ಚಿನ್ನದ ಸರ ಕಳ್ಳಸಾಗಣೆ? ವೀಡಿಯೋ ವೈರಲ್: ಇವರ ವಿರುದ್ಧ ಯಾವ ಸೆಕ್ಷನ್ ಅಡಿ ಕೇಸ್ ಹಾಕಬೇಕು?

ಇತ್ತೀಚೆಗಷ್ಟೇ ಆನೆ ಮರಿಯೊಂದಕ್ಕೆ ಆನೆಗಳ ಹಿಂಡು ಭದ್ರತೆಯನ್ನೊದಗಿಸಿದ್ದ ವೀಡಿಯೋ ವೈರಲ್ ಆಗಿತ್ತು. ಈಗ ಕೀಟ ಪ್ರಪಂಚದ ಅಂತಹದ್ದೇ ಮತ್ತೊಂದು ವಿಶೇಷವಾದ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ ನಂದ ಅವರು ಹಂಚಿಕೊಂಡಿದ್ದಾರೆ. 
ಇರುವೆಗಳು ಚಿನ್ನದ ಸರವೊಂದನ್ನು ಹೊತ್ತು ಸಾಗುತ್ತಿರುವ ದೃಶ್ಯ
ಇರುವೆಗಳು ಚಿನ್ನದ ಸರವೊಂದನ್ನು ಹೊತ್ತು ಸಾಗುತ್ತಿರುವ ದೃಶ್ಯ

ನವದೆಹಲಿ: ಇತ್ತೀಚೆಗಷ್ಟೇ ಆನೆ ಮರಿಯೊಂದಕ್ಕೆ ಆನೆಗಳ ಹಿಂಡು ಭದ್ರತೆಯನ್ನೊದಗಿಸಿದ್ದ ವೀಡಿಯೋ ವೈರಲ್ ಆಗಿತ್ತು. ಈಗ ಕೀಟ ಪ್ರಪಂಚದ ಅಂತಹದ್ದೇ ಮತ್ತೊಂದು ವಿಶೇಷವಾದ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ ನಂದ ಅವರು ಹಂಚಿಕೊಂಡಿದ್ದಾರೆ. 

ಸಾಲು ಸಾಲು ಇರುವೆಗಳು ಜೊತೆ ಸೇರಿಕೊಂಡರೆ ಅಸಾಧ್ಯವಾದದ್ದು ಏನಿದೆ ಹೇಳಿ... ಅಂಥಹದ್ದೇ ಸಾಲು ಸಾಲು ಇರುವೆಗಳು ಚಿನ್ನದ ಸರವೊಂದನ್ನು ಹೊತ್ತು ಸಾಗುತ್ತಿರುವ ವಿಡಿಯೋವನ್ನು ಸುಶಾಂತ ನಂದ ಐಎಫ್ಎಸ್ ಅವರು ಟ್ವೀಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗತೊಡಗಿದೆ. 

ಕಪ್ಪು ಇರುವೆಗಳಿಗೆ ಭಾರಿ ಎನಿಸುವಷ್ಟೇ ದೊಡ್ಡದಾಗಿರುವ ಈ ಚಿನ್ನದ ಸರವನ್ನು ಇರುವೆಗಳ ಸಾಲು ಅನಾಯಾಸವಾಗಿ ಹೊತ್ತೊಯ್ಯುತ್ತಿದ್ದು, ಚಿನ್ನದ ಕಳ್ಳಸಾಗಣೆಗಾರರು ಎಂದು ಸುಶಾಂತ ನಂದ ಇದಕ್ಕೆ ಕ್ಯಾಪ್ಷನ್ ನೀಡಿದ್ದು ಇವರ ವಿರುದ್ಧ ಯಾವ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಲಘುವಾಗಿ ಪ್ರಶ್ನಿಸಿದ್ದಾರೆ. 

ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಯಾವುದೇ ವಿಷಯ ಅಸಾಧ್ಯವಾಗಿರುವುದಿಲ್ಲ. ಒಗ್ಗಟ್ಟಿನ ಶ್ರಮವಿದ್ದಲ್ಲಿ ಏನನ್ನು ಬೇಕಾದರೂ ಮಾಡಬಹುದು. ತಂಡದಲ್ಲಿ ಒಗ್ಗಟ್ಟು ಮುಖ್ಯವಾಗಿದ್ದು ಏನನ್ನು ಬೇಕಾದರೂ ಸಾಧಿಸಲು ಸಹಕಾರಿಯಾಗುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com