ಕಾಲ್ನಡಿಗೆಯಲ್ಲಿ ಮೊಟ್ಟ ಮೊದಲ ಬಾರಿಗೆ ದೇಶ ಸುತ್ತಿದ ಕೇರಳದ ದಂಪತಿ!

ಕೊಟ್ಟಾಯಂನ 53 ವರ್ಷದ ಬೆನ್ನಿ ಕೊಟ್ಟಾರತಿಲ್ ಮತ್ತು ಅವರ ಪತ್ನಿ ಮೊಲ್ಲಿ ಬೆನ್ನಿ (46) ಕಾಲಿನಲ್ಲಿಯೇ ದೇಶ ಸುತ್ತಿ ಈಗಷ್ಟೇ ಮರಳಿದ್ದಾರೆ. ಕನ್ಯಾಕುಮಾರಿಯಿಂದ ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾಲ್ನಡಿಗೆ ಆರಂಭಿಸಿದ ಇವರು,  216 ದಿನ ಸುತ್ತಾಡಿ ಜುಲೈ 3, 2022 ರಂದು ತಮ್ಮ ನಡಿಗೆಯನ್ನು ಮುಕ್ತಾಯಗೊಳಿಸಿದ್ದಾರೆ. 
ಬೆನ್ನಿ ಕೊಟ್ಟಾರತಿಲ್, ಮೊಲ್ಲಿ ಬೆನ್ನಿ
ಬೆನ್ನಿ ಕೊಟ್ಟಾರತಿಲ್, ಮೊಲ್ಲಿ ಬೆನ್ನಿ

ಕೊಚ್ಚಿ: ಕೊಟ್ಟಾಯಂನ 53 ವರ್ಷದ ಬೆನ್ನಿ ಕೊಟ್ಟಾರತಿಲ್ ಮತ್ತು ಅವರ ಪತ್ನಿ ಮೊಲ್ಲಿ ಬೆನ್ನಿ (46) ಕಾಲಿನಲ್ಲಿಯೇ ದೇಶ ಸುತ್ತಿ ಈಗಷ್ಟೇ ಮರಳಿದ್ದಾರೆ. ಕನ್ಯಾಕುಮಾರಿಯಿಂದ ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾಲ್ನಡಿಗೆ ಆರಂಭಿಸಿದ ಇವರು,  216 ದಿನ ಸುತ್ತಾಡಿ ಜುಲೈ 3, 2022 ರಂದು ತಮ್ಮ ನಡಿಗೆಯನ್ನು ಮುಕ್ತಾಯಗೊಳಿಸಿದ್ದಾರೆ. 

ನಡಿಗೆ ಉತ್ತೇಜನ ಮತ್ತು  ಮಕ್ಕಳಿಲ್ಲದ ದಂಪತಿಯಲ್ಲಿ  ಜೊತೆಯಾಗಿ  ಸಾಗುವುದರಿಂದ ಆಗುವ ಹೊಸ ಜಾಗೃತಿ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ದಂಡಯಾತ್ರೆ ಆರಂಭಿಸಿದ್ದಾಗಿ ಬೆನ್ನಿ ಹೇಳುತ್ತಾರೆ. ಆಂಧ್ರ ಪ್ರದೇಶದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಕೊರೋನಾ ಕಾರಣದಿಂದ ಕೆಲಸ ಬಿಟ್ಟಿದ್ದಾರೆ. 

ಬೆನ್ನಿ ಮತ್ತು ಮೊಲ್ಲಿ ದೇಶಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದಾಗ ಪ್ರಯಾಣ ವೆಚ್ಚ ಭರಿಸಲು ಮೊಲ್ಲಿ ಚಿನ್ನವನ್ನು  ಅಡಮಾನವಿಟ್ಟು, ಸ್ನೇಹಿತರು, ಕುಟುಂಬಸ್ಥರಿಂದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಇಡೀ ಪ್ರಯಾಣದುದ್ದಕ್ಕೂ ಹಲವಾರು ಸವಾಲಗಳನ್ನು ಎದುರಿಸದ್ದಾರೆ. ಒಮ್ಮೆ ತಮಿಳುನಾಡಿನ ವಿಲ್ಲುಪುರಂನ ದೇವಾಲಯವೊಂದರಲ್ಲಿ ತಂಗಿದಾಗ ಮುಂಜಾನೆ 2 ಗಂಟೆ ಸಮಯದಲ್ಲಿ ದರೋಡೆ ಮಾಡಲು ಬಂದಿದ್ದ  ಕಳ್ಳನೊಬ್ಬನನ್ನು ನಮ್ಮ ಜೊತೆಗಿದ್ದ ನಾಯಿ ಬೊಗಳಿ ಕಳುಹಿಸಿತ್ತು ಎಂದು ಬೆನ್ನಿ ಹೇಳಿದರು.

ನಿಯಂತ್ರಣ ಕಳೆದುಕೊಂಡು ತಮ್ಮ ಕಡೆಗೆ ವೇಗವಾಗಿ ಬರುತ್ತಿದ್ದ ಲಾರಿಯಿಂದ ಸಂಭಾವ್ಯ ಅಪಾಯದಿಂದ ಪಾರಾದ ಬಗ್ಗೆಯೂ ಅವರು ನೆನಪಿಸಿಕೊಳ್ಳುತ್ತಾರೆ. ಬಿಹಾರದಲ್ಲಿ ತಂಗಲು ಜಾಗ ಸಿಗದೆ ಇಡೀ ರಾತ್ರಿ ಸ್ಮಶಾನದಲ್ಲಿ ಸಮಯ ಕಳೆದಿದ್ದಾಗಿ ಮೊಲ್ಲಿ ಹೇಳುತ್ತಾರೆ.

ವಿವಿಧ ರೆಸ್ಟೋರೆಂಟ್ ಗಳು, ಡಾಬಾಗಳಲ್ಲಿ ತರಹೇವಾರಿ ರೀತಿಯ ಆಹಾರ ಖಾದ್ಯ ಸೇವಿಸಿದ್ದಾಗಿ ಅವರು ತಿಳಿಸಿದ್ದಾರೆ. ಮೊಲ್ಲಿ ಮತ್ತು ಬೆನ್ನಿ ಯು ಟ್ಯೂಬ್ ಚಾನೆಲ್ ವೊಂದನ್ನು ಹೊಂದಿದ್ದಾರೆ. ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಪಂಜಾಬಿನಲ್ಲಿರುವ ಗೋಲ್ಡನ್ ಟೆಂಬಲ್ ತುಂಬಾ ಇಷ್ಟವಾದ ಸ್ಥಳ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com