ಭೂಮಿ, ಕಟ್ಟಡ, ಕೊನೆಗೆ ಮನೆ: ಅಭಿವೃದ್ಧಿಗಾಗಿ ಎಲ್ಲವನ್ನೂ ದಾನ ಮಾಡಿರುವ ಕೇರಳದ ಕುಟುಂಬವಿದು...

ಸಾಮಾಜಿಕ ಸ್ಥಾನಮಾನವನ್ನು ಆಸ್ತಿಗಳ ಆಧಾರದಲ್ಲಿ ಅಳೆಯುವ, ಸಮಾಜದಲ್ಲಿ ಕೇರಳದ ಕುಟುಂಬವೊಂದು ತಮ್ಮದೆಲ್ಲವನ್ನೂ ಅಭಿವೃದ್ಧಿಗಾಗಿ ನೀಡಿ ಅಚ್ಚರಿ ಮೂಡಿಸಿದೆ. 
ಅಂಚೆ ಕಚೇರಿಗಾಗಿ ನೀಡಲಾದ ಚಾಕೊ ಅವರ ಮನೆ
ಅಂಚೆ ಕಚೇರಿಗಾಗಿ ನೀಡಲಾದ ಚಾಕೊ ಅವರ ಮನೆ
Updated on

ಇಡುಕ್ಕಿ: ಸಾಮಾಜಿಕ ಸ್ಥಾನಮಾನವನ್ನು ಆಸ್ತಿಗಳ ಆಧಾರದಲ್ಲಿ ಅಳೆಯುವ, ಉದ್ದೇಶಪೂರ್ವಕವಲ್ಲದಿದ್ದರೂ ಆಕಸ್ಮಿಕವಾಗಿ ಜಾಗ ಒತ್ತುವರಿಯಾಗಿರುವ ಪ್ರಕರಣಗಳಲ್ಲಿ ಪೀಳಿಗೆಗಳವರೆಗೆ ದ್ವೇಷ ಮುಂದುವರೆಸುವ ಸಮಾಜದಲ್ಲಿ ಕೇರಳದ ಕುಟುಂಬವೊಂದು ತಮ್ಮದೆಲ್ಲವನ್ನೂ ಅಭಿವೃದ್ಧಿಗಾಗಿ ನೀಡಿ ಅಚ್ಚರಿ ಮೂಡಿಸಿದೆ. 

ಈ ಕುಟುಂಬದ ಸದಸ್ಯರು ಆಗಾಗ್ಗೆ ತಮ್ಮ ಮನೆಗಳನ್ನೂ ಸೇರಿದಂತೆ ಆಸ್ತಿಗಳನ್ನು ಸರ್ಕಾರದ ಸದ್ವಿನಿಯೋಗಕ್ಕಾಗಿ ದಾನ ಮಾಡಿದ್ದು, ಈ ಜಾಗಗಳಲ್ಲಿ 20 ಸರ್ಕಾರಿ ಕಚೇರಿಗಳು ಹಾಗೂ ಇತರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. 

<strong>ಚಾಕೊ ಇಟೋಪ್</strong>
ಚಾಕೊ ಇಟೋಪ್

ನನ್ನ ತಂದೆ ಚಾಕೊ ಇಟೋಪ್ ಶಿಕ್ಷಕರಾಗಿ ನಂತರ ಕೃಷಿಯನ್ನು ಮುಂದುವರೆಸಿಕೊಂಡುಹೋದವರಾಗಿದ್ದು, ಸ್ಥಳೀಯ ಅಭಿವೃದ್ಧಿ ಹಾಗೂ ಇಲ್ಲಿನ ಜನರ ಕಲ್ಯಾಣವೇ ಅವರ ಜೀವನದ ಪರಮೋದ್ದೇಶವಾಗಿತ್ತು, ತಮ್ಮ ಮನೆಯೂ ಸೇರಿದಂತೆ ತಮ್ಮ ಆಸ್ತಿಗಳೆಲ್ಲವನ್ನೂ  ಶಾಲೆ ಹಾಗೂ ಇತರ ಕೇಂದ್ರಗಳು ಸೇರಿದಂತೆ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸುವುದಕ್ಕಾಗಿ ದಾನ ನೀಡಿದರು ಎಂದು ಚಾಕೊ ಅವರ ಹಿರಿಯ ಪುತ್ರ ಜಾಕೋಬ್ ಇಟೋಪ್ ಹೇಳಿದ್ದಾರೆ. 

ಚಾಕೋ ಅವರು ಮನ್ನಂಕಂಡಂ ಪಂಚಾಯತ್ ನ ಮೊದಲ ಅಧ್ಯಕ್ಷರೂ ಆಗಿದ್ದರು. ಅವರ ಮಾಲಿಕತ್ವದ 2 ಅಂತಸ್ತಿನ ಕಟ್ಟಡದಲ್ಲಿ ಅದಿಮಾಲಿ ಸರ್ಕಾರಿ ಕಟ್ಟಡ ಪ್ರಥಮವಾಗಿ 1960 ರಲ್ಲಿ ಆರಾಂಭವಾದ ಸ್ಥಳೀಯ ಸಂಸ್ಥೆ ಕಚೇರಿಯಾಗಿದೆ. 

ಇದಿಷ್ಟೇ ಅಲ್ಲದೇ ಚಾಕೋ ಅವರು ಗ್ರಾಮ ಕಾರ್ಯಾಲಯಕ್ಕಾಗಿಯೂ ಸ್ಥಳವನ್ನು ಬಿಟ್ಟುಕೊಟ್ಟಿದ್ದರು. ಇದಾದ ಬಳಿಕ ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಕಚೇರಿಗಳ ಸ್ಥಾಪನೆಗೆ ಜಾಗದ ಕೊರತೆ ಎದುರಾಗುತ್ತಿದ್ದಂತೆಯೇ ತಮ್ಮದೇ ಜಾಗಗಳನ್ನು ಹಾಗೂ ಕಟ್ಟಡಗಳನ್ನು ನೀಡಿದ್ದರು ಚಾಕೋ.

"ಆದಿಮಾಲಿಯ ಮಂದಿ ದೀರ್ಘಾವಧಿಯಿಂದ ಪಶುವೈದ್ಯಕೀಯ ಆಸ್ಪತ್ರೆಯೊಂದರ ಪ್ರಾರಂಭಕ್ಕೆ ಬೇಡಿಕೆ ಹೊಂದಿದ್ದರು. ಇದಕ್ಕಾಗಿ ಸೂಕ್ತ ಕಟ್ಟಡ ಸಿಗದೇ ಇದ್ದಾಗಲೂ ನನ್ನ ತಂದೆ ನಾವಿದ್ದ ಮನೆಯನ್ನೇ ಪಶುವೈದ್ಯಕೀಯ ಆಸ್ಪತ್ರೆಗಾಗಿ ದಾನ ಮಾಡಿದರು. ಬಳಿಕ ಚಾಕೋ ಅವರ ಪತ್ನಿ ಹಾಗೂ ಮೂವರು ಮಕ್ಕಳು ಅದಿಮಾಲಿಯಲ್ಲಿ ಮತ್ತೊಂದು ಹೊಸ ಮನೆಗೆ ಹೋದಾರಾದರೂ ಕಾಲಾನುಕ್ರಮದಲ್ಲಿ ಅದನ್ನೂ ಅಂಚೆ ಕಚೇರಿಗಾಗಿ ನೀಡರು" ಎನ್ನುತ್ತಾರೆ ಜಾಕೋಬ್ ಇಟೋಪ್. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com