ಕಾಂಕ್ರೀಟ್ ಸೇತುವೆಗೆ ಸಡ್ಡು; ಹಸಿರು ಅರೇಕಾ ಸೇತುವೆಗಳ ನಿರ್ಮಾಣ; ಪರಿಸರ ಪ್ರೇಮಿಯ ಮಹತ್ವದ ಸೇವೆ

ಪುರುಷೋತ್ತಮ್ ಅಡ್ವೆ... ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮ ಪರಿಸರ ಸ್ನೇಹಿ ಕಾರ್ಯಗಳಿಂದಲೇ ತಕ್ಕ ಮಟ್ಟಿಗೆ ಖ್ಯಾತಿ ಗಳಿಸಿದವರು. ಸ್ಥಳೀಯ ಗ್ರಾಮಸ್ಥರ ಕೌಶಲ್ಯಗಳನ್ನೇ ಬಳಸಿಕೊಂಡು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಸೇತುವೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

Published: 18th July 2021 11:27 AM  |   Last Updated: 19th July 2021 02:54 PM   |  A+A-


Purushotham Adve-areca bridge

ಪುರುಷೋತ್ತಮ್ ಅಡ್ವೆ ತಂಡ ನಿರ್ಮಿಸಿರುವ ಅರೇಕಾ ಸೇತುವೆ

The New Indian Express

ಉಡುಪಿ: ಪುರುಷೋತ್ತಮ್ ಅಡ್ವೆ... ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮ ಪರಿಸರ ಸ್ನೇಹಿ ಕಾರ್ಯಗಳಿಂದಲೇ ತಕ್ಕ ಮಟ್ಟಿಗೆ ಖ್ಯಾತಿ ಗಳಿಸಿದವರು. ಸ್ಥಳೀಯ ಗ್ರಾಮಸ್ಥರ ಕೌಶಲ್ಯಗಳನ್ನೇ ಬಳಸಿಕೊಂಡು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಸೇತುವೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪಾಳು ಬಿದ್ದ, ಬಳಕೆಯಾಗದ ಕಾಂಕ್ರೀಟ್ ಸೇತುವೆಗಳು ಇಲ್ಲಿನ ಜನರ ನೋವು ಮತ್ತು ಅಭಿವೃದ್ಧಿ ಪ್ರತೀಕವೆಂಬಂತೆ ತೋರುತ್ತಿದೆ. ಆದರೆ ಈ ಹಿಂದೆ ಇಲ್ಲಿನ ಗ್ರಾಮಸ್ಥರು ನಿರ್ಮಿಸಿದ ನೈಸರ್ಗಿಕ ಸೇತುವೆಗಳು ಈಗಲೂ ಗ್ರಾಮಸ್ಥರ ಸಂಪರ್ಕಮಾರ್ಗವಾಗಿದೆ ಎಂದು ಪುರುಷೋತ್ತಮ್ ಅಡ್ವೆ  ಹೇಳಿದ್ದಾರೆ. 

