ಬೆಂಗಳೂರಿನಲ್ಲಿ ಮಾದರಿ ಸೇವೆ: ಸರ್ಕಾರಿ ವೈದ್ಯರಿಗೆ ಚಹಾ, ಕಾಫಿ ನೀಡಿ ಒತ್ತಡ ನಿವಾರಣೆಗೆ ಸ್ವಯಂಸೇವಕರು ಮುಂದು

ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್‌ಗಳ ಸ್ವಯಂಸೇವಕರು ಕೋವಿಡ್ ಕಾಲದಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ನಗರದ ಐದು ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳಿಗೆ ಒಂದು ಕಪ್ ಕಾಫಿ ಅಥವಾ ಚಹಾ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾದರಿ ಸೇವೆ: ಸರ್ಕಾರಿ ವೈದ್ಯರಿಗೆ ಚಹಾ, ಕಾಫಿ ನೀಡಿ ಒತ್ತಡ ನಿವಾರಣೆಗೆ ಸ್ವಯಂಸೇವಕರು ಮುಂದು

ಬೆಂಗಳೂರು: ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್‌ಗಳ ಸ್ವಯಂಸೇವಕರು ಕೋವಿಡ್ ಕಾಲದಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ನಗರದ ಐದು ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳಿಗೆ ಒಂದು ಕಪ್ ಕಾಫಿ ಅಥವಾ ಚಹಾ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಅದೊಂದು ಉಚಿತ ಸೇವೆಯಾಗಿದ್ದು ದಿನದ ಯಾವುದೇ ಸಮಯದಲ್ಲಿಯೂ ಈ ಸೇವೆ ಪಡೆಯಲು ಅವಕಾಶ ಇದೆ.

ಹೃದಯಸ್ಪರ್ಶಿ ಸಂಗತಿಯೆಂದರೆ, ಸ್ವಯಂಸೇವಕರು ವೆಂಡಿಂಗ್ ಮಿಷನ್ ಜತೆಗೆ ಚಹಾ ಅಥವಾ ಕಾಫಿ ತಯಾರಿಗೆ ಮೂರು ತಿಂಗಳಿಗೆ ಬೇಕಾಗುವ ವಸ್ತುಗಳನ್ನು ಸಹ ದಾನ ಮಾಡಿದ್ದಾರೆ. ವಿಕ್ಟೋರಿಯಾ, ಬೌರಿಂಗ್ ಮತ್ತು ಜಯದೇವ ಆಸ್ಪತ್ರೆಗಳು ತಲಾ ಒಂದು ವೆಂಡಿಂಗ್ ಮಿಷನ್ ಪಡೆದರೆ ಸೇಂಟ್ ಜಾನ್ಸ್ ಆಸ್ಪತ್ರೆ ಎರಡು ಮಿಷನ್ ಪಡೆದಿದೆ. 90 ದಿನಗಳ ಚಹಾ, ಪಾಫಿ ಸರಬರಾಜು ಹೊಂದಿರುವ ಈ ಪ್ರತಿಯೊಂದು ಯಂತ್ರ 1.25 ಲಕ್ಷ ರೂ. ಬೆಲೆ ಬಾಳುತ್ತದೆ.

ಪ್ರೆಸ್ಟೀಜ್ ಓಝೋನ್,  ಪ್ರೆಸ್ಟೀಜ್  ಶಾಂತಿ ನಿಕೇತನ್,  ಅಪಾರ್ಟ್ ಮೆಂಟಿನ ಚೈತನ್ಯ ಸಮರ್ಪಣ ಮತ್ತು ಅವರ ಸ್ನೇಹಿತರು ಈ ಉಪಕ್ರಮವನ್ನು ಪ್ರಾರಂಭಿಸಿದರು ಮತ್ತು ಕಾಫಿ ಉತ್ಪಾದನಾ ದೈತ್ಯ ನೆಸ್ಲೆ ಮತ್ತು ಜಾರ್ಜಿಯಾ ಇದನ್ನು ಎರಡು ಆಸ್ಪತ್ರೆಗಳಲ್ಲಿ ಪ್ರಾಯೋಜಿಸಲು ಮುಂದಾಯಿತು. "ನಮ್ಮ ಈ ಕೆಲಸಕ್ಕೆ ಪ್ರತಿಕ್ರಿಯೆ ತುಂಬಾ ಉತ್ತಮವಾಗಿದೆ ಮತ್ತು ವೈದ್ಯಕೀಯ ಸಿಬ್ಬಂದಿ ನಮಗೆ ತುಂಬಾ ಧನ್ಯವಾದ ಹೇಳಿದ್ದಾರೆ."

ಆರೋಗ್ಯ ಕಾರ್ಯಕರ್ತರೊಂದಿಗಿನ ಸಂವಹನವು ಕೋವಿಡ್ ನಿರ್ಬಂಧಗಳಿಂದಾಗಿ ತಮ್ಮ ವಾರ್ಡ್‌ಗಳಿಂದ ಹೊರಬರಲು ಸಾಧ್ಯವಾಗದ ಕಾರಣ ತಮ್ಮನ್ನು ತಾವು ರಿಫ್ರೆಶ್ ಆಗಿಸಿಕೊಳ್ಲಲು ಈ ಸರಳವಾದ, ಮೂಲಭೂತ ಅವಶ್ಯಕತೆಯನ್ನು ಬಯಸಿದ್ದೆವು"ಎಂದು ವೈಟ್‌ಫೀಲ್ಡ್ ನಿವಾಸಿ ಡಾ.ಕೆ.ಶಶಿ ಕಾರ್ತಿಕೇಯನ್ ಹೇಳಿದರು.

"ಇನ್ನೂ ನಾಲ್ಕು ಡಿಸ್ಟ್ರಿಬ್ಯೂಟರ್ ಗಳು ಕ್ಯೂ ನಲ್ಲಿದ್ದಾರೆ. ಕೋಲಾರದ ಕೆಜಿ ಜನರಲ್ ಆಸ್ಪತ್ರೆ ಮತ್ತು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಇಂತಹಾ ಯಂತ್ರಗಳನ್ನು ಸ್ಥಾಪಿಸಲಾಗುವುದು." ಎಂದು ಇನ್ನೊಬ್ಬ ಸ್ವಯಂಸೇವಕರು ಮಾಹಿತಿ ನೀಡಿದ್ದಾರೆ.

ಸ್ವಯಂಸೇವಕರು ಭವಿಷ್ಯದಲ್ಲಿ ಅವರು ಪೂರೈಸಬಹುದಾದ ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಲು ಆರ್ಥಿಕ ಸಹಾಯದತ್ತ ಎದುರು ನೋಡುತ್ತಿದ್ದಾರೆ. ಆಸಕ್ತರು ಅವರನ್ನು www.e-sevahub.com ಮೂಲಕ ಸಂಪರ್ಕಿಸಬಹುದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com