ಗೋಡೆಯ ಮೇಲೆ ಕನಸು ಕಟ್ಟಿಕೊಂಡ ಚಿತ್ರದುರ್ಗದ 'ಕೋತಿ ರಾಜ' ಜ್ಯೋತಿ ರಾಜ್

ಗೋಡೆಗಳನ್ನು ಹತ್ತುವ ತಂತ್ರವನ್ನು ಅವರು ಕಲಿತದ್ದು ಮಂಗಗಳನ್ನು ನೋಡಿ, ಮಂಗಗಳು ಮರವನ್ನು ಹತ್ತುವಾಗ ಅವುಗಳ ಕೈ-ಕಾಲುಗಳ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಅವರೇ ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್. 
ಜ್ಯೋತಿ ರಾಜ್
ಜ್ಯೋತಿ ರಾಜ್

ಶಿವಮೊಗ್ಗ: ಅವರು ಕಲ್ಲಿನ ಗೋಡೆಯನ್ನು ಸರಸರನೆ ಹತ್ತುತ್ತಾರೆ, ಅವರ ಕೈ ಮತ್ತು ಕಾಲುಗಳಿಂದ ಗೋಡೆಯ ಮೇಲ್ಬಾಗವನ್ನು ಹತ್ತುವಾಗ ಕೆಳಗೆ ನಿಂತು ನೋಡುವವರ ಉಸಿರು ಕಟ್ಟುತ್ತದೆ. ಗೋಡೆಗಳನ್ನು ಹತ್ತುವ ತಂತ್ರವನ್ನು ಅವರು ಕಲಿತದ್ದು ಮಂಗಗಳನ್ನು ನೋಡಿ, ಮಂಗಗಳು ಮರವನ್ನು ಹತ್ತುವಾಗ ಅವುಗಳ ಕೈ-ಕಾಲುಗಳ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಅವರೇ ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್. 

ಅತಿ ಎತ್ತರದ ಗೋಡೆಗಳನ್ನು ಹತ್ತುವ ಅವರ ಪ್ರತಿಭೆಯನ್ನು ಕಂಡು ಅಭಿಮಾನಿಗಳು ಅವರನ್ನು ಕೋತಿ ರಾಜ ಎಂತಲೂ ಇನ್ಕ್ರೆಡಿಬಲ್ ಮಂಕಿ ಮ್ಯಾನ್ ಎಂದೂ ಸಹ ಕರೆಯುತ್ತಾರೆ.

ಇವರಿಗೆ ಗೋಡೆ ಹತ್ತುವುದೆಂದರೆ ಸುಲಭದ ಕೆಲಸವಂತೆ. ಗೋಡೆಯ ಮೇಲೆ ನನಗೆ ಹಿಡಿತ ಸರಿಯಾಗಿ ಸಿಗುತ್ತದೆ. ನನ್ನ ಕಾಲುಗಳನ್ನು ಎಲ್ಲಿ ಇಡಬೇಕೆಂದು ಸಹ ಗೊತ್ತಿರುತ್ತದೆ ಎನ್ನುವ ಜ್ಯೋತಿರಾಜ್ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಹತ್ತಿಳಿದಿದ್ದಾರೆ.

ಚಿತ್ರದುರ್ಗದ ಕಲ್ಲಿನ ಕೋಟೆಯ ಮೂಲಕ ಮತ್ತೆ ಜೀವನ ಕಂಡುಕೊಂಡ ಜ್ಯೋತಿರಾಜ್:  34 ವರ್ಷದ ಜ್ಯೋತಿರಾಜ್ ಪ್ರತಿನಿತ್ಯ ಚಿತ್ರದುರ್ಗ ಕಲ್ಲಿನ ಕೋಟೆಗೆ ಬರುವವರನ್ನು ತಮ್ಮ ಅದ್ಭುತ ಪ್ರತಿಭೆಯಿಂದ ಮನರಂಜಿಸುತ್ತಾರೆ. ಕಲ್ಲಿನ ಕೋಟೆಯನ್ನು ಸರಸರನೆ ಹತ್ತುವುದು, ಮಂಗನಂತೆ ಮಿಮಿಕ್ರಿ ಮಾಡುವುದು, ಶಬ್ದ ಮಾಡುವುದು, ಕಿರುಚುವುದು, ತಲೆಕೆಳಗಾಗಿ ಗೋಡೆ ಮೇಲೆ ನಿಲ್ಲುವುದು, ಬೆನ್ನ ಹಿಂದೆ ಕೆರೆದುಕೊಳ್ಳುವುದು ಹೀಗೆ ಮಾಡುತ್ತಿರುತ್ತಾರೆ. ವೀಕ್ಷಕರು ಮಕ್ಕಳು ಕುತೂಹಲದಿಂದ ಅವರ ಕೌಶಲ್ಯವನ್ನು ನೋಡುತ್ತಾರೆ.

