The New Indian Express
ಬೆಂಗಳೂರು: ಮಕ್ಕಳು ಬೋರ್ ಕಳೆಯಲು ಬೋರ್ಡ್ ಗೇಮ್ ಆಡುವುದನ್ನು ನೋಡಿದ್ದೀರಿ. ಬೆಂಗಳೂರಿನ ಬಾಲಕನೊಬ್ಬ ತನ್ನದೇ ಪರಿಕಲ್ಪನೆಯಲ್ಲಿ Treasures of Thiruvananthapuram ಎನ್ನುವ ಬೋರ್ಡ್ ಗೇಮೊಂದನ್ನು ಅಭಿವೃದ್ಧಿಪಡಿಸಿದ್ದಾನೆ.
11 ವರ್ಷದ ಬಾಲಕ ಇಶಾನ್ ಲಾಕ್ ಡೌನ್ ಸಮಯದಲ್ಲಿ ಕುಟುಂಬ ಸದಸ್ಯರೊಡನೆ ಬೋರ್ಡ್ ಗೇಮ್ ಆಡುತ್ತಿದ್ದ. ಇತಿಹಾಸ ಹಿನ್ನೆಲೆಯುಳ್ಲ ಬೋರ್ಡ್ ಗೇಮ್ ಎಂದರೆ ಅವನಿಗೆ ತುಂಬಾ ಇಷ್ಟ. ಹೀಗಾಗಿ ಚಂದ್ರಗುಪ್ತ ಮೌರ್ಯ ಮತ್ತಿತರ ಐತಿಹಾಸಿಕ ಪುರುಷರ ಬೋರ್ಡ್ ಗೇಮ್ ಆಡುತ್ತಿದ್ದ. ಈ ಸಮಯದಲ್ಲಿಯೇ ಇಶಾನ್ ಗೆ ತಾನೂ ಏಕೆ ಇತಿಹಾಸವನ್ನು ಆಧರಿಸಿ ಒಂದು ಹೊಸ ಬೋರ್ಡ್ ಸೃಷ್ಟಿಸಬಾರದು ಎನ್ನುವ ಯೋಚನೆ ಮೊಳೆಯಿತು.
ಇದನ್ನೂ ಓದಿ: ಸರ್ಕಾರಕ್ಕೆ 11.7 ಕೋಟಿ ರೂ. ಪಾವತಿ ಅಸಾಧ್ಯ: ನ್ಯಾಯಾಲಯಕ್ಕೆ ಪದ್ಮನಾಭಸ್ವಾಮಿ ದೇವಾಲಯ ಸ್ಪಷ್ಟನೆ
ಅದಕ್ಕಾಗಿ ಆತ ಆರಿಸಿಕೊಂಡಿದ್ದು ತಿರುವನಂತಪುರದ ಪದ್ಮನಾಭ ದೇಗುಲವನ್ನು. ದೇಗುಲದಡಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ನಿಧಿ ಇದೆ ಎನ್ನುವ ಬಗ್ಗೆ ಈ ಹಿಂದೆ ಸುದ್ದಿಯಾಗಿದ್ದು ಅನೇಕರಿಗೆ ನೆನಪಿರಬಹುದು. ಆದನ್ನೇ ಪ್ರೇರಣೆಯಾಗಿ ಪಡೆದು ನಿಧಿ ಹುಡುಕುವ ಬೋರ್ಡ್ ಗೇಮನ್ನು ಇಶಾನ್ ರೂಪಿಸಿದ್ದಾನೆ. ಅದರ ಹೆಸರು 'ಟ್ರೆಶರ್ಸ್ ಆಫ್ ತಿರುವನಂತಪುರಂ'
ಇದನ್ನೂ ಓದಿ: ಸಲ್ಮಾನ್ ಖಾನ್ ಆಕ್ಸಿಡೆಂಟ್ ಪ್ರಕರಣ ಆಧರಿಸಿದ ಹಿಟ್ ಅಂಡ್ ರನ್ ವಿಡಿಯೊ ಗೇಮ್ ಗೆ ತಾತ್ಕಾಲಿಕ ನಿರ್ಬಂಧ
ಆಟವನ್ನು ಅಭಿವೃದ್ಧಿಪಡಿಸುವ ಮೊದಲು ಆತ ಸಂಶೋಧನೆ ನಡೆಸಿದ್ದಾನೆ ಎನ್ನುವುದು ವಿಶೇಷ. ಇಶಾನ್ ಬೆಂಗಳೂರಿನ ಎಕ್ಯಾ ಶಾಲೆಯ ವಿದ್ಯಾರ್ಥಿ. ಆನ್ ಲೈನ್ ಆಟಗಳನ್ನು ಆಡುವುದಕ್ಕೆ ಬದಲಾಗಿ ಮಕ್ಕಳು ಬೋರ್ಡ್ ಗೇಮುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಲಬೇಕು ಎನ್ನುವುದು ಇಶಾನ್ ಅಭಿಪ್ರಾಯ.