ಎಚ್‌ಐವಿ ಸೋಂಕಿತರಿಗೆ ಶ್ರೇಷ್ಠ ಜೀವನ ಕಲ್ಪಿಸಿಕೊಡುತ್ತಿರುವ ಬೆಳಗಾವಿ ಮೂಲದ ಮಹೇಶ್ ಫೌಂಡೇಶನ್

ನಾಲ್ಕು ವರ್ಷದ ಬಾಲಕ ರೂಪೇಶ್ ಅಸಹಾಯಕತೆಯನ್ನು ಹೊರಹೊಮ್ಮಿಸುತ್ತಿದ್ದ ಮುಖವೇ ಮಹೇಶ್ ಪ್ರತಿಷ್ಠಾನದ ಪ್ರಾರಂಭಕ್ಕೆ ಕಾರಣವಾಗಿತ್ತು. ರೂಪೇಶ್ (ಹೆಸರು ಬದಲಾಯಿಸಲಾಗಿದೆ) ಅನಾಥನಾಗಿದ್ದ. ಅವನು ಏಡ್ಸ್ ನಿಂದ ಬಳಲುತ್ತಿದ್ದ, ಅವನ ಸ್ಥಿತಿ ಗಂಭೀರವಾಗಿತ್ತು
ಕೈಗಾರಿಕೋದ್ಯಮಿ ಅನಿಲ್ ಕವಾಲೆಕರ್ ಮತ್ತು ಬೆಳಗಾವಿ ಆಕ್ವಾ ವರ್ಲ್ಶ್ಸ್ ನೌಕರರು ಬೆಳಗಾವಿ ಮಹೇಶ್ ಫೌಂಡೇಶನ್ ಶಾಲೆಗೆ ಮಿನಿ ಬಸ್ ದಾನ ಮಾಡಿದರು
ಕೈಗಾರಿಕೋದ್ಯಮಿ ಅನಿಲ್ ಕವಾಲೆಕರ್ ಮತ್ತು ಬೆಳಗಾವಿ ಆಕ್ವಾ ವರ್ಲ್ಶ್ಸ್ ನೌಕರರು ಬೆಳಗಾವಿ ಮಹೇಶ್ ಫೌಂಡೇಶನ್ ಶಾಲೆಗೆ ಮಿನಿ ಬಸ್ ದಾನ ಮಾಡಿದರು

ಬೆಳಗಾವಿ: ನಾಲ್ಕು ವರ್ಷದ ಬಾಲಕ ರೂಪೇಶ್ ಅಸಹಾಯಕತೆಯನ್ನು ಹೊರಹೊಮ್ಮಿಸುತ್ತಿದ್ದ ಮುಖವೇ ಮಹೇಶ್ ಪ್ರತಿಷ್ಠಾನದ ಪ್ರಾರಂಭಕ್ಕೆ ಕಾರಣವಾಗಿತ್ತು. ರೂಪೇಶ್ (ಹೆಸರು ಬದಲಾಯಿಸಲಾಗಿದೆ) ಅನಾಥನಾಗಿದ್ದ. ಅವನು ಏಡ್ಸ್ ನಿಂದ ಬಳಲುತ್ತಿದ್ದ, ಅವನ ಸ್ಥಿತಿ ಗಂಭೀರವಾಗಿತ್ತು. ಮಹೇಶ್ ಜಾಧವ್ ಅವರ ಸಂಪರಕ್ಕೆ ಬಂದಾಗ ಅವನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿತು. 2008 ರಲ್ಲಿ, ಜಾಧವ್ ಗೆ ಇನ್ನೂ 21 ವರ್ಷ ವಯಸ್ಸಿನ ಅವಧಿಯಲ್ಲಿ ಅನೇಕರ ವಿರೋಧದ ಹೊರತಾಗಿಯೂ ತಮ್ಮ ತಾಯಿಯ ಅನುಮತಿಯೊಂದಿಗೆ ರೂಪೇಶ್ ನನ್ನು ತನ್ನ  ಮನೆಗೆ ಕರೆದುತಂದರು.

