ಗುಜರಾತ್‌ನ ಮೊಧೇರಾ ದೇಶದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ಗ್ರಾಮ!

ಗುಜರಾತ್ ರಾಜ್ಯದ ಮೊಧೇರಾ ದೇಶದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇದ್ರ ಮೋದಿ ಘೋಷಿಸಿದ್ದಾರೆ.
ಸೌರಶಕ್ತಿ ವಿದ್ಯುತ್ ದೀಪಗಳೊಂದಿಗೆ ಕಂಗೊಳಿಸುತ್ತಿರುವ ಸೂರ್ಯ ದೇವಾಲಯದಲ್ಲಿ ಪ್ರಧಾನಿ ಮೋದಿ
ಸೌರಶಕ್ತಿ ವಿದ್ಯುತ್ ದೀಪಗಳೊಂದಿಗೆ ಕಂಗೊಳಿಸುತ್ತಿರುವ ಸೂರ್ಯ ದೇವಾಲಯದಲ್ಲಿ ಪ್ರಧಾನಿ ಮೋದಿ

ಅಹಮದಾಬಾದ್: ಗುಜರಾತ್ ರಾಜ್ಯದ ಮೊಧೇರಾ ದೇಶದ ಮೊದಲ 24x7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇದ್ರ ಮೋದಿ ಘೋಷಿಸಿದ್ದಾರೆ.

ಮೊಧೇರಾದಲ್ಲಿ ಪ್ರಸಿದ್ದ ಸೂರ್ಯ ದೇವಾಲಯವಿದೆ. ಜಗತ್ತಿನಲ್ಲಿ ಸೌರಶಕ್ತಿಯ ಬಗ್ಗೆ ಜನರು ಚರ್ಚಿಸಿದಾಗಲೆಲ್ಲಾ ಈ ಗ್ರಾಮವು ಅದರಲ್ಲಿ ಕಾಣಿಸಿಕೊಳ್ಳುತ್ತದೆ. ಸರ್ಕಾರವು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಜನರು ಅದನ್ನು ಖರೀದಿಸುತ್ತಾರೆ. ಆದರೆ ಜನರು ಶಕ್ತಿಯ ಉತ್ಪಾದಕರಾಗಬೇಕೆಂದು ನಾವು ಬಯಸುತ್ತೇವೆ. ವಿದ್ಯುತ್ ಕ್ಕಾಗಿ ಪಾವತಿಸಬೇಡಿ; ಅದನ್ನು ಮಾರಿ ಅದರಿಂದ ಸಂಪಾದಿಸಿ ಎಂದು ಪ್ರಧಾನಿ ಒತ್ತಾಯಿಸಿದರು.

ಮೊಧೇರಾದ ಜನರು ವಿದ್ಯುತ್ ಗ್ರಾಹಕರು ಮತ್ತು ಉತ್ಪಾದಕರು. ಸರ್ಕಾರ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್ ಖರೀದಿಸುತ್ತಿದೆ. ಇಂತಹ ಯಶಸ್ವಿ ಪ್ರಯತ್ನಗಳು ದೇಶದಾದ್ಯಂತ ಪುನರಾವರ್ತನೆಯಾಗಬೇಕು ಎಂದು ಅವರು ಹೇಳಿದರು. ಮೊಧೇರಾ ಸೂರ್ಯ ದೇವಾಲಯ ಮತ್ತು ಪಟ್ಟಣದ ಸೌರ ವಿದ್ಯುತೀಕರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಿಂದ ಆಗಿದೆ.  ಸೂರ್ಯ ದೇವಾಲಯದಿಂದ ಸುಮಾರು 6 ಕಿಮೀ ದೂರದಲ್ಲಿರುವ ಮೆಹ್ಸಾನಾದ ಸುಜ್ಜನಪುರದಲ್ಲಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯೊಂದಿಗೆ (ಬಿಇಎಸ್ ಎಸ್) ಗ್ರಾಮವನ್ನು ಸಂಯೋಜಿಸಿದೆ ಎಂದರು. 

ವಿದ್ಯುತ್ ಉತ್ಪಾದನೆಗಾಗಿ ಮನೆಗಳ ಮೇಲೆ 1,300 ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಹಗಲು ಹೊತ್ತು ಸೌರ ಫಲಕಗಳಿಂದ ವಿದ್ಯುತ್  ಬಂದರೆ, ರಾತ್ರಿಯಲ್ಲಿ ಬಿಇಎಸ್‌ಎಸ್‌ನಿಂದ ವಿದ್ಯುತ್ ನಿಂದ ಪೂರೈಕೆಯಾಗುತ್ತದೆ. ಮೊಧೇರಾ ಸೌರ ಆಧಾರಿತ ಆಧುನಿಕ ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮೊದಲ ಆಧುನಿಕ ಗ್ರಾಮವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com