ತ್ಯಾಜ್ಯ ಪೇಪರ್ ಗಳಿಂದ ಹೂ ಅರಳಿಸುವ ಕರಕುಶಲ ಶಿಕ್ಷಕಿ....

ಕಸದಿಂದ ರಸ ಎನ್ನುವ ಮಾತು ಜನಜನಿತ, ಈ ಮಾತನ್ನು ಕರಗತ ಮಾಡಿಕೊಳ್ಳುವುದೂ ಕಲೆ, ಕೌಶಲ್ಯ. ಈ ಮಾತನ್ನು ಕರಗತ ಮಾಡಿಕೊಂಡು, ತ್ಯಾಜ್ಯದ ಪೇಪರ್ ನಿಂದ ಹೂವುಗಳನ್ನು ಅರಳಿಸುತ್ತಿದ್ದಾರೆ 58 ವರ್ಷದ ಮೇರಿ ಡಿಸೋಜಾ. 
ಮೇರಿ ಡಿಸೋಜಾ
ಮೇರಿ ಡಿಸೋಜಾ

ಕಸದಿಂದ ರಸ ಎನ್ನುವ ಮಾತು ಜನಜನಿತ, ಈ ಮಾತನ್ನು ಕರಗತ ಮಾಡಿಕೊಳ್ಳುವುದೂ ಕಲೆ, ಕೌಶಲ್ಯ. ಈ ಮಾತನ್ನು ಕರಗತ ಮಾಡಿಕೊಂಡು, ತ್ಯಾಜ್ಯದ ಪೇಪರ್ ನಿಂದ ಹೂವುಗಳನ್ನು ಅರಳಿಸುತ್ತಿದ್ದಾರೆ 58 ವರ್ಷದ ಮೇರಿ ಡಿಸೋಜಾ. 

ಜನರು ವಿವಾಹ, ಹುಟ್ಟುಹಬ್ಬದಂತಹ ಕಾರ್ಯಕ್ರಮಗಳಲ್ಲಿ ಅಲಂಕಾರಗಳಿಗಾಗಿ ಮಾಡುವ ಖರ್ಚುಗಳಲ್ಲಿ ಬಹುತೇಕ ಕೊನೆಗೆ ತ್ಯಾಜ್ಯ ಸೇರುತ್ತದೆ. ಆದರೆ ಇಂತಹ ಉತ್ಪನ್ನಗಳನ್ನು ಮರುಬಳಕೆ ಮಾಡುವಂತಿದ್ದರೆ? ಅಂಥಹದ್ದೇ ಒಂದು ವಿಶಿಷ್ಟ ಕೆಲಸವನ್ನು ತಾವಷ್ಟೇ ಅಲ್ಲದೇ ತಮ್ಮ ಸಹೋದ್ಯೋಗಿಗಳಿಗೂ ಆಸಕ್ತ ಮಕ್ಕಳು ಸಹೋದ್ಯೋಗಿಗಳಿಗೂ ಹೇಳಿಕೊಡುತ್ತಿದ್ದಾರೆ ಶಿಕ್ಷಕಿ  ಮೇರಿ ಡಿಸೋಜಾ.

ಶಿವಮೊಗ್ಗದ ರಾಗಿಗುಡ್ಡದಲ್ಲಿ 1993 ರಿಂದಲೂ ಡಾ ಬಿ ಆರ್ ಅಂಬೇಡ್ಕರ್ ವಸತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ  ಮೇರಿ ಡಿಸೋಜಾ, ತ್ಯಾಜ್ಯ ಬಟ್ಟೆ, ಪೇಪರ್ ಗಳನ್ನು ಅಲಂಕಾರಿಕ ವಸ್ತು, ಹೂವುಗಳನ್ನಾಗಿ ತಯಾರಿಸುವ ಕೌಶಲ್ಯ ಹೊಂದಿದ್ದಾರೆ. ಇದರಿಂದ ಉಚಿತವಾಗಿ ಅಲಂಕಾರಿಕ ವಸ್ತುಗಳೂ ದೊರೆಯುತ್ತವೆ ಹಾಗೂ ತ್ಯಾಜ್ಯವೂ ಮರುಬಳಕೆಯಾಗುತ್ತದೆ.