"ಮಗುವಿನ ಆರೋಗ್ಯ ನಿರ್ಣಾಯಕ ಹಂತದಲ್ಲಿದೆ ಮತ್ತು ರೋಗವು ತಂದ ಕಳಂಕದಿಂದಾಗಿ ಸಹಾಯ ಮಾಡಲು ಯಾರೂ ಬರುತ್ತಿಲ್ಲ. . ನಾನು ಯಾವುದೇ ರೀತಿಯಲ್ಲಿ ಅವನಿಗೆ ಸಹಾಯ ಮಾಡಲು ಬಯಸಿದ್ದೆ ಮತ್ತು ಅವನನ್ನು ಮನೆಗೆ ಕರೆತರಬೇಕೆಂದು ನನ್ನ ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟೆ. ಮತ್ತು ಕುಟುಂಬದ ಮೊದಲ ಸದಸ್ಯ ಮಹೇಶ್ ಫೌಂಡೇಶನ್‌ಗೆ ಸೇರ್ಪಡೆಗೊಂಡ ಕಥೆ ಹೀಗಿದೆ."ಅವರು ಹೇಳಿದರು.

ರೂಪೇಶ್ ನನ್ನು ಭೇಟಿಯಾದ ನಂತರ, ಜಾಧವ್ ಎಚ್ಐವಿ ರೋಗಿಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಪ್ರಾರಂಭಿಸಿದರು. ಆಶ್ರಯ ಒದಗಿಸಲು ಯಾರೂ ಮನೆ ಬಾಡಿಗೆಗೆ ನೀಡಲು ಸಿದ್ಧರಿಲ್ಲದ ಕಾರಣ ಇನ್ನೂ ಐದು ಅನಾಥ ಮಕ್ಕಳನ್ನು ತಮ್ಮ ಮನೆಗೆ ಕರೆದು ತಂದರು.. ಮಹೇಶ್ ಫೌಂಡೇಶನ್ (ಎಂಎಫ್) ಅಂದಿನಿಂದ ಸಮಾಜದ ಅತ್ಯಂತ ನಿರ್ಲಕ್ಷ್ಯ ಮತ್ತು ಕಳಂಕಿತ ವಿಭಾಗಗಳಲ್ಲಿ ಒಂದಾದ ಪೀಪಲ್ ಲಿವಿಂಗ್ ವಿಥ್ ಎಚ್ಐವಿ (ಪಿಎಲ್ಹೆಚ್ಐವಿ) ಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆರಂಭಿಕ ದಿನಗಳಿಂದಲೂ, ಎಚ್‌ಐವಿ ಸೋಂಕಿಗೆ ಒಳಗಾದ ಅಥವಾ ಸಂತ್ರಸ್ತ ಜನರಿಗೆ ಘನತೆಯ ಜತೆ ಜೀವನೋಪಾಯವನ್ನು ಒದಗಿಸಲು ಜಾಧವ್ ಶ್ರಮಿಸಿದ್ದಾರೆ.

<strong>ತಮ್ಮ ಮಗನೊಂದಿಗೆ ಮಹೇಶ್ ಜಾಧವ್ ದಂಪತಿ</strong>
ತಮ್ಮ ಮಗನೊಂದಿಗೆ ಮಹೇಶ್ ಜಾಧವ್ ದಂಪತಿ

