The New Indian Express
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಆಕ್ಸಿಡೆಂಟ್ ಪ್ರಕರಣವನ್ನು ಆಧರಿಸಿ ಅಭಿವೃದ್ಧಿಪಡಿಸಿದ ಹಿಟ್ ಅಂಡ್ ರನ್ ವಿಡಿಯೊ ಗೇಮಿಗೆ ಮುಂಬೈ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆ ವಿಧಿಸಿದೆ.
ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಜೊತೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲವೆಂದು ಅತ್ತಿದ್ದ ನಟಿ ಭಾಗ್ಯಶ್ರೀ: ಸೂಪರ್ ಐಡಿಯ ಮಾಡಿದ ನಿರ್ದೇಶಕರು
ಮುಂಬೈನ ಪರೋಡಿ ಸ್ಟುಡಿಯೋ ಪ್ರೈವೇಟ್ ಸಂಸ್ಥೆ Selmon Bhoi ಎನ್ನುವ ಹೆಸರಿನ ಈ ವಿಡಿಯೋ ಗೇಮನ್ನು ನಿರ್ಮಿಸಿತ್ತು. ಈ ಗೇಮನ್ನು ಈ ಕೂಡಲೆ ಗೂಗಲ್ ಪ್ಲೇ ಸ್ಟೋರಿನಿಂದ ಕಿತ್ತು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ 'ಸಲ್ಮಾನ್ ಖಾನ್' ಗ್ರಾಮ ಕೇಳಿದ್ದೀರಾ? ಇಲ್ಲಿ ಮದುವೆಯಾಗಲು ಕ್ಯೂನಲ್ಲಿ ನಿಂತಿದ್ದಾರೆ ಯುವಕರು!
ಈ ಗೇಮ್ ಅಭಿವೃದ್ಧಿ ಪಡಿಸುವ ಮುನ್ನ ವಿಡಿಯೊ ಗೇಮ್ ಸಂಸ್ಥೆ ಸಲ್ಮಾನ್ ಖಾನ್ ಅವರ ಒಪ್ಪಿಗೆಯನ್ನು ಪಡೆಯಬೇಕಿತ್ತು. ಅವರ ಒಪ್ಪಿಗೆ ಪಡೆಯದೇ ಇರುವುದರಿಂದ ಕಾನೂನಿನ ಉಲ್ಲಂಘನೆಯಾಗುತ್ತದೆ. ಸಲ್ಮಾನ್ ಖಾನ್ ಅವರ ಜನಪ್ರಿಯತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತು.
ಹಿಟ್ ಅಂಡ್ ರನ್ ವಿಡಿಯೋ ಗೇಮ್ ವಿರುದ್ಧ ನಟ ಸಲ್ಮಾನ್ ಖಾನ್ ಪ್ರಕರಣ ದಾಖಲಿಸಿದ್ದರು. ಅದರಿಂದ ತಮ್ಮ ವರ್ಚಸ್ಸಿಗೆ ಹಾನಿಯುಂಟಾಗುತ್ತಿದೆ ಎಂದು ಅವರು ದೂರಿದ್ದರು.
ಇದನ್ನೂ ಓದಿ: ವಂಚನೆ ಪ್ರಕರಣ: ಸಲ್ಮಾನ್ ಖಾನ್, ಇತರ 8 ಮಂದಿಗೆ ಚಂಡೀಘರ್ ಪೋಲೀಸರಿಂದ ಸಮನ್ಸ್ ಜಾರಿ