ಕೇರಳ: ಒಟ್ಟಿಗೆ ಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ, ಮಗ!

ಕೇರಳದ ಮಲಪ್ಪುರಂನ 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆ ಒಟ್ಟಿಗೆ ಬರೆದು ಪಾಸಾದ ತಾಯಿ-ಮಗ
ಪರೀಕ್ಷೆ ಒಟ್ಟಿಗೆ ಬರೆದು ಪಾಸಾದ ತಾಯಿ-ಮಗ
Updated on

ತಿರುವನಂತಪುರಂ: ಸಾಧಿಸುವ ಮನಸ್ಸಿದ್ದರೆ ವಯಸ್ಸಾಗಲೀ, ದೈಹಿಕ ನ್ಯೂನತೆಯಾಗಲೀ ಸಮಸ್ಯೆಯಾಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇರಳದ ಮಲಪ್ಪುರಂನ 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.

ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದೆವು. ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮಗೆ ನಮ್ಮ ಶಿಕ್ಷಕರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ಆದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ನಮ್ಮಿಬ್ಬರಿಗೂ ತುಂಬಾ ಸಂತೋಷವಾಗಿದೆ ಎಂದು ಮಗ ವಿವೇಕ್ ಹೇಳಿದ್ದಾರೆ.

ಮಗ 10 ನೇ ತರಗತಿಯಲ್ಲಿದ್ದಾಗ ತಾಯಿ ಬಿಂದು, ಅವನನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು.  ಇದು ಕೇರಳ ಪಿಎಸ್ ಸಿ ಪರೀಕ್ಷೆಗಳಿಗೆ ತಯಾರಾಗಲು ಅವರನ್ನು  ಪ್ರೇರೇಪಿಸಿತು. ಇದೀಗ ಅವರು ಮತ್ತು ಅವರ ಮಗ ಒಟ್ಟಿಗೆ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ.

ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ (LDC) ಪರೀಕ್ಷೆಯಲ್ಲಿ 38 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದರೆ,  ಅವರ ಮಗ 92 ನೇ ಶ್ರೇಣಿಯೊಂದಿಗೆ ಕೊನೆಯ ದರ್ಜೆಯ ಸೇವಕರ (LGS) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. LGS ಪರೀಕ್ಷೆಗೆ ಎರಡು ಬಾರಿ ಪ್ರಯತ್ನ ಮತ್ತು LDC ಗೆ ಒಂದು ಬಾರಿ ಪ್ರಯತ್ನದ ನಂತರ ಬಿಂದು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಪಾಠ ಮಾಡುತ್ತಿರುವ ನನಗೆ, ನನ್ನ ಸ್ನೇಹಿತರು, ನನ್ನ ಮಗ ಮತ್ತು ಕೋಚಿಂಗ್ ಸೆಂಟರ್‌ನಲ್ಲಿರುವ ಬೋಧಕರ ಸ್ಫೂರ್ತಿ ಮತ್ತು ಬೆಂಬಲದಿಂದ ಇದು ಸಾಧ್ಯವಾಯಿತು ಎಂದು ಬಿಂದು ಹೇಳಿದರು.

ಕೇರಳದಲ್ಲಿ ಸ್ಟ್ರೀಮ್-2 ಹುದ್ದೆಗಳಿಗೆ ವಯಸ್ಸಿನ ಮಿತಿ 40. ಆದರೆ ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿನಲ್ಲಿ ಮೂರು ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ ಇದು ಐದು ವರ್ಷಗಳವರೆಗೆ ಇರುತ್ತದೆ. ಮಾತು, ಶ್ರವಣದೋಷ ಮತ್ತು ದೃಷ್ಟಿ ದೋಷವುಳ್ಳವರಿಗೆ 15 ವರ್ಷಗಳು, ಅಂಗವಿಕಲರಿಗೆ 10 ವರ್ಷಗಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com