೇ ನಡೆಯುತ್ತಲೇ ಅನೇಕ ಮಧ್ಯಾಹ್ನಗಳನ್ನು ಕಳೆದಿದ್ದೇನೆ. ನನ್ನ ರಕ್ತ, ಬೆವರು, ಮತ್ತು ಕಣ್ಣೀರನಲ್ಲಿಯೇ ಧೈರ್ಯದಿಂದ ತನ್ನ ಕನಸನ್ನು ನನಸು ಮಾಡಿಕೊಂಡಿರುವುದಾಗಿ ಮಾನ್ಯ ಸಿಂಗ್ ಇನ್ಸಾಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ತಾನು ಧರಿಸುತ್ತಿದ್ದ ಬಟ್ಟೆಗಳೆಲ್ಲವೂ ಸೆಕೆಂಡ್ ಹ್ಯಾಂಡ್ ಬಟ್ಟೆಗಳು, ಪುಸ್ತಕಗಳಿಗಾಗಿ ಹಾತೂರೆಯುತ್ತಿದೆ. ಆದರೆ, ಅದೃಷ್ಟ ತನ್ನಗೆ ಇರಲಿಲ್ಲ ಎಂದು ಅವರು ಮಿಸ್ ಉತ್ತರ ಪ್ರದೇಶ ಪ್ರಶಸ್ತಿ ವಿಜೇತೆ ಹೇಳಿಕೊಂಡಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿಯೇ ಕೆಲಸ ಆರಂಭಿಸಿದ್ದರಿಂದ ಶಾಲೆಗೆ ಹಾಜರಾಗುತ್ತಿರಲಿಲ್ಲ. ನನ್ನ ತಾಯಿ ಆಭರಣ ಮಾರಿ ಪರೀಕ್ಷೆ ಶುಲ್ಕ ಕಟ್ಟಿದ್ದರಿಂದ ಡಿಗ್ರಿ ಪಡೆದುಕೊಂಡೆ. ನನಗಾಗಿ ತಮ್ಮ ತಾಯಿ ತುಂಬಾ ಕಳೆದುಕೊಂಡಿದ್ದಾರೆ. ಹೇಗೂ ಮಾಡಿ ವ್ಯಾಸಂಗ ಪೂರ್ಣಗೊಳಿಸಿದೆ. ಸಂಜೆ ವೇಳೆ ಪಾತ್ರೆ ತೊಳೆದು, ರಾತ್ರಿಯಲ್ಲಿ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದೆ. ಏಲ್ಲಿಗಾದರೂ ಹೋಗಬೇಕಾದರೆ ನಡೆದು ಹೋಗುತ್ತಿದ್ದರಿಂದ ಆಟೋ ರಿಕ್ಷಾಕ್ಕೆ ಕೊಡಬೇಕಾದ ಹಣ ಉಳಿಯುತಿತ್ತು ಎಂದು ಅವರು ಹೇಳಿದ್ದಾರೆ.

ತನ್ನ ತಂದೆ ಹಾಗೂ ತಾಯಿಯಿಂದ ಈಗ ವಿಎಲ್ ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ವೇದಿಕೆ ಹತ್ತುವ ಮೂಲಕ ನಿಮ್ಮಗಾಗಿ ತೊಡಗಿಸಿಕೊಂಡರೆ ಕನಸನ್ನು ನನಸು ಮಾಡಿಕೊಳ್ಳಬಹುದು ಎಂಬುದನ್ನು ವಿಶ್ವಕ್ಕೆ ತೋರಿಸಬಹುದು ಎಂದು ಮಾನ್ಯ ಸಿಂಗ್ ಹೇಳಿದ್ದಾರೆ.

ಶಿಕ್ಷಣ ಪ್ರಬಲ ಸಾಧನ ಎಂದು ನಂಬಿರುವ ಮಾನ್ಯಾ ಸಿಂಗ್, ಮ್ಯಾನೇಜ್ ಮೆಂಟ್ ಸ್ಟಡಿಯಲ್ಲಿ ಶಿಕ್ಷಣ ಮುಂದುವರೆಸಲು ಸಿದ್ಧತೆ ನಡೆಸಿದ್ದಾರೆ. ಮುಂಬೈಯಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಫೈನಲ್ ಕ್ಕಾಗಿ 31 ಅಂತಿಮ ಸ್ಪರ್ಧಾಳುಗಳ ಕಿರುಪಟ್ಟಿಯೊಂದನ್ನು ಮಾಡಲಾಗಿತ್ತು. 2019ರಲ್ಲಿ ಮಿಸ್ ವರ್ಲ್ಡ್ ಪ್ರಶಸ್ತಿ ಪಡೆದಿದ್ದ ಸುಮನ್ ರಾವ್, ಮಾನಸಾ ವಾರಣಾಸಿ ಅವರಿಗೆ ಕಿರೀಟ ತೊಟ್ಟರು. ಮಾನಸಾ ವಾರಣಾಸಿ ಈ ವರ್ಷದ ನಂತರ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com