ಪರಿಸರ ಪರ ಮತ್ತು ಗ್ರಾಮಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಯೋಚಿಸುತ್ತಿದ್ದ ಅಡ್ವೆ, ಇಲ್ಲಿನ ಸ್ಥಳೀಯ ಗ್ರಾಮಸ್ಥರ ವಿಶೇಷ ಕೌಶಲ್ಯಗಳನ್ನು ಬಳಸಿಕೊಂಡು ಅವುಗಳ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮುಂದಾದರು. ಪಶ್ಚಿಮಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿವೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅರೇಕಾ ಮರಗಳು ದೊರೆಯುತ್ತವೆ. ಇದೇ ಮರಗಳನ್ನು ಉಪಯೋಗಿಸಿಕೊಂಡು ಅಡ್ವೆ ಸೇತುವೆಗಳನ್ನು ನಿರ್ಮಿಸುವ ಕಾರ್ಯ ಮಾಡುತ್ತಿದ್ದಾರೆ. ಆ ಮೂಲಕ ಅಡ್ವೆ ಸ್ಥಳೀಯ ಗ್ರಾಮಸ್ಥರಿಗೆ ನೆರವಾಗುತ್ತಿದ್ದಾರೆ. ಅಡ್ವೆ ತಮ್ಮ ಈ ಕಾರ್ಯಕ್ಕಾಗಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕೆಲಸಕ್ಕೆ ‘ಪ್ರಾಚಿ ಫೌಂಡೇಶನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಅಗತ್ಯವಿಲ್ಲದಿದ್ದರೂ ಸಹ ಎಲ್ಲೆಡೆ ಕಾಂಕ್ರೀಟ್ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಇಲ್ಲಿನ ಗ್ರಾಮಸ್ಥರು ಮರದ ಕಾಂಡದ ಸೇತುವೆಗಳನ್ನು ನಿರ್ಮಿಸುವಲ್ಲಿ ಅಪಾರ ಕೌಶಲ್ಯವನ್ನು ಹೊಂದಿದ್ದಾರೆ. ಇಂತಹ ಕೌಶಲ್ಯಗಳು ಕಾಂಕ್ರೀಟ್ ಕಾರ್ಯದಿಂದ ಅವಸಾನದತ್ತ ಸಾಗುತ್ತಿದೆ. ನಮ್ಮ  ಪ್ರದೇಶದಲ್ಲಿ ಕಾಂಕ್ರೀಟ್ ಆಕ್ರಮಿಸಿಕೊಂಡಿರೆ ಖಂಡಿತಾ ಸ್ಥಳೀಯರೂ ಕೂಡ ಅದಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳುತ್ತಾರೆ. ಆಗ ಸ್ಥಳೀಯ ಕೌಶಲ್ಯಗಳು ನಾಶವಾಗುತ್ತದೆ. ಕಾಡುಗಳಲ್ಲಿ ಆಳವಾದ ಸಣ್ಣ ತೊರೆಗಳಿಗೆ ಅಡ್ಡಲಾಗಿರುವ ಕಾಂಕ್ರೀಟ್ ಸೇತುವೆಗಳು ಪ್ರಕೃತಿಗೆ ಸರಿಹೊಂದುವುದಿಲ್ಲ. ಆದರೆ ಮರದ ಕಾಂಡದ ಸೇತುವೆಗಳು ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಗ್ರಾಮಸ್ಥರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತವೆ, ಏಕೆಂದರೆ ಈ ಪ್ರಕೃತಿ ಸ್ನೇಹಿ ರಚನೆಗಳನ್ನು ಆಗಾಗ ಬದಲಾಯಿಸಬೇಕಾಗಿರುತ್ತದೆ ಎಂದು ಅಡ್ವೆ ಹೇಳಿದರು.

ಕಳೆದ ವರ್ಷ, ಪ್ರಾಚಿ ಫೌಂಡೇಶನ್ ಆರೇಕಾ ಮರಗಳನ್ನು ಬಳಸಿ ಮೂರು ಸೇತುವೆಗಳನ್ನು ನಿರ್ಮಿಸಿದ್ದು, , ಅವುಗಳು ಸ್ಥಳೀಯರಿಗೆ ಬಳಸಿಕೊಳ್ಳಲು ವಿವಿಧ ರೂಪಾಂತರಗಳನ್ನು ಹೊಂದಿವೆ. ಈ ಕಾಡುಗಳಲ್ಲಿ ಅರೇಕಾ ಮರಗಳು ನೈಸರ್ಗಿಕವಾಗಿ ಸಾವನ್ನಪ್ಪುತ್ತವೆ. ಇಂತಹ ಮರಗಳನ್ನು ಶೋಧಿಸಿ ನಾವು ಸೇತುವೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತೇವೆ. ಈ ಮರಗಳು ಮಾನ್ಸೂನ್ ಮಳೆಗಳನ್ನು ತಡೆದುಕೊಳ್ಳುವಷ್ಟು ಸಮರ್ಥವಾಗಿರುತ್ತವೆ. ಅಲ್ಲದೆ ಏಕಕಾಲಕ್ಕೆ ದನಕರುಗಳು, ದ್ವಿಚಕ್ರ ವಾಹನಗಳು ಮತ್ತು ಬೈಸಿಕಲ್‌ಗಳ ತೂಕವನ್ನು ತಡೆಯುತ್ತವೆ. ಈ ವರ್ಷ ಎರಡು ಸೇತುವೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಎರಡು ಸೇತುವೆಗಳನ್ನು  ಪ್ರಾಚಿ ಫೌಂಡೇಶನ್ ನಿರ್ಮಿಸಲಿದೆ ಎಂದು ಅಡ್ವೆ ಹೇಳಿದರು. 

