ವೃತ್ತಿಯ ಪಾವಿತ್ರ್ಯತೆ ಎತ್ತಿ ಹಿಡಿದ ಹೃದ್ರೋಗ ತಜ್ಞ ಪದ್ಮನಾಭ ಕಾಮತ್; ಇವರ ನಿಸ್ವಾರ್ಥ ಸೇವೆ ಜನರ ಮೆಚ್ಚುಗೆಗೆ ಪಾತ್ರ!

ಮಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌. ಇವರ ನಿಸ್ವಾರ್ಥ ಸೇವೆಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೃದಯವಂತ ವೈದ್ಯರಾಗಿರುವ ಇವರು ವೃತ್ತಿಯ ಪಾವಿತ್ರ್ಯವನ್ನು ಎತ್ತಿಹಿಡಿದಿದ್ದಾರೆ. 
ಬಂಟ್ವಾಳದಲ್ಲಿರುವ ಕೆಎಸ್‌ಆರ್‌ಟಿಸಿ ಮೊಬೈಲ್ ಐಸಿಯು ಘಟಕದಲ್ಲಿ ಇಸಿಜಿ ಪರೀಕ್ಷೆಗೊಳಗಾಗಿರುವ ವ್ಯಕ್ತಿ ಹಾಗೂ ಹೃದ್ರೋಗ ತಜ್ಞ ಪದ್ಮನಾಭ ಕಾಮತ್'
ಬಂಟ್ವಾಳದಲ್ಲಿರುವ ಕೆಎಸ್‌ಆರ್‌ಟಿಸಿ ಮೊಬೈಲ್ ಐಸಿಯು ಘಟಕದಲ್ಲಿ ಇಸಿಜಿ ಪರೀಕ್ಷೆಗೊಳಗಾಗಿರುವ ವ್ಯಕ್ತಿ ಹಾಗೂ ಹೃದ್ರೋಗ ತಜ್ಞ ಪದ್ಮನಾಭ ಕಾಮತ್'

ಚಿತ್ರದುರ್ಗ: ಮಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್‌. ಇವರ ನಿಸ್ವಾರ್ಥ ಸೇವೆಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೃದಯವಂತ ವೈದ್ಯರಾಗಿರುವ ಇವರು ವೃತ್ತಿಯ ಪಾವಿತ್ರ್ಯವನ್ನು ಎತ್ತಿಹಿಡಿದಿದ್ದಾರೆ. 

ಕೆಲ ವರ್ಷಗಳ ಹಿಂದೆ ಬದುಕಿ ಬಾಳಬೇಕಿದ್ದ ಯುವಕನೊಬ್ಬನಿಗೆ ಹೃದಯ ಸ್ತಂಭನ ಎದುರಾಗಿದೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಈ ಯುವನಿಗೆ ಸೂಕ್ತ ಸಮಯಕ್ಕೆ ಸೂಕ್ತ ರೀತಿಯ ವೈದ್ಯಕೀಯ ಚಿಕಿತ್ಸೆ ಚಿಕಿತ್ಸೆ ಸಿಕ್ಕಿಲ್ಲ. ಕೇವಲ ಗ್ರಾಮೀಣ ಭಾಗದ ಯುವಕನೆಂಬ ಕಾರಣಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಯುವಕ ಸಾವನ್ನಪ್ಪಿದ್ದಾನೆ. 

