ಭತ್ತದ ಗದ್ದೆಯಿಂದ 'ಗ್ಲೋಬಲ್ ಸಲ್ಯೂಷನ್ಸ್' ವರೆಗೆ ಕೇರಳ ಯುವಕನ ಸಾಧನೆಯ ಹಾದಿ!

ಕುಟ್ಟನಾಡಿನ ಚೆಂಪುಂಪುರಂ ಎಂಬ ಪುಟ್ಟದಾದ ಹಳ್ಳಿಯಲ್ಲಿ ಬೆಳದ ಅಬಿ ಜಾರ್ಜ್ ಇಂಗ್ಲೆಂಡ್ ಗೆ ಹಾರಲು ಸಿದ್ಧರಾಗಿದ್ದಾರೆ.
ಅಬಿ ಜಾರ್ಜ್
ಅಬಿ ಜಾರ್ಜ್

ಅಳಪ್ಪುಜ್ಹ: ಕುಟ್ಟನಾಡಿನ ಚೆಂಪುಂಪುರಂ ಎಂಬ ಪುಟ್ಟದಾದ  ಹಳ್ಳಿಯಲ್ಲಿ ಬೆಳದ ಅಬಿ ಜಾರ್ಜ್ ಇಂಗ್ಲೆಂಡ್ ಗೆ ಹಾರಲು ಸಿದ್ಧರಾಗಿದ್ದಾರೆ. ನೈರುತ್ಯ ಇಂಗ್ಲೆಂಡ್ ನ ಡೆವೊನ್ ಕೌಂಟಿಯ ಎಕ್ಸೆಟರ್ ಯೂನಿವರ್ಸಿಟಿ, ಗ್ಲೋಬಲ್ ಸುಸ್ಥಿರ ಸಲ್ಯೂಷನ್ ನಲ್ಲಿ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ 40 ಲಕ್ಷ ರೂ. ಮೊತ್ತದ ಕಾಮನ್ ವೆಲ್ತ್ ಸಾಲ್ಕರ್ ಶಿಪ್  ಗೆ ಇವರು ಆಯ್ಕೆಯಾಗಿದ್ದಾರೆ. 

 23 ವರ್ಷದ ಈ ಯುವಕ ಕುಟ್ಟನಾಡಿನ ಭತ್ತದ ಗದ್ದೆಯಿಂದ ಪಡೆದ ವಿಶಿಷ್ಠ ಕಡಲ ತಡಿಯ ಕೃಷಿ ಜ್ಞಾನದಿಂದ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾನೆ. ಸಾಂಪ್ರಾದಾಯಿಕ ಕೃಷಿಕರಾದ ಜಾರ್ಜ್ ಜೋಸೆಪ್ ಮತ್ತು ಜೋಫೆ ದಂಪತಿಯ ಮಗನಾಗಿರುವ ಅಬಿ, ಬಾಲ್ಯದಿಂದಲೂ ತಮ್ಮ ಐದು ಎಕರೆ ಭತ್ತದ ಗದ್ದೆಯಲ್ಲಿ ತನ್ನ ಪೋಷಕರಿಗೆ ನೆರವು ನೀಡುವ ಮೂಲಕ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದಾಗಿ ತಿಳಿಸಿದ್ದಾರೆ.

ಪ್ರಕೃತಿಯ ವೈಚಿತ್ರದ ವಿರುದ್ಧ ವಿರುದ್ಧ ಹೋರಾಡಿದ ನಂತರ ನಾವು ಆದಾಯವನ್ನು ಗಳಿಸುತ್ತಿದ್ದೇವು. ಕೆಲವು ವೇಳೆ ಪ್ರವಾಹ, ಮತ್ತೆ ಕೆಲವು ವೇಳೆ ಹೊಸ ನೀರಿನ ಕೊರತೆ,. ಕೊಯ್ಲು ಅವಧಿ ಮುಗಿಯುವ ಮೊದಲು ಕೀಟಗಳ ದಾಳಿ ಮತ್ತು ಇತರ ಅನೇಕ ಅನಿರೀಕ್ಷಿತ ನೈಸರ್ಗಿಕ ವಿಪತ್ತುಗಳನ್ನು ನಿಭಾಯಿಸಬೇಕು. ಈ ಎಲ್ಲಾ ಅನುಭವಗಳು ಸಂಕಷ್ಟದಿಂದ ಹೊರಬರುವ ಹಾಗೂ ಪ್ರತಿಷ್ಠಿತ ಸ್ಕಾಲರ್ ಶಿಪ್ ಸ್ವೀಕರಿಸಲು ದೈರ್ಯವನ್ನು ನೀಡಿವೆ ಎಂದು ಅವರು ಹೇಳುತ್ತಾರೆ. ಎಕ್ಸೆಟರ್ ನಲ್ಲಿ 12 ತಿಂಗಳ ಕಾರ್ಯಕ್ರಮಕ್ಕಾಗಿ ಎಲ್ಲ ರೀತಿಯ ವೆಚ್ಚವನ್ನು ಈ ಸ್ಕಾಲರ್ ಶಿಫ್ ಭರಿಸಲಿದೆ. 