ಇಂದು, ಪ್ರತಿಷ್ಠಾನವು ಸಮಾಜದ ತಳಮಟ್ಟಕ್ಕೆ ಲಾಭದಾಯಕವಾದ ಅನೇಕ ಯೋಜನೆಗಳನ್ನು ಹೊಂದಿದೆ, ಮತ್ತು ಮಕ್ಕಳ ಕಲ್ಯಾಣಕ್ಕೆ ನೀಡಿದ ಕೊಡುಗೆಗಾಗಿ 2017 ರಲ್ಲಿ ರಾಷ್ಟ್ರಪತಿ ಪದಕದ ರೂಪದಲ್ಲಿ ಜಾಧವ್ ಅವರಿಗೆ ಗೌರವವೂ ಲಭಿಸಿದೆ. ಅಲ್ಲದೆ ಇದಕ್ಕಾಗಿ ಅವರು 2014 ರಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದರು. ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿರುವ ಜಾಧವ್, ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಗುರಿಯನ್ನು ಹೊಂದಿದ್ದರು, ಆದರೆ ಎಲೆಕ್ಟ್ರಾನಿಕ್ಸ್ ಮತ್ತು ಸಾರಿಗೆ ವ್ಯವಹಾರದಲ್ಲಿ ತೊಡಗಿಕೊಂಡರು.ತನ್ನ ಆಶ್ರಯದಲ್ಲಿರುವ ಮಕ್ಕಳಿಗೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗದ ಕಾರಣ, ಅವರು ತನ್ನ ವ್ಯವಹಾರವನ್ನು ವ್ಯವಸ್ಥಾಪಕರಿಗೆ ಹಸ್ತಾಂತರಿಸಿದರು, ಪ್ರತಿಷ್ಠಾನದ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಿದರು.  ಜಾಧವ್ ಮತ್ತು ಮಹೇಶ್ ಫೌಂಡೇಶನ್ ಅನ್ನು ಗಮನಿಸಿದ ದ ಸ್ಥಳೀಯ ಪತ್ರಿಕೆಗಳು: ಇದು ಸ್ಥಳೀಯ ಯುವಕನ ಉತ್ತಮ ಉದ್ದೇಶವಾಗಿದ್ದು ಹೊದಿದ್ದು ಇದಕ್ಕಾಗಿ ಪ್ರಚಾರ ನೀಡಿದ್ದವು. ಇದರಿಂದ ಇನ್ನೂ ಅನೇಕ ಮಕ್ಕಳನ್ನು ಆಶ್ರಯಕ್ಕೆ ಲರೆತರುವಂತಾಗಿತ್ತು. ಈ ಸಂಖ್ಯೆ ಶೀಘ್ರವಾಗಿ 26 ಕ್ಕೆ ಏರಿತು.

ಇದು ಅವರ ವೈಯಕ್ತಿಕ ಜೀವನವನ್ನು ಇಲ್ಲವಾಗಿಸಿತ್ತು. ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದ ಜಾಧವ್, ತನ್ನ ನಿಶ್ಚಿತ ವಧುವಿನ ಕುಟುಂಬ ಈ ಸಮಾಜ ಸೇವೆಗೆ ಒಪ್ಪುವುದಿಲ್ಲ ಎಂದು ಅರಿತಾಗ ಮದುವೆ ಆಗಲು ನಿರಾಕರಿಸಿದರು. ಅಲ್ಲದೆ ವಧುವಿನ ಕುಟುಂಬ ಜಾಧವ್ ಸಹ ಎಚ್‌ಐವಿ ಪಾಸಿಟಿವ್ ಆಗಿರಬಹುದೆಂದು ಶಂಕಿಸಿತ್ತು!! "ಎಚ್ಐವಿಗೆ ಸಂಬಂಧಿಸಿದ ಕಳಂಕವು ರೋಗಕ್ಕಿಂತ ಹೆಚ್ಚಿನ ಜನರನ್ನು ಕೊಲ್ಲುತ್ತದೆ" ಎಂದು ಜಾಧವ್ ಹೇಳುತ್ತಾರೆ. “ಈ ಕಳಂಕ ನನ್ನ ಮತ್ತು ನನ್ನ ಕುಟುಂಬದ ಮೇಲೆ ಪರಿಣಾಮ ಬೀರುತ್ತಿತ್ತು. ಜನರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು ಮತ್ತು ನಾನು ಅಥವಾ ನನ್ನ ಕುಟುಂಬ ಸದಸ್ಯರಲ್ಲಿ ಯಾರಾದರೂ ಎಚ್‌ಐವಿ ಪಾಸಿಟಿವ್ ಆಗಿದ್ದೀರಾ ಎಂದು ಕೇಳುತ್ತಿದ್ದರು ನನ್ನ ಮದುವೆ ಮುರಿದ ನಂತರ ನಾನು ಮದುವೆ ಯೋಜನೆಗಳನ್ನು ಮುಂದೂಡಿದೆ”.

ಇನ್ನೂ ಅನೇಕ ಅಡೆತಡೆಗಳು ಇದ್ದವು. ಜಾಧವ್ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ದಾಖಲಿಸಿದ್ದರು ಆದರೆ ಮಾರ್ಚ್ 2011 ರಲ್ಲಿ ಆ ಶಾಲೆಯ ಮುಖ್ಯ ಶಿಕ್ಷಕರು ಮಕ್ಕಳು ಶಾಲೆಗೆ ಬರುವುದು ಬೇಡವೆಂದರು. "ನಿರ್ಧಾರವನ್ನು ಬದಲಿಸಲು ಮತ್ತು ನಮ್ಮ ಮಕ್ಕಳು ಪರೀಕ್ಷೆ ಬರೆಯಲು  ಮತ್ತೆ ಶಾಲೆಗೆ ಸೇರಿಸಲು ನಾವು ಅಧಿಕಾರಿಗಳೊಂದಿಗೆ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಎಂದು ಅವರು ಹೇಳಿದರು. 

