ಪೂಜಾ ಹರೀಶ್
ಪೂಜಾ ಹರೀಶ್

'ಮಲ್ನಾಡ್ ಕನ್ನಡ ಕಾರ್ಟೂನ್' ಮೂಲಕ ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಪೂಜಾ ಹರೀಶ್ ಜನಪ್ರಿಯ

ಕನ್ನಡ ಅನೇಕ ಪ್ರಾಂತೀಯ ಭಾಷೆಗಳ ಸಂಗಮವಾಗಿದೆ. ವಿವಿಧ ಉಚ್ಚಾರಣೆಗಳು, ವಿವಿಧ ಪ್ರದೇಶಗಳ ಸಂಸ್ಕೃತಿ, ಪ್ರದೇಶಗಳ ಜನಜೀವನ, ಸಂಸ್ಕೃತಿಯನ್ನು ಕನ್ನಡ ಭಾಷೆ ವ್ಯಾಖ್ಯಾನಿಸುತ್ತದೆ.

ಶಿವಮೊಗ್ಗ: ಕನ್ನಡ ಅನೇಕ ಪ್ರಾಂತೀಯ ಭಾಷೆಗಳ ಸಂಗಮವಾಗಿದೆ. ವಿವಿಧ ಉಚ್ಚಾರಣೆಗಳು, ವಿವಿಧ ಪ್ರದೇಶಗಳ ಸಂಸ್ಕೃತಿ, ಪ್ರದೇಶಗಳ ಜನಜೀವನ, ಸಂಸ್ಕೃತಿಯನ್ನು ಕನ್ನಡ ಭಾಷೆ ವ್ಯಾಖ್ಯಾನಿಸುತ್ತದೆ. ಮಲೆನಾಡು ಹಾಡಿನಿಂದ ಹಿಡಿದು ಉತ್ತರ ಕರ್ನಾಟಕ ಕನ್ನಡ ಉಚ್ಛಾರಣೆಯವರೆಗೆ ಮಂಡ್ಯ ಗೌಡ್ರು ಶೈಲಿಯವರೆಗೆ ಕರ್ನಾಟಕದಲ್ಲಿ ಆಯಾ ಪ್ರದೇಶಗಳಿಗನುಗುಣವಾಗಿ ಕನ್ನಡ ಭಾಷೆಯ ಉಚ್ಛಾರಣೆ, ಮಾತಿನ ಶೈಲಿಯಲ್ಲಿ ಬದಲಾವಣೆಯಾಗುತ್ತಿರುತ್ತದೆ.

ಜಾಗತೀಕರಣ, ಐಟಿ ಕ್ರಾಂತಿಯ ಆಗಮನದ ನಂತರ ರಾಜ್ಯ ಮತ್ತು ದೇಶಾದ್ಯಂತ 'ಏಕ-ಸಂಸ್ಕೃತಿ' ಇತ್ತೀಚಿನ ದಿನಗಳಲ್ಲಿ ಕಾಣುತ್ತಿದೆ. ಇದು ಜೀವನಶೈಲಿ, ಸಂಪ್ರದಾಯ, ಸಂಸ್ಕೃತಿಯನ್ನು ಒಳಗೊಂಡಂತೆ ಜನರ ಜೀವನವನ್ನು ಬದಲಾಯಿಸಿದೆ. ನಮ್ಮ ದೈನಂದಿನ ಭಾಷೆಯ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಗೃಹಿಣಿ ಪೂಜಾ ಹರೀಶ್ ಅವರು ಸ್ಥಳೀಯ ಮಲೆನಾಡು ಆಡುಭಾಷೆಯನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪೂಜಾ ಅವರ ಕಿರು ಹಾಸ್ಯ ಚಿತ್ರಗಳು ಶ್ಲಾಘನೀಯ ಪರಿಣಾಮವನ್ನು ಬೀರಿವೆ ಮತ್ತು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ.