ಜೀವನದಲ್ಲಿ ಒಮ್ಮೆ ನೊಂದು ಹೋಗಿದ್ದ ಜ್ಯೋತಿರಾಜ್ ಚಿತ್ರದುರ್ಗ ಕೋಟೆಯಲ್ಲಿ ಜೀವನ ಕೊನೆಗಾಣಿಸಲು ಯೋಚಿಸಿದ್ದರಂತೆ. ಆದರೆ ಕೊನೆಗೂ ಅದರಿಂದ ಹೊರಬಂದು ಹೊಸ ಜೀವನ, ಉತ್ಸಾಹವನ್ನು ಕಂಡುಕೊಂಡಿದ್ದಾರೆ. ಈಗ ತಾವು ಮಾತ್ರ ಹತ್ತುವುದಲ್ಲದೆ ಯುವಕ, ಯುವತಿಯರಿಗೆ ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ಅವರನ್ನು ಚಾಂಪಿಯನ್ ಷಿಪ್ ಗೆ, ಒಲಿಂಪಿಕ್ಸ್ ಗೆ ಸಜ್ಜು ಮಾಡಲು ನೋಡುತ್ತಿದ್ದಾರೆ.ಇದಕ್ಕಾಗಿ ಅವರಿಗೆ ಕೃತಕ ಗೋಡೆ ಬೇಕು, ಅದಕ್ಕೆ 50 ಲಕ್ಷ ರೂಪಾಯಿ ಖರ್ಚಾಗುತ್ತದೆ. 

ಅಂತರಾಷ್ಟ್ರೀಯ ಗುಣಮಟ್ಟದ ಗೋಡೆಗೆ 1 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಬಹುದಾಗಿದ್ದು, ಚಿತ್ರದುರ್ಗದಲ್ಲಿ ಹಣ ಸಂಗ್ರಹಿಸಲು ಹರಸಾಹಸ ಡುತ್ತಿದ್ದಾರೆ. ರಾಷ್ಟ್ರಮಟ್ಟದ ಗೋಡೆ ಹತ್ತುವ ಸ್ಪರ್ಧೆಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಹ ನನಗೆ 50 ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ಕೋತಿರಾಜ್ ಹೇಳುತ್ತಾರೆ.

ನಿಧಿಸಂಗ್ರಹ ಮೂಲಕ ಕೃತಕ ಗೋಡೆ ನಿರ್ಮಿಸಲು ಜಿಲ್ಲಾಡಳಿತವು ಭೂಮಿಯನ್ನು ಗುತ್ತಿಗೆಗೆ ನೀಡಬೇಕೆಂದು ಹೇಳುತ್ತಿದ್ದಾರೆ. ಭೂಮಿಯನ್ನು 20 ವರ್ಷಗಳ ಕಾಲ ಗುತ್ತಿಗೆಗೆ ನೀಡಿ, ರಾಷ್ಟ್ರೀಯ ಮತ್ತು ಒಲಿಂಪಿಕ್ ಕ್ರೀಡಾಕೂಟಗಳಿಗೆ ಯುವಕರಿಗೆ ತರಬೇತಿ ನೀಡುವುದು ನನ್ನ ಇಚ್ಛೆ ಎನ್ನುತ್ತಾರೆ. ಅವರ ಕೌಶಲ್ಯವು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕೃತಕ ಗೋಡೆಯಿರುವ ಬೆಂಗಳೂರಿಗೆ ಬಂದು ಅಭ್ಯಾಸ ಮಾಡಬೇಕೆಂದು ಕ್ರೀಡಾ ಅಧಿಕಾರಿಗಳು ಬಯಸುತ್ತಾರೆ. ಆದರೆ ಅವರು ಚಿತ್ರದುರ್ಗ ತೊರೆದು ಬರಲು ಸಿದ್ಧರಿಲ್ಲ. 

