ಛತ್ತೀಸ್ ಗಢದ 'ದಾಯ್-ದೀದಿ ಕ್ಲಿನಿಕ್ ಗಳು: ಮಹಿಳೆಯರು, ಹೆಣ್ಣು ಮಕ್ಕಳಿಗಾಗಿ ಮಹಿಳೆಯರಿಂದಲೇ ಕಾರ್ಯನಿರ್ವಹಣೆ!

ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿಯೇ ಛತ್ತೀಸ್ ಗಢ 'ದಾಯ್-ದೀದಿ( ತಾಯಿ- ಸಹೋದರಿಯರು)  ಕ್ಲಿನಿಕ್ ಆರಂಭಿಸಿದೆ. ಈ ವಿಶಿಷ್ಠ ಕ್ಲಿನಿಕ್ ಗಳನ್ನು 2020 ನವೆಂಬರ್ 19 ರಂದು ಆರಂಭಿಸಲಾಯಿತು.
ಛತ್ತೀಸ್ ಗಢ 'ದಾಯ್-ದೀದಿ ಕ್ಲಿನಿಕ್ ಗಳು
ಛತ್ತೀಸ್ ಗಢ 'ದಾಯ್-ದೀದಿ ಕ್ಲಿನಿಕ್ ಗಳು
Updated on

ಛತ್ತೀಸ್ ಗಡ: ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಸಾಮಾಜಿಕ- ಸಾಂಸ್ಕೃತಿಕ ಅಂಶಗಳ ಕಾರಣದಿಂದಾಗಿ ಅನೇಕ ಸಮುದಾಯಗಳಿಂದ ಅನೇಕ ಕಟ್ಟುಪಾಡಿಗಳಿಗೆ ಒಳಪಟ್ಟಿರುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ ವಹಿಸಿದ್ದರೂ ಇವರು ಗುಣಮಟ್ಟದ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಇದೇ ಕಾರಣಕ್ಕಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿಯೇ ಛತ್ತೀಸ್ ಗಢ 'ದಾಯ್-ದೀದಿ( ತಾಯಿ- ಸಹೋದರಿಯರು) ಕ್ಲಿನಿಕ್ ಆರಂಭಿಸಿದೆ. 

ಈ ವಿಶಿಷ್ಠ ಕ್ಲಿನಿಕ್ ಗಳನ್ನು 2020 ನವೆಂಬರ್ 19 ರಂದು ಆರಂಭಿಸಲಾಯಿತು. ಎಲ್ಲಾ ಎಲ್ಲಾ ಮಹಿಳಾ ಕ್ಲಿನಿಕ್ ಗಳು ಒಬ್ಬರು ಮಹಿಳಾ ಡಾಕ್ಟರ್ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯೊಂದಿಗೆ ವಿಶೇಷ ಸಂಚಾರಿ ಮೆಡಿಕಲ್ ಘಟಕದೊಂದಿಗೆ ಎಲ್ಲಾ ಕೊಳಚೆ ಪ್ರದೇಶ ಮತ್ತಿತರ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಮಹಿಳಾ ಕ್ಲಿನಿಕ್ ಗಳು ಒಬ್ಬರು ಮಹಿಳಾ ಡಾಕ್ಟರ್
ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರುತ್ತಾರೆ.

ಈ ಮೊಬೈಲ್ ಕ್ಲಿನಿಕ್ ಗಳು ರಾಯಪುರ, ಬಿಲಾಸ್ ಪುರ ಮತ್ತು ಬಿಲೈನ ಮುನ್ಸಿಪಾಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರಿಂದ ಪ್ರೇರಿತಗೊಂಡಿರುವ ಸರ್ಕಾರ ಈ ಸೌಕರ್ಯವನ್ನು ಮಂದಿರ್ ಹಸೌದ್, ದುರ್ಗ್, ರೈಸಲಿ ಪಠಣ್, ರಾಯ್ ಗಢ, ಜಗದಲ್ಫುರ, ಅಂಬಿಕಪೂರ್ ಮತ್ತು ಕೊರ್ಬಾ ಸೇರಿದಂತೆ ಮತ್ತಿತರ ಎಂಟು ನಗರ ಪ್ರದೇಶಗಳಿಗೆ ಮುಂದಿನ ತಿಂಗಳಿನಿಂದ ವಿಸ್ತರಿಸುತ್ತಿದೆ. 

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ದಾಯ್-ದೀದಿ ಮತ್ತೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಅಗತ್ಯ ವಿರುವ ಜನರಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಇದರ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಭಾಘೇಲ್ ಹೇಳಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ಹೊರತಾಗಿಯೂ ಎಲ್ಲಾ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಈ ಕ್ಲಿನಿಕ್ ಗಳೇ ಒದಗಿಸುತ್ತವೆ. 

ಈ ಯೋಜನೆ ಪ್ರಾರಂಭವಾದಾಗಿನಿಂದ ಈವರೆಗೂ ಸುಮಾರು 1. 20 ಲಕ್ಷ ಮಹಿಳೆಯರು ಮತ್ತು 19,500 ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ ಬಹುತೇಕರು ನಗರದ ಕೊಳಚೆ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಸುಮಾರು 1 ಲಕ್ಷ ರೋಗಿಗಳು ಪ್ರಯೋಗಾಲಯದ ಟೆಸ್ಟ್ ಮಾಡಿಸಿದ್ದಾರೆ. ಯಾವುದೇ ಶುಲ್ಕವಿಲ್ಲದೆ ಸುಮಾರು 1,12, 380 ಮಹಿಳೆಯರಿಗೆ ಉಚಿತವಾಗಿ ಔಷಧ ವಿತರಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com