ಚಿತ್ರದಲ್ಲು ಮೂರು ಮುಖ್ಯ ಪಾತ್ರಗಳಿವೆ. ತಾಯಿ ಸುಶೀಲಕ್ಕ, ಅವರ ಮಗಳು ಪುಟ್ಟಿ ಮತ್ತು ಮಗ ತಮ್ಮಣ್ಣಿ. ಒಂದು ಕಡುಬಿನ ಕಥೆ ಚಿತ್ರವು ಉತ್ತಮ ಯಶಸ್ಸನ್ನು ಕಂಡಿದೆ. ಇದರಲ್ಲಿ ಸುಶೀಲಕ್ಕ ಪುಟ್ಟಿಗೆ ಒಂದು ವಾರಕ್ಕೂ ಹೆಚ್ಚು ಕಾಲ ಅದೇ ಕಡಬು ಉಪಹಾರವನ್ನು ನೀಡುತ್ತಾರೆ. ಅದರಲ್ಲಿ ವಿಭಿನ್ನ ಸೈಡ್ ಪದಾರ್ಥಗಳಿರುತ್ತವೆ. ಸಾಂಬಾರ್, ಬದನೆಕಾಯಿ ಚಟ್ನಿ ಮತ್ತು ಮಾಂಸಾಹಾರಿ ಕರಿಗಳನ್ನು ಹೊಂದಿರುತ್ತಾರೆ. ಮಲೆನಾಡಿನ ಸಾಂಪ್ರದಾಯಿಕ ಖಾದ್ಯವಾದ ಹಲಸಿನ ಹಣ್ಣಿನ ಎಲೆಯಲ್ಲಿ ಬೇಯಿಸಿದ ಕೊಟ್ಟೆ ಕಡಬು ತಿನ್ನಲು ಮಗಳನ್ನು ಮನವೊಲಿಸುವ ಪ್ರಯತ್ನ ಮಾಡುತ್ತಾರೆ.

ಒಂದು ಕಡುಬಿನ ಕಥೆ ಯುಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ನಂತರ ಮಲೆನಾಡು ಪ್ರದೇಶದಾದ್ಯಂತ ವೈರಲ್ ಆಗಿದ್ದು, ಪ್ರಪಂಚದಾದ್ಯಂತದ ಮಲೆನಾಡು ಜನರ ಮೆಚ್ಚುಗೆಯನ್ನು ಸೆಳೆಯಿತು. ಪೂಜಾ ಅವರ ಕಾಮಿಕ್ ಚಲನಚಿತ್ರಗಳು ಗೃಹಿಣಿಯಾಗಿ ಅವರ ಕರ್ತವ್ಯಗಳಲ್ಲಿ ಹೊಸತನದ ಹುಡುಕಾಟದಲ್ಲಿ ತಮ್ಮ ಮೂಲವನ್ನು ಹೊಂದಿವೆ. ವಿಶೇಷವಾದ ಮಲೆನಾಡು ಖಾದ್ಯಗಳನ್ನು ತಯಾರಿಸುವ ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಆಲೋಚನೆಯನ್ನು ಅವರು ತೋರಿಸಿದ್ದಾರೆ. ಇದಕ್ಕೆ ತಮ್ಮ ಪತಿ ನಂದಗೋಪಾಲ್ ಕುಟುಂಬದವರು ಸಹಕರಿಸಿದ್ದಾರೆ ಎಂದಿದ್ದಾರೆ.

ವಿಭಿನ್ನವಾಗಿ ಆಸಕ್ತಿದಾಯಕವಾದದ್ದನ್ನು ಮಾಡುವಂತೆ ಪೂಜಾಗೆ ಪತಿ ಸಲಹೆ ನೀಡಿದರಂತೆ., ವಿಭಿನ್ನವಾಗಿ ಯೋಚಿಸಿದ ಪೂಜಾ ಮಲೆನಾಡು ಪ್ರದೇಶದ ಮೌಲ್ಯಗಳು ಮತ್ತು ಇತರ ಆಸಕ್ತಿದಾಯಕ ವಿಷಯಗಳನ್ನು ಹೊಂದಿರುವ ಕಿರು ಕಾಮಿಕ್ ಚಲನಚಿತ್ರಗಳನ್ನು ನಿರ್ಮಿಸಿದರು. ಆ್ಯಪ್‌ನ ಸಹಾಯದಿಂದ, 4-9 ನಿಮಿಷಗಳ ಅವಧಿಯ ಸಣ್ಣ ಘಟನೆಯನ್ನು ವಿವರಿಸಲು ನಾನು ಭಾಷೆಯನ್ನು ಬೆರೆಸಿದೆ ಎನ್ನುತ್ತಾರೆ.