ನಾನು ಕಳೆದ 15 ವರ್ಷಗಳಿಂದ ಚಿತ್ರದುರ್ಗ ಕೋಟೆಯ ಗೋಡೆಗಳನ್ನು ನೋಡಿ, ಹತ್ತಿ ಬೆಳೆದಿದ್ದೇನೆ, ನಾನು ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಬರುವ ಜನರನ್ನು ಇಲ್ಲಿ ರಂಜಿಸುತ್ತೇನೆ. ಚಿತ್ರದುರ್ಗದಲ್ಲಿ ಗೋಡೆ ನಿರ್ಮಾಣವಾದರೆ ಜಿಲ್ಲೆ ಜನಮನ ಸೆಳೆಯಲಿದ್ದು, ಯುವಕರು ಇಲ್ಲಿ ತರಬೇತಿ ಪಡೆಯಬಹುದು ಎನ್ನುತ್ತಾರೆ.

<strong>ಜ್ಯೋತಿ ರಾಜ್ ಬಳಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು</strong>
ಜ್ಯೋತಿ ರಾಜ್ ಬಳಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು

ಅವರ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೆ, ಇನ್ನೂ ಅನೇಕರು ರಾಜ್ ಅವರ ತಂತ್ರಗಳನ್ನು ಬಳಸಿಕೊಂಡು ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ. ಅರ್ಜುನ್ (19), "ನಾನು 2008 ರಲ್ಲಿ ನನ್ನ ತಂದೆಯೊಂದಿಗೆ ಕೋಟೆಗೆ ಬಂದಾಗ ನನಗೆ ಎಂಟು ವರ್ಷ. ನಾನು ರಾಜ್ ಸರ್ ಗೋಡೆಯನ್ನು ಹತ್ತಿದ್ದನ್ನು ನೋಡಿದೆ, ಅದನ್ನು ಮಾಡಲು ಬಯಸಿ ಕೇಳಿದೆ, ನನಗೆ ತರಬೇತಿ ನೀಡಲು ಸಂತೋಷಪಟ್ಟರು. ನಾನು ಇದುವರೆಗೆ ಐದು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದೇನೆ ಎನ್ನುತ್ತಾರೆ.

ಭೂಮಿಕಾ (17) ಮಾತನಾಡಿ, ‘ಬಾಲ್ಯದಿಂದಲೂ ಗೋಡೆ ಹತ್ತುವ ಕನಸು ಕಂಡಿದ್ದು, 5ನೇ ತರಗತಿಯಿಂದ ತರಬೇತಿ ಪಡೆಯುತ್ತಿದ್ದು, ಮೂರು ಸಬ್ ಜೂನಿಯರ್ ವಾಲ್ ಕ್ಲೈಂಬಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದೇನೆ. ನಾನು ಮಿಲಿಟರಿ ಅಥವಾ ಪೊಲೀಸ್ ಇಲಾಖೆಗೆ ಸೇರಲು ಬಯಸುತ್ತೇನೆ ಎನ್ನುತ್ತಾರೆ. 

ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿ ಪವನ್, ಪಿಯು ಕಾಲೇಜಿನಲ್ಲಿದ್ದಾಗ ಪ್ರಾರಂಭವಾಯಿತು. ಜಿಲ್ಲಾ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದೇನೆ ಮತ್ತು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಅವರು ಹೇಳಿದರು.

ತಮ್ಮ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಪರಿಗಣಿಸುತ್ತಾರೆ, ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮತ್ತು ಆಹಾರದ ವೆಚ್ಚವನ್ನು ಭರಿಸುವ ಮೂಲಕ ಸಹಾಯ ಮಾಡುತ್ತಾರೆ. ಅವರ ಇನ್ನೊಂದು ಸಾಮಾಜಿಕ ಕರ್ತವ್ಯವೆಂದರೆ ಸರೋವರಗಳು, ನದಿಗಳು ಮತ್ತು ವಿಶ್ವಪ್ರಸಿದ್ಧ ಜೋಗ ಜಲಪಾತದಿಂದ ದೇಹಗಳನ್ನು ಹೊರತೆಗೆಯುವುದು.