ಮಹೇಶ್ ಫೌಂಡೇಶನ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸಿತು, ಎಚ್ಐವಿ ಪಾಸಿಟಿವ್ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ ಗಳನ್ನು ಒದಗಿಸಿತು. ಇಂದು, ಅಂತಹ ಸುಮಾರು 2,000 ಮಕ್ಕಳು ಪುಸ್ತಕಗಳು, ಚೀಲಗಳು, ಜ್ಯಾಮಿತಿ ಪೆಟ್ಟಿಗೆಗಳು ಮತ್ತು ಹೆಚ್ಚಿನವುಗಳನ್ನು ಪಡೆಯುತ್ತಾರೆ. ಮಕ್ಕಳು ಆರೋಗ್ಯವಾಗಿರಲು ಸಮಯಕ್ಕೆ ಸರಿಯಾಗಿ ಔಷಧ  ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯವಾಣಿಯನ್ನು ಸ್ಥಾಪಿಸಿದೆ ಮತ್ತು ಅವರ ಉತ್ಸಾಹವನ್ನು ಉಳಿಸಿಕೊಳ್ಳಲು ಸಮಾಲೋಚನೆಯನ್ನು ಸಹ ನಡೆಸಲಾಗುವುದು. ಫೌಂಡೇಶನ್ ಈಗ ಎಚ್ಐವಿ-ಪಾಸಿಟಿವ್ ಮತ್ತು ಹಿಂದುಳಿದ ಮಕ್ಕಳಿಗಾಗಿ ತನ್ನದೇ ಆದ ಸ್ಥಳವನ್ನು  ಹೊಂದಿದೆ. 2018 ರಲ್ಲಿ, ಇದು ಹಿಂದುಳಿದ ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿತು ಮತ್ತು ಅವರಿಗೆ ಕೌಶಲ್ಯ ಆಧಾರಿತ ಶಿಕ್ಷಣವನ್ನು ಉಚಿತವಾಗಿ ನೀಡಿತು. ಅವರು, ಹತ್ತಿರದ ಕೊಳೆಗೇರಿಗಳ ಮಕ್ಕಳೊಂದಿಗೆ ಒಂದೇ ಸೂರಿನಡಿ ಶಿಕ್ಷಣ ಪಡೆಯುತ್ತಾರೆ. ಇದು ಕಂಪ್ಯೂಟರ್ ಕೌಶಲ್ಯ, ಕಲೆ ಮತ್ತು ಕರಕುಶಲತೆಯನ್ನು ಒದಗಿಸುವ 20,000 ಕ್ಕೂ ಹೆಚ್ಚು ಬಡ ಮಕ್ಕಳ ಶಿಕ್ಷಣವನ್ನು ಬಾಹ್ಯವಾಗಿ ಬೆಂಬಲಿಸುತ್ತದೆ. ಪ್ರಸ್ತುತ, ಶಾಲೆಯು 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳನ್ನು ಹೊಂದಿದೆ ಮತ್ತು 10 ನೇ ತರಗತಿಯ ವರೆಗೆ ವಿಸ್ತರಣೆಯಾಗಲು ಯೋಜಿಸಿದೆ.

ಫೌಂಡೇಶನ್ ಬೆಳೆದಂತೆ, ಜಾಧವ್ ಇನ್ನೂ ಅನೇಕರನ್ನು ತಲುಪಬೇಕೆಂದು ಆಶಿಸುತ್ತಿದ್ದಾರೆ. ಅವರು ದು ಬಡವರಿಗಾಗಿ 50 ಹಾಸಿಗೆಗಳ ದತ್ತಿ ಆಸ್ಪತ್ರೆಯನ್ನು ನಿರ್ಮಿಸುತ್ತಿದೆ. "ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಪರಿಸ್ಥಿತಿಗಳು ಹದಗೆಡುತ್ತಿರುವುದರಿಂದ, ದೀನದಲಿತ ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ನೀಡಲು ನಾವು ಯೋಜಿಸುತ್ತೇವೆ" ಎಂದು ಜಾಧವ್ ಹೇಳಿದರು. ಚೀಲಗಳನ್ನು ತಯಾರಿಸಲು ಎಂಎಫ್ ಮಹಿಳಾ ವಿಭಾಗ ಅನ್ನು ಸಹ ಪ್ರಾರಂಭಿಸಿದರು. ಇದು ಕೊಳೆಗೇರಿಗಳಿಂದ ಮಹಿಳೆಯರನ್ನು ನೇಮಿಸಿಕೊಳ್ಳುತ್ತದೆ, ವಿಶೇಷವಾಗಿ ಆರ್ಥಿಕ ತೊಂದರೆಯಲ್ಲಿರುವವರು ಇಲ್ಲಿ ಸೇರಿದ್ದಾರೆ.