ಈ ಘಟನೆ ಡಾ. ಪದ್ಮನಾಭ ಕಾಮತರ ‌ಹೃದಯವನ್ನು ಹಿಂಡಿತು. ಪ್ರಥಮ ಚಿಕಿತ್ಸೆ ಇಲ್ಲದೇ ಆ ವ್ಯಕ್ತಿ ಮೃತಪಟ್ಟಿದ್ದರು. ಆ ದಿನವೇ ಪದ್ಮನಾಭ ಅವರು ಹೃದ್ರೋಗಕ್ಕೆ ಒಳಗಾಗುವವರಿಗೆ ಅವರ ಊರಲ್ಲೇ ಚಿಕಿತ್ಸೆ ಸಿಗುವಂತೆ ಮಾಡಬೇಕೆಂದು ತೀರ್ಮಾನಿದರು. ಆಗ ರೂಪುಗೊಂಡಿದ್ದೇ 'ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ (ಸಿಎಡಿ-ಕ್ಯಾಡ್‌) ವಾಟ್ಸ್‌ಆಯಪ್‌ ಗ್ರೂಪ್‌. ಎಲ್ಲೇ ಹೃದಯಾಘಾತ ಸಂಭವಿಸಿದರೂ ಸ್ಥಳೀಯ ವೈದ್ಯ ಅಥವಾ ಸಿಬ್ಬಂದಿ ಮೂಲಕ ರೋಗಿಯ ಮಾಹಿತಿ ಪಡೆದು ಅಗತ್ಯ ಸಲಹೆ, ವೈದ್ಯಕೀಯ ಉಪಚಾರ ಮತ್ತು ಚಿಕಿತ್ಸೆ ಸೂಚಿಸುವುದು ಇದರ ಉದ್ದೇಶ.

ಆರಂಭದಲ್ಲಿ ಡಾ. ಮನೀಶ್ ಕೆ. ರೈ ಅವರ ಸಹಕಾರದೊಂದಿಗೆ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ 20 ಜಿಲ್ಲೆಗಳ ಎಲ್ಲ ಸರ್ಕಾರಿ ಮತ್ತು ಖಾಸಗಿ ವೈದ್ಯರು, ಆಂಬ್ಯುಲೆನ್ಸ್‌ ಚಾಲಕರ ಮಾಹಿತಿ ಸಂಗ್ರಹಿಸಿದರು. 'ಸಿಎಡಿ' ಹೆಸರಿನ ವಾಟ್ಸ್‌ಆಯಪ್ ಗ್ರೂಪ್ ರಚಿಸಿದರು. ವಾಟ್ಸ್‌ಆಯಪ್‍ನಲ್ಲೇ ರೋಗಿಯ ಇಸಿಜಿ ತರಿಸಿಕೊಂಡು, ಅಗತ್ಯ ಸಲಹೆ, ವೈದ್ಯಕೀಯ ಉಪಚಾರ ಮತ್ತು ಚಿಕಿತ್ಸೆ ಸೂಚಿಸಲಾರಂಭಿಸಿದರು.

ಈಗ ಚಿಕಿತ್ಸೆ ಮಾರ್ಗದರ್ಶನ ನೀಡುವ ಜತೆಗೆ, ರಾಜ್ಯದ 20 ಜಿಲ್ಲೆಗಳಲ್ಲಿರುವ 230 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕೆಲ ಜನೌಷಧಿ ಕೇಂದ್ರಗಳಿಗೆ ದಾನಿಗಳ ನೆರವಿನೊಂದಿಗೆ ರೂ.1 ಕೋಟಿ ಮೊತ್ತದ ಇಸಿಜಿ ಯಂತ್ರಗಳು, ಹೃದಯಾಘಾತ ಸಂಭವಿಸಿದರೆ ಶೀಘ್ರವೇ ಪತ್ತೆಹಚ್ಚುವ ರಕ್ತಪರೀಕ್ಷಾ ಕಿಟ್ ಮತ್ತು ತುರ್ತಾಗಿ ನೀಡಬೇಕಾದ ಕೆಲ ಔಷಧಗಳನ್ನು ಕೊಡಿಸಿದ್ದಾರೆ.