<strong>ಡಿಸೋಜಾ ಅವರು ತಯಾರಿಸಿರುವ ಪರಿಸರ ಸ್ನೇಹಿ ಅಲಂಕಾರಿಕ ವಸ್ತುಗಳು</strong>
ಡಿಸೋಜಾ ಅವರು ತಯಾರಿಸಿರುವ ಪರಿಸರ ಸ್ನೇಹಿ ಅಲಂಕಾರಿಕ ವಸ್ತುಗಳು

2016 ರಿಂದಲೂ ನಿರಂತರವಾಗಿ ತ್ಯಾಜ್ಯದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಕರಕುಶಲದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಿಸೋಜಾ ಅವರ್ನನು ಈ ಪ್ರವೃತ್ತಿಗೆ ಆಕರ್ಷಿಸಿದ್ದು, ರಸ್ತೆ ಬದಿ ಮೇಯುತ್ತಿದ್ದ ಒಂದು ಹಸು! 

ಹೌದು, ಹೂವುಗಳನ್ನು ಹಿಡಿದಿಡಲು ಬಳಕೆ ಮಾಡಿದ್ದ ತಂತಿಯನ್ನು ಜನ ಬೇಜವಾಬ್ದಾರಿತನದಿಂದ ಎಸೆದಿದ್ದರ ಪರಿಣಾಮ ಅದು ರಸ್ತೆ ಬದಿ ಮೇಯುತ್ತಿದ್ದ ಹಸುವಿನ ಗಂಟಲಲ್ಲಿ ಸಿಲುಕಿ ನೋವಿನಿಂದ ಒದ್ದಾಡುತ್ತಿತ್ತು. 

ಈ ಘಟನೆಯೇ ಡಿಸೋಜಾ ಅವರನ್ನು ತ್ಯಾಜ್ಯಕ್ಕೆ ಹಾಕುವ ವಸ್ತುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಪ್ರೇರೇಪಿಸಿತು. ಅಷ್ಟೇ ಅಲ್ಲದೇ ಈ ಬಗ್ಗೆ ಆಸಕ್ತಿ ಹೊಂದಿರುವ, ಅರಿವು ಇರುವ ಜನರಿಗೂ ಹೇಳಿಕೊಡಲು ಮುಂದಾದರು. ಟೈಲರ್ ಗಳಿಂದ ಸಂಗ್ರಹಿಸಿರುವ ಬಟ್ಟೆಯ ತುಂಡು, ಪ್ರಿಂಟಿಂಗ್ ಪ್ರೆಸ್ ನಿಂದ ಸಂಗ್ರಹಿಸಿರುವ ಪೇಪರ್ ಗಳಿಂದ ಡಿಸೋಜಾ ಅವರ ಕಲಾಕೃತಿಗಳು ಮೂಡುತ್ತವೆ. 

ತ್ಯಾಜ್ಯವಾಗಿ ಬಿದ್ದಿದ್ದ ಬಟ್ಟೆ, ಪೇಪರ್ ಗಳಿಂದ ಡಿಸೋಜಾ ಅವರು ಹೂವುಗಳನ್ನು ತಯಾರಿಸುತ್ತಿದ್ದು, ತ್ಯಾಜ್ಯದಿಂದ ಮಾಡಲ್ಪಟ್ಟ ಅಲಂಕಾರಿಕ ವಸ್ತುಗಳು ಹಾಗೂ ಪುನರ್ಬಳಕೆ ಮಾಡಬಹುದಾದ ಸಾಮಗ್ರಿಗಳು ಖರ್ಚನ್ನೂ ಕಡಿಮೆ ಮಾಡುವುದರ ಜೊತೆಗೆ ಕಾರ್ಯಕ್ರಮಗಳಲ್ಲಿ ಪರಿಸರ ಸ್ನೇಹಿ ಅಲಂಕಾರಗಳನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಜನರಲ್ಲಿ ಅರಿವನ್ನೂ ಮೂಡಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com