ಇದೀಗ ಜಾಧವ್ ಮಧು ಎಂಬುವವರನ್ನು ಮದುವೆಯಾಗಿದ್ದು ಅವರು ಪ್ರತಿಷ್ಠಾನದೊಂದಿಗೆ ಕೆಲಸ ಮಾಡುತ್ತಿದ್ದ ಸಮಾನ ಮನಸ್ಕ ವ್ಯಕ್ತಿ, ಮತ್ತು ಸಮಾಜದ ಸುಧಾರಣೆಗೆ ಸಹ ಸಮರ್ಪಿತರಾಗಿದ್ದಾರೆ. ಮದುವೆಯ ನಂತರ, ಅವರು ಫೌಂಡೇಶನ್ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡರು, ಮತ್ತು ಮಹಿಳೆಯರ ಮತ್ತು ನಿರ್ಗತಿಕರ ಸುಧಾರಣೆಗಾಗಿ ಯೋಜನೆಗಳನ್ನು ರೂಪಿಸಿದ್ದಾರೆ. ಅವರಿಗೆ ಯುವರಾಜ್ ಎಂಬ 2 ವರ್ಷದ ಮಗನಿದ್ದಾನೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದರಿಂದ ತಾನು ಎಂಎಫ್ ಜೊತೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಮಧು ಹೇಳುತ್ತಾರೆ, ಮತ್ತು ಜಾಧವ್ ಅವರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರು ದೀನದಲಿತರ ಹೋರಾಟದ ಮಹತ್ವವನ್ನು  ಅರಿತುಕೊಂಡರು. ವರ್ಷಗಳಲ್ಲಿ, ಮಧು ಸಮಾಜದ ಕೇಳದ ವರ್ಗಗಳಿಗೆ ಧ್ವನಿ ನೀಡುವತ್ತ ಗಮನ ಹರಿಸುತ್ತಿದ್ದಾರೆ, ವಿಶೇಷವಾಗಿ ನಿರ್ಗತಿಕ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದ್ದಾರೆ. "ನಾನು ತಳಮಟ್ಟವನ್ನು ತಲುಪಿದ್ದೇನೆ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳೆಯರ  ಸವಾಲುಗಳನ್ನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಅವರು ಹೇಳಿದರು.

"ನಮ್ಮ ಉದ್ದೇಶವು ದುರ್ಬಲ ಸಮುದಾಯಗಳ ಶೈಕ್ಷಣಿಕ ಮತ್ತು ವೈದ್ಯಕೀಯ ಅಗತ್ಯಗಳನ್ನು ಬೆಂಬಲಿಸುವುದು ಮತ್ತು ಅವರ ಜೀವನೋಪಾಯವನ್ನು ಗಳಿಸುವ ಅವಕಾಶವನ್ನು ಒದಗಿಸುವುದು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ನೇಕಾರರು ಮತ್ತು ಕುಂಬಾರರಿಗೆ ನಾವು ಸಹಾಯವನ್ನು ನೀಡಿದ್ದೇವೆ ಮತ್ತು ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದು ವೇದಿಕೆಯನ್ನು ಒದಗಿಸಿದ್ದೇವೆ. ಗಳಿಸಿದ ಆದಾಯವನ್ನು ಅಗತ್ಯವಿರುವ ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ” ಮುಂದಿನ ದಿನಗಳಲ್ಲಿ, ಮಹಿಳೆಯರಿಗೆ ಜೀವನೋಪಾಯ ಕೇಂದ್ರವನ್ನು ಸ್ಥಾಪಿಸಲು ಮಧು ಪ್ರಾರಂಭಿಸಿದ ಪ್ರಯತ್ನ ಸಂಸ್ಥೆ ಉದ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com