<strong>ಡಾ. ಪದ್ಮನಾಭ ಕಾಮತ್‌</strong>
ಡಾ. ಪದ್ಮನಾಭ ಕಾಮತ್‌

ಸದ್ಯ ಪದ್ಮನಾಭ ಅವರ ನಾಲ್ಕು ವಾಟ್ಸ್‌ಆಯಪ್‌ ಗುಂಪುಗಳಲ್ಲಿ 2500 ಸದಸ್ಯರಿದ್ದಾರೆ. ಅದರಲ್ಲಿ 700 ಮಂದಿ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಈ ಗುಂಪುಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತವೆ. ಪ್ರತಿದಿನ 200 ರಿಂದ 250 ಇಸಿಜಿಗಳನ್ನು ನೋಡಿ ಡಾ.ಪದ್ಮನಾಭ ಕಾಮತ್ ಈ ಗುಂಪುಗಳಲ್ಲಿ ಸೂಕ್ತ ಸಲಹೆ ನೀಡುತ್ತಿದ್ದಾರೆ. ಈ ಕೆಲಸದಿಂದಾಗಿ ಬಳ್ಳಾರಿ, ಚಿತ್ರದುರ್ಗದ ಕೊನೆಭಾಗದ ಹಳ್ಳಿಗಳಲ್ಲಿರುವ ರೋಗಿಗಳಿಗೂ ನಿಮಿಷಗಳಲ್ಲೇ ಮಂಗಳೂರಿನ ಹೃದಯರೋಗ ತಜ್ಞರ ಸಲಹೆ ಸಿಗುವಂತಾಗಿದೆ.

ಯುವಕನ ಸಾವು ಬಳಿಕ ಗ್ರಾಮೀಣ ಭಾಗದ ಆಸ್ಪತ್ರೆಗಳು, ಜನ ಔಷಧಿ ಕೇಂದ್ರ, ಅಂಗನವಾಡಿ ಹಾಗೂ ಆಯುಷ್ ಮತ್ತು ಆಯುರ್ವೇದದ ವೈದ್ಯರಿಂದ ಹೃದಯ ರೋಗಿಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ಬಳಿಕ ವೈದ್ಯರಿಗೆ ಇಸಿಜಿ ಯಂತ್ರ ಬಳಕೆ, ವೈದ್ಯಕೀಯ ವರದಿ ಸಿದ್ಧಪಡಿಸುವ ರೀತಿ ಕುರಿತು ತರಬೇತಿ ನೀಡಲಾಯಿತು. ವೈದ್ಯಕೀಯ ವರದಿಯನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡುವಂತೆಯೂ ತಿಳಿಸಲಾಯಿತು. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪ್ರಥಮ ಚಿಕಿತ್ಸೆ ನೀಡಲು ಈ ಗ್ರೂಪ್ ಸಹಾಯ ಮಾಡುತ್ತಿದೆ ಎಂದು ಪದ್ಮನಾಭ ಕಾಮತ್ ಅವರು ಹೇಳಿದ್ದಾರೆ. 

