10.5 ವರ್ಷ, 65 ರಾಷ್ಟ್ರ: ಕೇರಳಕ್ಕೆ ಆಗಮಿಸಿದ ಅಮೆರಿಕ ದಂಪತಿಯ ಹನಿಮೂನ್ ಪ್ರವಾಸಕ್ಕೆ ಕೊನೆಯೇ ಇಲ್ಲ!

ಸಾಮಾನ್ಯವಾಗಿ ಹನಿಮೂನ್ ಟ್ರಿಪ್ ಎಷ್ಟು ದಿನಗಳವರೆಗೆ ಇರುತ್ತದೆ? ಕೆಲವು ದಿನ ಅಂತಾ ಉತ್ತರ ಬರಬಹುದು. ಆದರೆ, ಅಮೆರಿಕದ ದಂಪತಿ 10.5 ವರ್ಷಗಳಿಂದಲೂ ಹನಿಮೂನಿ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು 64 ರಾಷ್ಟ್ರಗಳನ್ನು ಸುತ್ತಾಡಿದ್ದಾರೆ.
ಅನ್ನೆ ಮತ್ತು ಮೈಕ್ ಹೊವಾರ್ಡ್
ಅನ್ನೆ ಮತ್ತು ಮೈಕ್ ಹೊವಾರ್ಡ್
Updated on

ಕೊಚ್ಚಿ: ಸಾಮಾನ್ಯವಾಗಿ ಹನಿಮೂನ್ ಟ್ರಿಪ್ ಎಷ್ಟು ದಿನಗಳವರೆಗೆ ಇರುತ್ತದೆ? ಕೆಲವು ದಿನ ಅಂತಾ ಉತ್ತರ ಬರಬಹುದು. ಆದರೆ, ಅಮೆರಿಕದ ದಂಪತಿ 10.5 ವರ್ಷಗಳಿಂದಲೂ ಹನಿಮೂನಿ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು 64 ರಾಷ್ಟ್ರಗಳನ್ನು ಸುತ್ತಾಡಿದ್ದಾರೆ.

2012ರಲ್ಲಿ ಮದುವೆಯಾದ ನ್ಯೂಯಾರ್ಕ್ ನ ಅನ್ನೆ ಮತ್ತು ಮೈಕ್  ಹೊವಾರ್ಡ್ ಸದ್ಯಕ್ಕಂತೂ ಹನಿಮೂನ್ ಸ್ಥಗಿತಗೊಳಿಸಲು ಯೋಚನೆ ಮಾಡಿಲ್ಲ. ಪ್ರಯಾಣ ಅವರ ಜೀವನದ ಭಾಗವಾಗಿಬಿಟ್ಟಿದೆ. ಆರಂಭದಲ್ಲಿ ಯುರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕ ರಾಷ್ಟ್ರಗಳಿಗೆ ತೆರಳಿದ ಈ ದಂಪತಿಗೆ ಭಾರತ 65ನೇ ರಾಷ್ಟ್ರವಾಗಿದೆ. ಕೇರಳದಿಂದ ಅವರು ಭಾರತ ಸುತ್ತಲೂ ಆರಂಭಿಸಿದ್ದಾರೆ. 

ಭೂತಾನ್ ನಿಂದ ಬಂದಿದ್ದಾಗಿ ತಿಳಿಸಿದ ಮೈಕ್, ನ್ಯೂಜೆರ್ಸಿಯಲ್ಲಿ ವಾಲಿಬಾಲ್ ಆಡುತ್ತಿದ್ದಾಗ ಅನ್ನೆ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದರು. ದಂಪತಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ. 15 ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ಬೇರೆ ಬೇರೆಯಾಗಿ ಭಾರತಕ್ಕೆ ಬಂದಿದ್ದಾಗಿ ಅನ್ನೆ ಹೇಳುತ್ತಾರೆ. ಭಾರತದಲ್ಲಿ ಯಾರೊಬ್ಬರು ಕೇರಳದಿಂದ ಪ್ರವಾಸ ಆರಂಭಿಸುವುದಾಗಿ ಈ ದಂಪತಿ ಹೇಳುತ್ತಾರೆ.

ಕೇರಳ ಪ್ರವಾಸಿಗರ ಪಾಲಿಗೆ ಭಾರತದ ಮುಖ್ಯದ್ವಾರವಾಗಿದೆ. ಕೇರಳ ಇತರ ಪ್ರದೇಶಗಳಿಂದ ಆಹ್ಲಾದಕರವಾಗಿದೆ ಎಂದು ಮೈಕ್ ಹೇಳುತ್ತಾರೆ. ಇವರು ಅನ್ನೇ ಅವರೊಂದಿಗೆ ಎರಡು ಪುಸ್ತಕಗಳನ್ನು ರಚಿಸಿದ್ದಾರೆ. ಕೇರಳದಲ್ಲಿ ದೊರೆಯುವ ತರಹೇವಾರಿ ಭಕ್ಷ್ಯಗಳು ತಮ್ಮನ್ನು ಆಕರ್ಷಿಸಿವೆ ಎಂದು ಮೈಕ್ ಹೇಳುತ್ತಾರೆ. ಈ ದಂಪತಿ ಕೇರಳದಲ್ಲಿ ಎರಡೂವರೆ ವಾರಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. 

ಗೋವಾ, ಮುಂಬೈ ನಂತರ ಕ್ರೊಯೇಶಿಯಾಕ್ಕೆ ಪ್ರಯಾಣ:  ಸ್ಥಳೀಯ ಬಸ್ ಗಳಲ್ಲಿ ತೆರಳುತ್ತೇವೆ, ಸ್ಥಳೀಯ ಆಹಾರ ಸೇವಿಸುತ್ತಾ, ಇಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸುತ್ತೇವೆ. ಇದರಿಂದ ವೆಚ್ಚ ಕಡಿಮೆಯಾಗುವುದು ಮಾತ್ರವಲ್ಲದೇ, ಜನರೊಂದಿಗೆ ಸಂಪರ್ಕಕ್ಕೆ ಸಾಧ್ಯವಾಗಲಿದೆ. ಸ್ಥಳಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳುವುದನ್ನು ನಂಬುವುದಕ್ಕಿಂತಲೂ ವಾಸ್ತವವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅನ್ನೆ ಹೇಳಿದರು.

 ಗೋವಾ ಮತ್ತು ಮುಂಬೈ ಈ ದಂಪತಿಯ ಮುಂದಿನ ಸ್ಥಳವಾಗಿದೆ. ಅಲ್ಲಿಂದ ಅವರು 66 ನೇ ರಾಷ್ಟ್ರ ಕ್ರೊಯೇಶಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com