200 ಕೋಟಿಗೆ ಬ್ಲ್ಯಾಕ್ ಮೇಲ್ ಮಾಡಿದ ನಟಿ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ

ಬಾಯ್ ಫ್ರೆಂಡ್ ಸುಕೇಶ್ ಜೊತೆ ಸೇರಿ ಉದ್ಯಮಿಯ ಪತ್ನಿಗೆ 200 ಕೋಟಿ ರೂ.ಗೆ ಬ್ಲ್ಯಾಕ್ ಮೇಲ್ ಮಾಡಿದ್ದರು. ಕೇರಳ ಮೂಲದ ನಟಿ ಲೀನಾ ಹಿಂದಿ ಸಿನಿಮಾ ಮದ್ರಾಸ್ ಕೆಫೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಲೀನಾ ಮರಿಯಾ ಪೌಲ್
ಲೀನಾ ಮರಿಯಾ ಪೌಲ್

ನವದೆಹಲಿ: ದೆಹಲಿ ಪೊಲೀಸರು ಲೀನಾ ಮರಿಯಾ ಪೌಲ್ ರನ್ನು 200 ಕೋಟಿಗೆ ಬ್ಲ್ಯಾಕ್ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಸುಕೇಶ್ ಚಂದ್ರಶೇಖರ್ ಎಂಬಾತ ಆಕೆಯ ಬಾಯ್ ಫ್ರೆಂಡ್ ಆಗಿದ್ದ.

ಅವನು ಉದ್ಯಮಿಯ ಪತ್ನಿಗೆ 200 ಕೋಟಿ ಬ್ಲ್ಯಾಕ್ ಮೇಲ್ ಗೆ ಒತ್ತಾಯಿಸಿದ್ದ. ಲೀನಾ ಕೂಡಾ ತನ್ನ ಬಾಯ್ ಫ್ರೆಂಡ್ ಕುಕೃತ್ಯದಲ್ಲಿ ಶಾಮೀಲಾಗಿದ್ದಳು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಫೋರ್ಟಿಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಶಿವಿಂದರ್ ಮೋಹನ್ ಎಂಬುವವರು ಹವಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದರು. 

ಈ ಸಂದರ್ಭ ಶಿವಿಂದರ್ ಪತ್ನಿಯನ್ನು ಸಂಪರ್ಕಿಸಿದ್ದ ಆರೋಪಿಗಳು 200 ಕೋಟಿ ರೂ. ಕೊಟ್ಟರೆ ಪತಿಯನ್ನು ಬಿಡುಗಡೆ ಮಾಡಿಸುವುದಾಗಿ ಒತ್ತಾಯಿಸಿದ್ದರು. ಇಲ್ಲದೇ ಹೋದರೆ ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡಿ ಶಿವಿಂದರ್ ಜೈಲಿನಿಂದ ಹೊರಬಾರದಂತೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. 

 ಈ ಸಂಬಂಧ ಉದ್ಯಮಿ ಪತ್ನಿ ಎಫ್ ಐ ಆರ್ ದಾಖಲಿಸಿದ್ದರು. ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com