ನಿಜವಾಗಿಯೂ ಹೇಳಬೇಕೆಂದರೆ ಇಸಿಜಿ ವರದಿಯಲ್ಲಿ ಹೃದಯದ ಸಮಸ್ಯೆಗಳು ಕಂಡು ಬಂದ ಕೂಡಲೇ ಪ್ರಥಮ ಚಿಕಿತ್ಸೆ ನೀಡಿದರೆ ಶೇ.80 ರಷ್ಟು ಹೃದ್ರೋಗಿಗಳ ಜೀವ ಉಳಿಸಬಹುದು. ಇಸಿಜಿ ವರದಿಯನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡುತ್ತಿದ್ದಂತೆಯೇ ಗ್ರೂಪ್ ನಲ್ಲಿರುವ ಸದರ್ಯರು ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತಾರೆ. ಗಂಭೀರ ಪರಿಸ್ಥಿತಿ ಇದ್ದರೆ, ಅಲರ್ಟ್ ನೀಡಿ ವೈದ್ಯಕೀಯ ತಜ್ಞರನ್ನು ರವಾನಿಸಿ ಪ್ರಾಥಮಿಕ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವರ್ಷಾಂತ್ಯದ ವೇಳೆಗೆ ಕರ್ನಾಟಕ ಮತ್ತು ಕೇರಳದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಈಗಾಗಲೇ 20 ಜಿಲ್ಲೆಗಳ ಕುಗ್ರಾಮ ಪ್ರದೇಶಗಳು, ಗ್ರಾಮೀಣ ಆರೋಗ್ಯ ಕೇಂದ್ರಗಳು ಹಾಗೂ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳಲ್ಲಿ 415 ಇಸಿಜಿ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಹೊರರೋಗಿಗಳಿಗಾಗಿ ಎರಡು ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಲಾಗಿದೆ. 24 ಗಂಟೆಗಳ ಕಾಲ ಸಹಾಯ ಮಾಡಲು ವೆಬ್'ಸೈಟನ್ನು ತೆರೆಯಲಾಗಿದೆ. ಹೃದಯ ಸಮಸ್ಯೆಗಳಿದ್ದರೂ ಸಾಕಷ್ಟು ಜನರು, ಪ್ರಮುಖವಾಗಿ ಹಿಂದುಳಿದ ಜನರು ಹಾಗೂ ವಯಸ್ಸಾದ ವ್ಯಕ್ತಿಗಳು ಕೋವಿಡ್ ಆತಂಕದಿಂದ ಆಸ್ಪತ್ರೆಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ರೋಗಿಗಳಲ್ಲಿ ಈ ಆತಂಕವನ್ನು ದೂರಾಗಿಸಲು ವೆಬ್ ಸೈಟ್ ಹಾಗೂ ಸಹಾಯವಾಣಿಗಳು ಸಹಾಯ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಮನ್ ಕಿ ಬಾತ್ ನಲ್ಲಿ ಪದ್ಮನಾಭ್ ರನ್ನು ಕೊಂಡಾಡಿದ್ದ ಪ್ರಧಾನಿ ಮೋದಿ
ಇದೇ ವೇಳೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರು ತಮ್ಮನ್ನು ಶ್ಲಾಘಿಸಿದ್ದನ್ನೂ ಸ್ಮರಿಸಿದ ಅವರು, ಈ ಬೆಳವಣಿಗೆ ಕೂಡ ಗ್ರಾಮೀಣ ಭಾಗದ ಜನರಿಗೆ ಮತ್ತಷ್ಟು ಸೇವೆ ಮಾಡಲು ನನ್ನನ್ನು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಸಿಎಡಿ ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಇತರೆ ರಾಜ್ಯಗಳಲ್ಲೂ ಪ್ರಾಜೆಕ್ಟ್ ಪುನರ್ಜೀವನ್' ಹೆಸರಿನಲ್ಲಿ ಯೋಜನೆ ಆರಂಭಿಸಲು ಕಾಮತ್ ಅವರು ಮುಂದಾಗಿದ್ದಾರೆ. 

ಕರ್ನಾಟಕದಲ್ಲಿ ಹೃದಯದ ಆರೈಕೆಯ ಗುಣಮಟ್ಟವನ್ನು ಬದಲಿಸಲು, ಫೌಂಡೇಶನ್ ಕ್ಯಾಡ್ ಗ್ಯಾಪ್ (ಗ್ರಾಮ ಪಂಚಾಯಿತಿ ಅಂಗನವಾಡಿ ಪ್ರಾಜೆಕ್ಟ್) ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಲ್ಲಿ 40 ಗ್ರಾಮ ಪಂಚಾಯಿತಿಗಳು ಹಾಗೂ ಅಂಗನವಾಡಿಗಳಿಗೆ ಇಸಿಜಿ ಯಂತ್ರಗಳನ್ನು ಒದಗಿಸಲಾಗುತ್ತದೆ. ಹೃದಯದ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಗ್ರಾಮೀಣ ಸ್ವಯಂಸೇವಕರಿಗೆ ತರಬೇತಿ ನೀಡಲು ಯೋಜನೆಯಲ್ಲಿ 1,500 ಕ್ಕೂ ಹೆಚ್ಚು ಹೃದಯ ಕಿಣ್ವ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಈಗಾಗಲೇ ಕ್ಯಾಡ್ ಗ್ಯಾಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,  ನಾವು ಅದನ್ನು ದೊಡ್ಡ ರೀತಿಯಲ್ಲಿ ಮುಂದುವರಿಸಲು ಬಯಸುತ್ತಿದ್ದೇವೆ. ಈದರಿಂದ ಸೂಕ್ತ ಸಮಯದಲ್ಲಿ ಸಾಕಷ್ಟು ಜೀವಗಳ ಉಳಿಸಲು ಸಹಾಯಕವಾಗಲಿದೆ ಎಂದು ಡಾ ಕಾಮತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com