ಪ್ರಾಚಿ ಫೌಂಡೇಶನ್‌ನ ಇಬ್ಬರು ಸ್ವಯಂಸೇವಕರಾದ ಮಾಲಾ ನಿವಾಸಿ 58 ವರ್ಷದ ಅಪ್ಪಣ್ಣ ಕೂಡ ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಸೇತುವೆಗೆ ಸೂಕ್ತವಾದ ಮರಗಳನ್ನು ಅಪಣ್ಣ ಆರಿಸುತ್ತಾರೆ. ಮತ್ತು ಸೇತುವೆಯನ್ನು ನಿರ್ಮಿಸಲು ಬೇಕಾದ ಮರದ ಕಾಂಡದ  ಪ್ರಮಾಣವನ್ನು ಅಂದಾಜು ಮಾಡುವಲ್ಲಿ ಇವರು ಪರಿಣಿತರು ಕೂಡ. ಈ ತಂಡ ಸುಮಾರು 25 ಅಡಿ ಉದ್ದದ ಸೇತುವೆಗಳನ್ನು ನಿರ್ಮಿಸಿದ್ದಾರೆ, ಇದು ನಿರ್ಮಾಣಕ್ಕೆ ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ಇದೆಲ್ಲವೂ ಸೇತುವೆಯ ಉದ್ದವನ್ನು ಅವಲಂಬಿಸಿರುತ್ತದೆ ಎಂದು ಅಡ್ವೆ ಹೇಳಿದರು. 

ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ
ಇನ್ನು ಅಭಿವೃದ್ಧಿಯ ಸಂಕೇತವಾಗಿ ಸಣ್ಣ ಹೊಳೆಗಳಲ್ಲೂ ಕಾಂಕ್ರೀಟ್ ಸೇತುವೆಗಳನ್ನು ನಿರ್ಮಿಸಲು ರಾಜಕೀಯ ನಾಯಕರು ಆಸಕ್ತಿ ತೋರುತ್ತಿದ್ದಾ. ಹಾಗೆ ಮಾಡುವುದರಿಂದ ಅವರು ಸ್ಥಳೀಯ ಸಂಸ್ಕೃತಿಯನ್ನು ಕಡೆಗಣಿಸಿದಂತಾಗುತ್ತದೆ. ಅಲ್ಲದೆ ಇಂತಹ ಕಾಂಕ್ರೀಟ್ ಸೇತುವೆಗಳಿಂದ ಪರಿಸರದ ಮೇಲೆ ಪರಿಣಾಮ  ಬೀರುತ್ತದೆ. ಅಲ್ಲದೆ ಸಮಾಜ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಆಂತರಿಕ ಕೌಶಲ್ಯವನ್ನು ಕಳೆದುಕೊಳ್ಳುತ್ತದೆ. ಕಳೆದ ಒಂದು ದಶಕದಲ್ಲಿ ಈ ಕುಗ್ರಾಮಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಸೇತುವೆಗಳು ಎದ್ದಿವೆ.

ಆದರೆ ಅರೆಕಾ ಸೇತುವೆಗಳಿಂದ ಸಾಕಷ್ಟು ಉಪಯೋಗಗಳಿವೆ. ಅವು ಜನರನ್ನು ಬೇಟೆಯಾಡಲು ಕಾಡಿನ ಆಳಕ್ಕೆ ಹೋಗದಂತೆ ತಡೆಯುತ್ತವೆ. ಕಾಂಕ್ರೀಟ್ ಸೇತುವೆಗಳು ಶಾಶ್ವತ ರಚನೆಗಳಾಗಿದ್ದು, ಬೇಟೆಗಾರರು ಅರಣ್ಯ ಪ್ರದೇಶಗಳಲ್ಲಿ ಸುಲಭವಾಗಿ ಚಲಿಸಬಹುದು. ಆದರೆ ಅಗತ್ಯವಿದ್ದಾಗ ಮಾತ್ರ ಅರೆಕಾ ಮರದ  ಕಾಂಡದ ಸೇತುವೆಗಳನ್ನು ನಿರ್ಮಿಸಲಾಗುವುದರಿಂದ ಬೇಟೆಗಳನ್ನು ತಪ್ಪಿಸಬಹುದು. ಅಲ್ಲದೆ ಇವು ಪ್ರಾಚೀನ ಪರಿಸರವನ್ನು ಸಂರಕ್ಷಿಸಲು ಸಹಾಯ ಮಾಡುತ್ತವೆ. ಮತ್ತು ಒಂದು ನಿರ್ದಿಷ್ಟ ಪ್ರದೇಶವನ್ನು ಪ್ರವೇಶಿಸಬೇಕೆಂದು ಗ್ರಾಮಸ್ಥರು ಭಾವಿಸಿದರೆ, ಸೇತುವೆಯನ್ನು ಕಿತ್ತುಹಾಕಬಹುದು ಮತ್ತು ಅವರ ಉದ್ದೇಶವನ್ನು  ಪೂರೈಸಲು ಮತ್ತೊಂದು ಸ್ಥಳದಲ್ಲಿ ಸ್ಥಾಪಿಸಬಹುದು ಎಂದು ಅಡ್ವೆ ಹೇಳಿದ್ದಾರೆ. 

