ಗದಗ: ಇಟಗಿ ಪಟ್ಟಣದ ದೇವಸ್ಥಾನದ ಮುಂದೆ ಕಲ್ಲುಗಳಲ್ಲಿ ಕೇಳಿಬರುತ್ತಿದೆ ಸಂಗೀತ; ಜನರಲ್ಲಿ ಹೆಚ್ಚಿದ ಕುತೂಹಲ
ಇದು ಕಲ್ಲಿನ ಸಂಗೀತ, ಅದಕ್ಕಿಂತ ಹೆಚ್ಚಾಗಿ ಸಂಗೀತ ಸೃಷ್ಟಿ ಮಾಡುವ ಬಂಡೆಗಳು. ಗದಗ ಜಿಲ್ಲೆಯ ಇಟಗಿ ಪಟ್ಟಣದ ಬಳಿ ದೇವಸ್ಥಾನದ ಮುಂದೆ ಬಿದ್ದಿರುವ ಕಲ್ಲಿನ ತುಂಡೊಂದು ಇದೀಗ ಭಾರೀ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಪ್ರವಾಸಿಗರು ಸಂಗೀತ ಕೇಳಲು, ಸಂಗೀತ ಉಂಟುಮಾಡಲು ಕಲ್ಲನ್ನು ಕುಟ್ಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published: 09th November 2021 10:45 AM | Last Updated: 09th November 2021 02:19 PM | A+A A-

ರೋಣ ತಾಲ್ಲೂಕಿನ ಇಟಗಿಯ ದೇವಸ್ಥಾನದ ಮುಂದಿನ ಕಲ್ಲುಗಳಲ್ಲಿ ಸಂಗೀತ ಸೃಷ್ಟಿ
ಗದಗ: ಇದು ಕಲ್ಲಿನ ಸಂಗೀತ, ಅದಕ್ಕಿಂತ ಹೆಚ್ಚಾಗಿ ಸಂಗೀತ ಸೃಷ್ಟಿ ಮಾಡುವ ಬಂಡೆಗಳು. ಗದಗ ಜಿಲ್ಲೆಯ ಇಟಗಿ ಪಟ್ಟಣದ ಬಳಿ ದೇವಸ್ಥಾನದ ಮುಂದೆ ಬಿದ್ದಿರುವ ಕಲ್ಲಿನ ತುಂಡೊಂದು ಇದೀಗ ಭಾರೀ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಪ್ರವಾಸಿಗರು ಸಂಗೀತ ಕೇಳಲು, ಸಂಗೀತ ಉಂಟುಮಾಡಲು ಕಲ್ಲನ್ನು ಕುಟ್ಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಿಥೋಫೋನಿಕ್ ಬಂಡೆಗಳು ಎಂದು ಕರೆಯಲ್ಪಡುವ ಇದೇ ರೀತಿಯ ಕಲ್ಲುಗಳನ್ನು ಹಂಪಿಯ ಪ್ರಸಿದ್ಧ ಸಂಗೀತ ಸ್ತಂಭಗಳಲ್ಲಿ ಬಳಸಲಾಗಿದೆ. ಮುಳಗುಂದ ಪಟ್ಟಣದ ಸಮೀಪವಿರುವ ನೀಲಗುಂದ ಬೆಟ್ಟ, ಇಟಗಿ ಬಳಿಯ ಬಸವೇಶ್ವರ ದೇವಸ್ಥಾನ, ರೋಣ ತಾಲೂಕಿನ ಮುಗಳಿ ಮತ್ತು ಇಟಗಿಯ ಭೀಮಾಂಬಿಕಾ ದೇವಸ್ಥಾನದಲ್ಲೂ ಇವು ಕಂಡುಬರುತ್ತವೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರೋಣ, ನರಗುಂದ, ಗಜೇಂದ್ರಗಡ ಮತ್ತು ಗದಗದ ಜನರು ಕಲ್ಲಿನಿಂದ ಹೊರಹೊಮ್ಮುವ ಸಂಗೀತದ ಸ್ವರಗಳನ್ನು ಪರಿಶೀಲಿಸಲು ಇಟಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಗ್ರಾಮದ ಹಿರಿಯರು ಗಂಗಲಗಲ್ಲು ಎನ್ನುತ್ತಾರೆ. ಗಂಗಲ್ ಎಂದರೆ ಊಟಕ್ಕೆ ಬಳಸುವ ಸ್ಟೀಲ್ ಅಥವಾ ಲೋಹದ ತಟ್ಟೆ ಮತ್ತು ಕಲ್ಲು ಎಂದರೆ ಕಲ್ಲು. ಒಂದು ಕಲ್ಲನ್ನು ಹೊಡೆದಾಗ ಅದು ಲೋಹದ ತಟ್ಟೆಗೆ ಹೊಡೆದಂತೆ ಧ್ವನಿಸುತ್ತದೆ.
These are known as musical stones or ringing rocks, situated near Itagi Bheemambika temple of Ron taluk #Gadag. People who visit Itagi will come and ring these rocks by hitting with stone.@santwana99 @ramupatil_TNIE @Amitsen_TNIE @XpressBengaluru pic.twitter.com/HjHt4F6vZT
— Raghu Koppar (@raghukoppar) November 7, 2021
ನಾವು ಸಂಗೀತದ ಬಂಡೆಗಳನ್ನು ಬಹಳ ಹಿಂದಿನಿಂದಲೂ ನೋಡಿದ್ದೇವೆ. ಕಳೆದ 80-90 ವರ್ಷಗಳಿಂದ ಈ ಬಂಡೆಗಳು ಇಲ್ಲಿ ಬಿದ್ದಿವೆ ಎಂದು ಕೆಲವು ಹಿರಿಯರು ಹೇಳಿದ್ದಾರೆ. ಕೆಲವು ಶಿಲ್ಪಿಗಳು ಬಸವಣ್ಣನ ಮೂರ್ತಿಯನ್ನು ಮಾಡಲು ಅವುಗಳನ್ನು ಇಲ್ಲಿಗೆ ತಂದಿದ್ದರು, ಆದರೆ ಅವು ಸಂಗೀತ ಶಿಲೆಗಳು ಎಂದು ತಿಳಿದ ನಂತರ ಅವರು ನಿಲ್ಲಿಸಿದರು ಎಂದು ಮುಳಗಿ ಗ್ರಾಮದ ನಿವಾಸಿ ಶರಣಪ್ಪ ಮಲ್ಲಾಪುರ ಹೇಳುತ್ತಾರೆ.
ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇಟಗಿಯ ಶಿವಲಿಂಗಸರ್ಜ ದೇಸಾಯಿ, ‘ಈ ಕಲ್ಲುಗಳಲ್ಲಿ ಕಬ್ಬಿಣ ಮತ್ತು ಇತರ ಲೋಹಗಳ ಸಮೃದ್ಧ ನಿಕ್ಷೇಪವಿರುವುದರಿಂದ ಈ ಶಬ್ದಗಳನ್ನು ಮಾಡುತ್ತವೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಇಟಗಿಯ ಶಿವಲಿಂಗಸರ್ಜ ದೇಸಾಯಿ.