ಕೈಯಿಂದ 84 ಟೈಲ್ಸ್ ಮುರಿದ ಹೈದ್ರಾಬಾದ್ ಬಾಲೆ; ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ!
ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯೊಂದನ್ನು ಮುರಿಯುವುದು ಹೆಚ್ಚಾಗಿರುತ್ತದೆ. ಆದರೆ, 13 ವರ್ಷದ ಬಾಲೆಯೊಬ್ಬಳು ಕೇವಲ 84 ಸೆಕೆಂಡ್ ಗಳಲ್ಲಿ 84 ಸೆರಾಮಿಕ್ ಟೈಲ್ಸ್ ಗಳನ್ನು ತನ್ನ ಕೈಗಳಿಂದ ಮುರಿಯುವುದು ಸುಲಭದ ಕೆಲಸವಲ್ಲ.
Published: 03rd June 2021 06:28 PM | Last Updated: 03rd June 2021 08:57 PM | A+A A-

ಗಾನಾ ಸಂತೋಷಿನಿ ರೆಡ್ಡಿ
ಹೈದ್ರಾಬಾದ್: ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯೊಂದನ್ನು ಮುರಿಯುವುದು ಹೆಚ್ಚಾಗಿರುತ್ತದೆ. ಆದರೆ, 13 ವರ್ಷದ ಬಾಲೆಯೊಬ್ಬಳು ಕೇವಲ 84 ಸೆಕೆಂಡ್ ಗಳಲ್ಲಿ 84 ಸೆರಾಮಿಕ್ ಟೈಲ್ಸ್ ಗಳನ್ನು ತನ್ನ ಕೈಗಳಿಂದ ಮುರಿಯುವುದು ಸುಲಭದ ಕೆಲಸವಲ್ಲ.
ಜೂನ್ 2 ರಂದು ತೆಲಂಗಾಣ ರಚನೆಯಾದ 84 ತಿಂಗಳ ನೆನಪಿನಲ್ಲಿ 84 ಸೆಕೆಂಡ್ ಗಳಲ್ಲಿ 84 ಟೈಲ್ಸ್ ಗಳನ್ನು ಕೈಯಿಂದ ಮುರಿದಿದ್ದ ಗಾನಾ ಸಂತೋಷಿನಿ ರೆಡ್ಡಿ, ಐದಾರು ತಿಂಗಳು ತರಬೇತಿ ಪಡೆದಿದ್ದಾಗಿ ಸುದ್ದಿಗಾರರಿಗೆ ತಿಳಿಸಿದರು. 2019ರಲ್ಲಿ ರಲ್ಲಿ ತೆಲಂಗಾಣದ ಐದನೇ ಸಂಸ್ಥಾಪನಾ ದಿನದಂದು ಸಂತೋಷಿನಿ ರೆಡ್ಡಿ ಹಾಗೂ ಆಕೆಯ ಸಹೋದರಿ ಪ್ರದರ್ಶನ ನೀಡಿ ಸನ್ಮಾನಿತಗೊಂಡಿದ್ದರು.
ಬ್ಲಾಕ್ ಬೆಲ್ಟ್ ಕರಾಟೆ ಪಟುವಾಗಿರುವ ಸಂತೋಷಿನಿ, ಟೈಲ್ಸ್ ಗಳನ್ನು ಮುರಿಯುವ ಮೂಲಕ ಗಿನ್ನಿಸ್ ಬುಕ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. 39 ನಿಮಿಷದಲ್ಲಿ 3,315 ಸಲ ತಲೆಯನ್ನು ಆ ಕಡೆಯಿಂದ ಈ ಕಡೆಗೆ ತಿರುಗಿಸುವುದಕ್ಕೆ ವಿಶ್ವ ದಾಖಲೆ ಸೇರಿದಂತೆ ಅನೇಕ ದಾಖಲೆಗಳು ಅವರ ಹೆಸರಿನಲ್ಲಿವೆ.
ಇದನ್ನು ಹೊರತುಪಡಿಸಿ ಆಕೆ ಮಿಕ್ಸಿಂಗ್ ಡ್ಯಾನ್ಸ್ ,ಯೋಗ ಮತ್ತು ಕರಾಟೆಗಾಗಿ ಬಾಲ ಸೂರ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸಂತೋಷಿನಿ ತಂದೆ ಡಾ. ಜಿ.ಎಸ್. ಗೋಪಾಲ ರೆಡ್ಡಿ ಆಕೆಯ ಶಿಕ್ಷಕರಾಗಿದ್ದು, ನಗರದಲ್ಲಿ ಕರಾಟೆ ಅಕಾಡೆಮಿಯೊಂದನ್ನು ನಡೆಸುತ್ತಿದ್ದಾರೆ. ಸಂತೋಷಿನಿ ಕ್ರೀಡೆಯಲ್ಲಿ ಹೆಸರು ಗಳಿಸಲು ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲಲು ಅವರು ಬಯಸುತ್ತಾರೆ.