2019ರಲ್ಲಿ ಚಂಗನಾಶೇರಿಯ ಸೇಂಟ್ ಬರ್ಚ್‌ಮ್ಯಾನ್ಸ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ನಂತರ ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ನಂತರ ಅಳಪ್ಪುಜ್ಹ ಮೂಲದ ಸಂಶೋಧನಾ ಸಂಸ್ಥೆ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಟೆಕ್ನಾಲಜಿಕಲ್ ಇನ್ನೋವೇಶನ್ ನಲ್ಲಿ ಸಂಶೋಧಕ ಸಹಾಯನಾಗಿ ಸೇರಿಕೊಂಡೆ. ಅಲ್ಲಿ ಸುಸ್ಥಿರ ಕೃಷಿಯಲ್ಲಿ ಯೋಜನೆಯನ್ನು ಸಂಘಟಿಸುವ ಅವಕಾಶ ದೊರೆಯಿತು. ಕುಟ್ಟನಾಡ್ ನಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹ ಆಗಾಗ್ಗೆ ಬಂದು, ಬೆಳೆ ಹಾಳಾಗುತಿತ್ತು. ನಾನು ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಮತ್ತು ಭತ್ತ ಕೃಷಿಯಲ್ಲಿ ವಿಪತ್ತು-ಅಪಾಯ ಕಡಿಮೆಗೊಳಿಸುವ ಬಗ್ಗೆ ಅಧ್ಯಯನ ಮಾಡಿದೆ. ನಾನು ಬಾಲ್ಯದಿಂದ ಪಡೆದ ಮೂಲಭೂತ ಜ್ಞಾನವು ದೊಡ್ಡ ಸಹಾಯ ಮಾಡಿತು ಎಂದು ಅಭಿ ಹೇಳಿದ್ದಾರೆ. 

ಕೃಷಿ ಕ್ಷೇತ್ರ ಸಂಘಟಿತಗೊಂಡಿಲ್ಲ, ಸರ್ಕಾರದ ವಿವಿಧ ಯೋಜನೆಗಳು ಅನೇಕ ರೈತರಿಗೆ ಗೊತ್ತಿಲ್ಲ ಎಂಬುದು ತಿಳಿದ ನಂತರ ರೈತ ಉತ್ಪನ್ನ ಸಂಘವನ್ನು ಸ್ಥಾಪಿಸಿದೆ.  ಅದರಲ್ಲಿ ಇದೀಗ  ಸುಮಾರು 900 ಸದಸ್ಯರಿದ್ದಾರೆ. ಭತ್ತದ ಬೀಜ ಮತ್ತು ರೈತರಿಗೆ ಬೆಳೆ ವಿಮೆಯನ್ನು ನೀಡಲು  ಸಣ್ಣ ರೈತರು, ಕೇಂದ್ರ ಸರ್ಕಾರದ ಏಜೆನ್ಸಿ ಮತ್ತು ಕೃಷಿ ವಿಮಾ ಕಂಪನಿ ನನ್ನ ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ಕುಟ್ಟನಾಡು ಹಾಗೂ ನನ್ನ ಹಳ್ಳಿಯಲ್ಲಿ ಅನೇಕ ರೈತರಿಗೆ ಪ್ರಯೋಜನವಾಗಿದೆ ಎಂದು ಅಬಿ ತಿಳಿಸಿದರು. ಅಬಿ ಸಹೋದರ ಅಲೋಶಿಯಸ್ ಕೂಡಾ ಅಭಿಯ ಕೃಷಿ ಹಾಗೂ ಸಂಬಂಧಿತ ಅಧ್ಯಯನದಲ್ಲಿ ನೆರವು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com