ಹಿಮಾಚಲ ಪ್ರದೇಶ: 18,570 ಅಡಿ ಆಳದ ಕಂದಕದಿಂದ ಗಾಯಗೊಂಡ ಚಾರಣಿಗನನ್ನು ರಕ್ಷಿಸಿದ ಐಟಿಬಿಪಿ ತಂಡ!

ಜೀವ ರಕ್ಷಕ ಕಾರ್ಯಾಚರಣೆಯೊಂದರಲ್ಲಿ, 19 ನೇ ಬೆಟಾಲಿಯನ್ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆ 18 ಸಾವಿರದ 570 ಅಡಿ ಆಳದಲ್ಲಿ ಬಿದ್ದು ಗಾಯಗೊಂಡಿದ್ದ ಚಾರಣಿಗನನ್ನು ರಕ್ಷಣೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲ್ಲು: ಜೀವ ರಕ್ಷಕ ಕಾರ್ಯಾಚರಣೆಯೊಂದರಲ್ಲಿ, 19 ನೇ ಬೆಟಾಲಿಯನ್ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆ 18 ಸಾವಿರದ 570 ಅಡಿ ಆಳದಲ್ಲಿ ಬಿದ್ದು ಗಾಯಗೊಂಡಿದ್ದ ಚಾರಣಿಗನನ್ನು ರಕ್ಷಣೆ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಶ್ರೀಖಂಡ್ ಮಹಾದೇವ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅಪಾಯಕಾರಿ ಅತಿ ಎತ್ತರ ಸಾಂದ್ರತೆಯ ಕಾರ್ಯಾಚರಣೆಯಲ್ಲಿ ಐಟಿಬಿಪಿ ಸಿಬ್ಬಂದಿ ಗಾಯಗೊಂಡ ಚಾರಣಿಗನನ್ನು ಶ್ರೀಖಂಡ್ ಮಹದೇವ್ ಟ್ರೆಕ್ಕಿಂಗ್ ನ ಎತ್ತರ ಪ್ರದೇಶ ಸರ್ಕಂಡ್ ನಿಂದ 18 ಕಿಲೋ ಮೀಟರ್ ದೂರದವರೆಗೆ ಹೊತ್ತು ಸಾಗಿದ್ದಾರೆ.

ಇಡೀ ಮಾರ್ಗವು ಎತ್ತರದ ಅಪಾಯದ ಸವಾಲುಗಳಿಂದ ತುಂಬಿತ್ತು, ಇದರಲ್ಲಿ ಜವಾನರು ಸಿಕ್ಕಿಬಿದ್ದ ಚಾರಣಿಗರನ್ನು ಹೆಚ್ಚು ವೃತ್ತಿಪರ ರೀತಿಯಲ್ಲಿ ರಕ್ಷಿಸಿದರು. 19 ನೇ ಬೆಟಾಲಿಯನ್ ಐಟಿಬಿಪಿಯ ಪರ್ವತಾರೋಹಿಗಳು ಗಾಯಾಳುವನ್ನು 18 ಕಿಲೋ ಮೀಟರ್ ಗಿಂತಲೂ ಹೆಚ್ಚು ಸ್ಟ್ರೆಚರ್‌ನಲ್ಲಿ ಸಾಗಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ.

ಗಾಯಾಳು ಚಾರಣಿಗನನ್ನು ನಂತರ ನಾಗರಿಕ ಆಡಳಿತ ವಿಭಾಗಕ್ಕೆ ಹಸ್ತಾಂತರಿಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com