ರಾತ್ರೋರಾತ್ರಿ, ಸುಶೀಲಕ್ಕನ ಪಾತ್ರವು ಸ್ಥಳೀಯ ಆಡುಭಾಷೆ ಮತ್ತು ಪ್ರಸ್ತುತಿ ಶೈಲಿಯೊಂದಿಗೆ ಜನಪ್ರಿಯವಾಯಿತು ಹತ್ತು ಮೀನಿನ ಕಥೆ, ಹೆಗ್ಗಲಳ್ಳಿ ಕಥೆ ಮತ್ತು ಶಾಲೆಯ ಮಕ್ಕಳ ಕಥೆಯಂತಹ ಇನ್ನೂ ಅನೇಕ ಕಿರು ಕಾಮಿಕ್ ಚಲನಚಿತ್ರಗಳಿಗೆ ಕಾರಣವಾಯಿತು. ಸುಶೀಲಕ್ಕಗಾಗಿ ಪೂಜಾ ಅವರ ವಾಯ್ಸ್‌ಓವರ್ ಯಶಸ್ವಿಯಾಯಿತು ಇಂದು ಯೂಟ್ಯೂಬ್ ಮತ್ತು ಫೇಸ್‌ಬುಕ್ ಎರಡರಲ್ಲೂ 30,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 

ಈ ಯಶಸ್ಸು ಪೂಜಾರನ್ನು ವಿಭಿನ್ನವಾಗಿ ಯೋಚಿಸುವಂತೆ ಮಾಡಿತು. ಮಲೆನಾಡು ಪ್ರದೇಶದಲ್ಲಿ ಬಸ್ ಸಾರಿಗೆಯ ಗಂಭೀರ ಸಮಸ್ಯೆಯನ್ನು ತೆಗೆದುಕೊಂಡರು ಮಲೆನಾಡು ಜನರ ಸಂಚಾರಕ್ಕೆ ಸಾರಿಗೆ ಬಸ್ಸಿನ ಸಮಸ್ಯೆ ಬಗ್ಗೆ ಚಿತ್ರಿಸಿದರು. 

ಸುಶೀಲಕ್ಕ ಪಾತ್ರ

ಸ್ಥಳೀಯ ಜನರಲ್ಲಿ ಸುಶೀಲಕ್ಕ ಪಾತ್ರದ ಜನಪ್ರಿಯತೆಯನ್ನು ಕಂಡು ಶಿವಮೊಗ್ಗದ ಸೈಬರ್ ಕ್ರೈಂ ಬ್ರಾಂಚ್ ಪೂಜಾ ಹರೀಶ್ ಅವರ ಸೃಜನಶೀಲತೆಯನ್ನು ಆನ್‌ಲೈನ್ ಬ್ಯಾಂಕ್ ವಂಚನೆ ಮತ್ತು ಅವರು ಹೇಗೆ ಮೋಸ ಹೋಗಬಹುದು ಎಂಬುದರ ಕುರಿತು ಜನರಿಗೆ ತಿಳಿಸಲು ಬಳಸಲು ನಿರ್ಧರಿಸಿತು. ಸೈಬರ್ ಕ್ರೈಂ ಬ್ರಾಂಚ್ ಇನ್ಸ್‌ಪೆಕ್ಟರ್ ಗುರುರಾಜ್ ಕರ್ಕಿ, ಪೂಜಾ ಅವರ ಬೆಂಬಲದೊಂದಿಗೆ, ಆನ್‌ಲೈನ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಲು ಒಂಬತ್ತು ನಿಮಿಷಗಳ ಕಿರು ಕಾಮಿಕ್ ಚಲನಚಿತ್ರವನ್ನು ಮಾಡಿದರು.

ಪೂಜಾ ಹರೀಶ್ ತಮ್ಮ ಯಶಸ್ಸಿಗೆ ಪತಿ ನಂದಗೋಪಾಲ್, ತಾಯಿ ವಸಂತಿ ಹರೀಶ್, ಅತ್ತೆಯಂದಿರಾದ ಜಿ ಡಿ ವಿಷ್ಣುಮೂರ್ತಿ ಮತ್ತು ಗೌರಿ ಅವರೇ ಕಾರಣ ಎನ್ನುತ್ತಾರೆ. ಎಂಥ ಕಥೆ ಮಾರಾಯ ಎಂಬ ಕನ್ನಡ ಚಲನಚಿತ್ರಕ್ಕೆ ಪೂಜಾ ತನ್ನ ಧ್ವನಿಯನ್ನು ನೀಡುತ್ತಿದ್ದಾರೆ ಮತ್ತು ಕಾರ್ತಿಕ್ ಆದಿತ್ಯ ಅವರ ಕಾಡು ಹಾದಿಯ ಜಾಡು ಹತ್ತಿಗೆ ಕಥೆ ಹೇಳುತ್ತಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com