ಕಾರವಾರ: ಮುಸ್ಲಿಂ, ಹಿಂದೂ ಗೆಳೆಯರ ಬಳಗದಿಂದ ಕೃಷ್ಣ ಪೂಜೆ!

ಕಾರವಾರದ ಹಬ್ಬುವಾಡದಲ್ಲಿ ಕಳೆದೊಂದು ತಿಂಗಳಿನಿಂದ ಹಿಂದೂ, ಮುಸ್ಲಿಂ ಗೆಳೆಯರ ಗುಂಪೊಂದು ಕೃಷ್ಣನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾರವಾರ: ಕಾರವಾರದ ಹಬ್ಬುವಾಡದಲ್ಲಿ ಹಿಂದೂ, ಮುಸ್ಲಿಂ ಗೆಳೆಯರ ಗುಂಪೊಂದು ಕೃಷ್ಣನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆಸುತ್ತಿದ್ದಾರೆ. ಈ ಯುವಕರು ಬಹುತೇಕ ದಿನಗೂಲಿ ಕಾರ್ಮಿಕರಾಗಿದ್ದು, ದೀಪಾವಳಿ ಸಂದರ್ಭದಲ್ಲಿ ಕಾರವಾರ ಸುತ್ತಮುತ್ತಲಿನ ಜನರು ಪೂಜೆ ಸಲ್ಲಿಸುವುದನ್ನು ಪರಿಗಣಿಸಿ, ಈ ಪೂಜೆ ಸಲ್ಲಿಸುತ್ತಿದ್ದಾರೆ. 

ಇದೇ ಮೊದಲ ಬಾರಿಗೆ ಕೃಷ್ಣನ ಪೂಜೆ ಮಾಡುತ್ತಿದ್ದೇವೆ. ಕೃಷ್ಣ ಇಡೀ ಜಗತ್ತಿಗೆ ದೇವರು, ಎಲ್ಲಾ ಸಮುದಾಯಗಳ ಜನರಿಗೆ ಆತನ ಆಶೀರ್ವಾದ ವಿರಲಿದೆ. ನಾವೆಲ್ಲ ಹಣ ಕೂಡಿಸಿ ವಿಗ್ರಹವನ್ನು ತಂದಿದ್ದೆವು. ನಾವು ಸ್ವಂತ ಇಚ್ಚೆಯಿಂದ ಪೂಜೆ ಮಾಡುತ್ತಿದ್ದೇವೆ. ನಂತರ ಸಮುದ್ರದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಶಾರೂಕ್ ಹೇಳಿದರು. 

ಗೆಳೆಯರಾದ ನಾಗರಾಜ್, ಬಾಬು, ಶಾರೂಖ್, ಹೃತಿಕ್, ಮೊಹಮ್ಮದ್ ಮತ್ತು ಸಿದ್ದಿಕಿ ಮಣ್ಣಿನ ಮೂರ್ತಿಯನ್ನು ಮೂರ್ತಿಯನ್ನು ಪ್ರತಿಷ್ಠಾಪಿಸಿ ಈಗ ಪೂಜಿಸುತ್ತಿದ್ದಾರೆ. ನಾವು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಒಟ್ಟಿಗೆ ಅಧ್ಯಯನ ಅಧ್ಯಯನ, ಪೂಜೆ ಮಾಡುತ್ತೇವೆ. ನಾವು ಬಹುತೇಕ ಪ್ರತಿದಿನ ಭೇಟಿಯಾಗುತ್ತೇವೆ. ನಾವು ಮುಸ್ಲಿಂ ಹಬ್ಬಗಳನ್ನು ಆಚರಿಸುತ್ತೇವೆ ಮತ್ತು ಅವರು ಹಿಂದೂ ಹಬ್ಬಗಳಲ್ಲಿ  ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಬಾಬು ಹೇಳಿದರು. 

ಇವರಿಗೆ ಪ್ರವೀಣ್, ನಾಗನಾಥ್, ರಮೇಶ್ ಮತ್ತು ಅಕ್ರಮ್ ಜೊತೆಯಾಗಿದ್ದು, ಪ್ರತಿಯೊಬ್ಬರು 2,000 ರೂ. ದೇಣಿಗೆ ನೀಡುತ್ತಿದ್ದು, ಅಲಂಕಾರಕ್ಕಾಗಿಯೇ ಈ ಗುಂಪು 15,000 ರೂ. ವೆಚ್ಚ ಮಾಡಿದೆ. ಇನ್ನು ಹಣ ಬೇಕಾಗಿದ್ದು, ಜನರು ನೆರವಾಗಬೇಕು ಎಂದು ಅವರು ತಿಳಿಸಿದರು ಕಾರವಾರ ಸಿಟಿ ಮುನ್ಸಿಪಾಲಿಟಿ ಮತ್ತು ಪೊಲೀಸರಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವಲ್ಲಿ ಕಾರ್ಪೋರೇಟರ್ ಗಜಾನನ ಕುಬ್ಡೆ ನೆರವಾಗಿದ್ದಾರೆ. 

ಈ ವರ್ಷದಿಂದ ಆರಂಭಿಸಿದ್ದೇವೆ. ಮುಂದಿನ ಐದು ವರ್ಷಗಳ ಕಾಲ ಇದನ್ನು ಮುಂದುವರೆಸುವ ಅಗತ್ಯವಿದೆ ಎಂದು ಮೊಹಮ್ಮದ್ ಹೇಳಿದರು. ಡಿಸೆಂಬರ್ ನಲ್ಲಿ ಮೂರ್ತಿ ವಿಸರ್ಜನೆ ವೇಳೆ ದೊಡ್ಡ ಮಟ್ಟದ ಸಮಾರಂಭ ಆಯೋಜಿಸುವ ಬಗ್ಗೆ ಗೆಳೆಯರ ಬಳಗ ಚಿಂತನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com