ನಾನು ಎಷ್ಟು ಶವಗಳನ್ನು ಹೊರತೆಗೆದಿದ್ದೇನೆ ಎಂದು ಲೆಕ್ಕವಿಟ್ಟಿಲ್ಲ,  ಜೋಗ್ ಫಾಲ್ಸ್‌ನಲ್ಲಿ ಒಂಬತ್ತು ದೇಹಗಳು ಸೇರಿದಂತೆ 400ಕ್ಕಿಂತ ಹೆಚ್ಚು ಇರಬಹುದು ಎಂದು ಹೇಳುತ್ತಾರೆ. ಹೀಗೆ ಸಾಹಸಗಳನ್ನು ಮಾಡುವಾಗ ಅನೇಕ ಅಪಾಯಗಳು ಎದುರಾದದ್ದು ಉಂಟು, 2012ರಲ್ಲಿ ಮಳೆಗಾಲದ ದಿನದಂದು ಕೋಟೆಯ ಗೋಡೆಯಿಂದ ಜಾರಿ ಬಿದ್ದಾಗ ರಾಜ್‌ಗೆ ದೊಡ್ಡ ಕಾಲು ಮುರಿತವಾಗಿತ್ತು. 2018ರಲ್ಲಿ ಜೋಗ ಜಲಪಾತದಿಂದ ದೇಹವನ್ನು ಮೇಲಕ್ಕೆತ್ತುವ ವೇಳೆ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಗ ಶ್ರೀ ಮುರುಘಾ ಮಠದ ಆಸ್ಪತ್ರೆಯವರು ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಶ್ರೀ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದು ರಾಜ್ ಹೇಳುತ್ತಾರೆ. 

<strong>ಜ್ಯೋತಿ ರಾಜ್ ಬಳಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ</strong>
ಜ್ಯೋತಿ ರಾಜ್ ಬಳಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ

ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಒಬ್ಬಂಟಿ: ಜ್ಯೋತಿ ರಾಜ್ 3 ವರ್ಷದ ಮಗುವಾಗಿದ್ದಾಗ ತಮಿಳು ನಾಡಿನ ಥೇನಿ ಜಿಲ್ಲೆಯ ಜಾತ್ರೆಯೊಂದಕ್ಕೆ ಹೋಗಿದ್ದಾಗ ಕುಟುಂಬದಿಂದ ನಾಪತ್ತೆಯಾಗಿದ್ದನಂತೆ. ಆಗ ಬಾಗಲಕೋಟೆಯಲ್ಲಿ ಸಿಹಿತಿಂಡಿ ವ್ಯಾಪಾರ ಮಾಡುತ್ತಿದ್ದ ಕುಟುಂಬವೊಂದು ಮಗುವನ್ನು ಕಾಪಾಡಿ ಮನೆಗೆ ಕರೆದುಕೊಂಡು ಬಂದು 13 ವರ್ಷದವರೆಗೆ ಸಾಕಿದ್ದರು. ಅಲ್ಲಿ ನಂತರ ಆತನಿಗೆ ಕಿರುಕುಳ ನೀಡುತ್ತಿದ್ದರಿಂದ ಒಂದು ದಿನ ಹೇಳದೆ ಕೇಳದೆ ತಪ್ಪಿಸಿಕೊಂಡು ಬಂದನು. ಚಿತ್ರದುರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಹದೇವಪ್ಪ ಎಂಬ ರೈತ ಕಾಪಾಡಿ ಮನೆಗೆ ಕರೆದುಕೊಂಡು ಹೋದರಂತೆ. ಮಹದೇವಪ್ಪ ಮೇಸ್ತ್ರಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಗ ನೆರೆಹೊರೆಯವರು ಅಣಕಿಸುತ್ತಿದ್ದಾಗ ಜ್ಯೋತಿರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು. 

ಜ್ಯೋತಿರಾಜ್ ಜೀವನಾಧಾರಿತ ಇನ್ಕ್ರೆಡಿಬಲ್ ಮಂಕಿ ಮ್ಯಾನ್ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ. ಆಸ್ಟ್ರೇಲಿಯಾದ ಚಿತ್ರ ನಿರ್ದೇಶಕ ಸ್ಟಾನ್ಲಿ ಜೋಸೆಫ್ ಇದನ್ನು ನಿರ್ದೇಶಿಸಿದ್ದು ಕೆಲವೊಂದು ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಚಿತ್ರದುರ್ಗದ ಸುತ್ತಮುತ್ತ ಚಿತ್ರೀಕರಣ ಮತ್ತು ವಿಶ್ವದ ಅತಿದೊಡ್ಡ ಜಲಪಾತ ವೆನೆಝುವೆಲಾದ ಏಂಜೆಲ್ ಫಾಲ್ಸ್ ನ ಚಿತ್ರೀಕರಣ ಬಾಕಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com