'ಜೀವನೋಪಾಯಕ್ಕಾಗಿ ಅವರು ಸಂಪಾದಿಸುವ ಕೌಶಲ್ಯಗಳು, ಪ್ರಕೃತಿಯೊಂದಿಗೆ ಸಂಪರ್ಕಹೊಂದಿರುತ್ತವೆ. ಅದು ಮನೆ ನಿರ್ಮಾಣವಾಗಲಿ ಅಥವಾ ಸೇತುವೆ, ಕಲ್ವರ್ಟ್‌ಗಳಂತಹ ಮೂಲಸೌಕರ್ಯಗಳಿರಲಿ, ಗ್ರಾಮೀಣ ಜನರ ಮನಸ್ಸು ಅಂತಿಮ ಫಲಿತಾಂಶವು ಅವರ ನೈಸರ್ಗಿಕ ವ್ಯವಸ್ಥೆಯೊಂದಿಗೆ  ಜೋಡಣೆಯಾಗಿರುತ್ತದೆ. ಅಂತೆಯೇ ತಮ್ಮ ಇದೇ ಸಿದ್ಧಾಂತಗಳನ್ನು ಅಡ್ವೆ ಮಕ್ಕಳಿಗೆ ಕಲಿಸುತ್ತಿದ್ದು ನಗರಗಳ ಶಾಲಾ ಮಕ್ಕಳಿಗಾಗಿ ಕಾರ್ಕಳದ ಆಂತರಿಕ ಭಾಗಗಳಲ್ಲಿ ಅಡ್ವೆ ‘ಸುಸ್ಥಿರ ಜೀವನ ಶಿಬಿರಗಳನ್ನು’ ನಡೆಸುತ್ತಿದ್ದಾರೆ. ಇಲ್ಲಿ ಅವರು ಗ್ರಾಮೀಣ ಮಕ್ಕಳೊಂದಿಗೆ ಬೆರೆಯುತ್ತಾರೆ ಮತ್ತು ಹಳ್ಳಿ ಜೀವನದ ಸೂಕ್ಷ್ಮ  ವ್ಯತ್ಯಾಸಗಳನ್ನು ಕಲಿಯುತ್ತಾರೆ. 

ಮೆಟಲ್ ಆರ್ಟಿಸ್ಟ್
ಕೇವಲ ಮರದ ಸೇತುವೆಗಳಷ್ಟೇ ಅಲ್ಲ ಅಡ್ವೆ ಅವರು ಲೋಹದ ಕರಕುಶಲತೆಯನ್ನು ತಿಳಿದಿರುವ ಕಲಾವಿದರಾಗಿದ್ದಾರೆ. ಅಂತೆಯೇ ಉದಯೋನ್ಮುಖ ಕಲಾವಿದರಿಗೆ ತರಬೇತಿ ನೀಡುವ ಮೂಲಕ ಈ ಕಲೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ್ದಾರೆ. ಅವರು ತುಳುನಾಡು ದೇವಾಲಯಗಳಿಗೆ ಕೈಯಿಂದ ಮಾಡಿದ ಮುಖದ ಗುರಾಣಿಗಳನ್ನು ರಚಿಸಿ ಕೊಟ್ಟಿದ್ದಾರೆ. ಇಲ್ಲಿ ಮೊದಲು ಕಾರ್ಖಾನೆ ನಿರ್ಮಿತ ಲೋಹದ ಗುರಾಣಿಗಳನ್ನು ಮಾತ್ರ ಪಡೆಯುತ್ತಿದ್ದರು. 

ಈ ಹಳ್ಳಿಗಾಡಿನ ಕಲೆಗಳ ಬಗೆಗಿನ ಅವರ ಉತ್ಸಾಹಕ್ಕೆ ಆಧಾರವಾಗಿರುವುದು ಹಳ್ಳಿಯ ಜನರಲ್ಲಿ ಕೌಶಲ್ಯಗಳನ್ನು ಜೀವಂತವಾಗಿರಿಸಿಕೊಳ್ಳುವ ಹಂಬಲ.. ಹೀಗಾಗಿ ಅಡ್ವೆ ಅವರು ಇಂತಹ ಕೌಶಲ್ಯಗಳನ್ನು ಪುನರುಜ್ಜೀವನಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ. ಅಡ್ವೆ ಅವರ ಈ ಸಾಹಸಕ್ಕೆ ಅವರ ಪತ್ನಿ ಬ್ಯಾಂಕ್ ಉದ್ಯೋಗಿ ಶಶಿಕಲಾ  ಮತ್ತು 9ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಗ ಅವನಿ ಕೃಷ್ಣ, 2 ನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳು ಧಾತ್ರಿ ಬೆಂಬಲವಾಗಿ ನಿಂತಿದ್ದಾರೆ. 


Stay up to date on all the latest ವಿಶೇಷ news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp