ಬುಡಕಟ್ಟು ಸಮುದಾಯಕ್ಕೆ ಪಡಿತರ ವಿತರಿಸಿದ ನಟ ಚೇತನ್ ಕುಮಾರ್

ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಕುಮಾರ್ ಬುಡಕಟ್ಟು ಜನಾಂಗದ ನೆರವಿಗೆ ನಿಂತಿದ್ದಾರೆ. ಚೇತನ್ ಫೌಂಡೇಶನ್ ಮೂಲಕ ಅಗತ್ಯವಿರುವವರಿಗೆ ಫುಡ್ ಕಿಟ್ ವಿತರಿಸಲು ಮುಂದಾಗಿದ್ದಾರೆ.
ಫುಡ್ ಕಿಟ್ ವಿತರಿಸುತ್ತಿರುವ ನಟ ಚೇತನ್
ಫುಡ್ ಕಿಟ್ ವಿತರಿಸುತ್ತಿರುವ ನಟ ಚೇತನ್

ತುಮಕೂರು: ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್ ಕುಮಾರ್ ಬುಡಕಟ್ಟು ಜನಾಂಗದ ನೆರವಿಗೆ ನಿಂತಿದ್ದಾರೆ.

ಚೇತನ್ ಫೌಂಡೇಶನ್ ಮೂಲಕ ಅಗತ್ಯವಿರುವವರಿಗೆ ಫುಡ್ ಕಿಟ್ ವಿತರಿಸಲು ಮುಂದಾಗಿದ್ದಾರೆ. ತುಮಕೂರಿನ ಶಿಳ್ಳೆಖ್ಯಾತ ಸಮುದಾಯ, ತಿಪಟೂರಿನ ಮಂಗಳಮುಖಿಯರು ಮತ್ತು ಬೆಂಗಳೂರಿನ ಸ್ಮಶಾನಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ಫೌಂಡೇಶನ್ ಮೂಲಕ ಪಡಿತರ ಕಿಟ್ ಕಳುಹಿಸುತ್ತಿದ್ದಾರೆ. 

ಲಾಕ್ ಡೌನ್ ನಿಂದಾಗಿ ದೈನಂದಿನ ಸಂಪಾದನೆಯಿಲ್ಲದೇ ಸಂಕಷ್ಟಕ್ಕೊಳಗಾಗಿರುವವರಿಗೆ ಚೇತನ್ ಸಹಾಯ ಹಸ್ತ ನೀಡಿದ್ದಾರೆ. ಚೇತನ್ ಅವರ ಈ ಕಾರ್ಯಕ್ಕೆ ಮಂಗಳಮುಖಿಯರು ಶ್ಲಾಘನೆ ಮಾಡಿದ್ದಾರೆ.

ಬೆಂಗಳೂರಿನ ಸುಮಾರು 300 ಸ್ಮಶಾನ ಕಾರ್ಮಿಕರ ಸೇವೆಗಳನ್ನು ಕ್ರಮಬದ್ಧಗೊಳಿಸುವಂತೆ ನಟ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರಿಗೆ ಪತ್ರ ಬರೆದಿದ್ದಾರೆ.  ಲಸಿಕೆಗಳು, ವಿಮೆ, ಹಾಸಿಗೆಗಳು ಮತ್ತು ಹಣಕಾಸಿನ ವಿಷಯದಲ್ಲಿ ಅವರಿಗೆ ತಕ್ಷಣದ ವೈದ್ಯಕೀಯ ನೆರವು ನೀಡಿ ಎಂದು ನಟ ಒತ್ತಾಯಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ಜೊತೆ ಸಂಪರ್ಕದಲ್ಲಿದ್ದು, ಈ ವಿಷಯ ಸಂಬಂಧ ಅವರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

ಉಡುಪಿಯ ಕೊರಗ ಸಮುದಾಯವು ಈಗಲೂ ‘ಅಜ್ಜಲು ಪದತಿ’ಗೆ ಬಲಿಯಾಗಿದೆ ಎಂದು ನಟ ಚೇತನ್ ಆಘಾತ ವ್ಯಕ್ತ ಪಡಿಸಿದ್ದಾರೆ, ಈ ಪದ್ಧತಿಯಲ್ಲಿ  ಹಿಂದೂಗಳ ಉಗುರು ಮತ್ತು ಕೂದಲನ್ನು ತಿನ್ನಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೊರಗ ಸಮುದಾಯಕ್ಕೆ ಚೇತನ್ ಕುಮಾರ್ ಅಭಿಮಾನಿಗಳಾದ ಜಗದೀಶ್ ಗಂಗೊಳ್ಳಿ ಮತ್ತು ವಜ್ರರಂಗ್ ಫುಡ್ ಕಿಟ್
ತಲುಪಿಸಿದ್ದಾರೆ.

ಭವಿಷ್ಯದಲ್ಲಿ ಅಗತ್ಯವಿರುವವರಿಗೆ ವೈದ್ಯಕೀಯ ಸಹಾಯವನ್ನು ನೀಡಲು ನಾನು ಯೋಜಿಸುತ್ತಿದ್ದೇನೆ, ಏಕೆಂದರೆ ನನ್ನ ಕುಟುಂಬವು ಈಗಾಗಲೇ ಮೈಸೂರಿನ ಹೆಬ್ಬಾಳದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಡೆಸುತ್ತಿದೆ" ಎಂದು ಅವರು ಹೇಳಿದರು.

ಒಂದು ವೇಳೆ ನೀವು ಸಿಎಂ ಆದರೆ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಚೇತನ್ ಕುಮಾರ್, ನಾನು ಸಿಎಂ ಆದರೆ ಸಂಪತ್ತನ್ನು ಹಂಚುವುದು ನನ್ನ ಮೊದಲ ಆದ್ಯತೆ, ಇದು ನನ್ನಿಂದಲೇ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com