ಬಂಜರು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ!

ಇದು ವನ್ಯಜೀವಿ ಛಾಯಾಚಿತ್ರಗ್ರಾಹಕರೊಬ್ಬರು ಬರಡು ಭೂಮಿಯನ್ನು ನಂದನವಾಗಿಸಿದ ಸಾಹಸದ ಕಥೆ. ಮರವು ಬೀಜದಿಂದ ಪ್ರಾರಂಭವಾಗುತ್ತದೆ ಅದೇ ರೀತಿ ಮನುಷ್ಯನ ಆಸೆ-ಆಕಾಂಕ್ಷೆಗಳು ಕೂಡ ಸಣ್ಣ ಬೀಜದಿಂದ ಆರಂಭವಾಗಿ ನಂತರ ಹೆಮ್ಮರವಾಗುತ್ತದೆ.
ಪಂಪಯ್ಯ ಮಳಿಮಠ
ಪಂಪಯ್ಯ ಮಳಿಮಠ

ಹೊಸಪೇಟೆ: ಇದು ವನ್ಯಜೀವಿ ಛಾಯಾಚಿತ್ರಗ್ರಾಹಕರೊಬ್ಬರು ಬರಡು ಭೂಮಿಯನ್ನು ನಂದನವಾಗಿಸಿದ ಸಾಹಸದ ಕಥೆ. ಮರವು ಬೀಜದಿಂದ ಪ್ರಾರಂಭವಾಗುತ್ತದೆ ಅದೇ ರೀತಿ ಮನುಷ್ಯನ ಆಸೆ-ಆಕಾಂಕ್ಷೆಗಳು ಕೂಡ ಸಣ್ಣ ಬೀಜದಿಂದ ಆರಂಭವಾಗಿ ನಂತರ ಹೆಮ್ಮರವಾಗುತ್ತದೆ.

<strong>ಪಂಪಯ್ಯ ಮಳಿಮಠ</strong>
ಪಂಪಯ್ಯ ಮಳಿಮಠ

ಈ ಭೂಮಿಯ ಮೇಲೆ ಅಲ್ಪಾವಧಿ ಬದುಕುವ ಮನುಷ್ಯ ಅನೇಕ ಆಸೆ-ಕನಸುಗಳನ್ನು ಹೊಂದಿರುತ್ತಾನೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ. 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಸಸಿಯನ್ನು ನೆಟ್ಟರೆ ಅದು ನಮಗಷ್ಟೇ ಅಲ್ಲ, ನಮ್ಮ ಮುಂದಿನ ಪೀಳಿಗೆಗೂ ಅಮೂಲ್ಯವಾದ ಆಮ್ಲಜನಕವನ್ನು ನೀಡುತ್ತದೆ. 

53 ವರ್ಷದ ಪಂಪಯ್ಯ ಮಳಿಮಠ ಅವರು ಇಂತಹ ಶ್ರೇಷ್ಟ ಕೆಲಸ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಕಮಲಾಪುರದ ವನ್ಯಜೀವಿ ಛಾಯಾಗ್ರಾಹಕ ಮಳಿಮಠ, ವಿಶ್ವಪ್ರಸಿದ್ಧ ಹಂಪಿ ಸುತ್ತಮುತ್ತ ಒಂದು ದಶಕದ ಕಡಿಮೆ ಅವಧಿಯಲ್ಲಿ ಬರಡು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ್ದಾರೆ.

ಮಳಿಮಠ ಒಬ್ಬ ವನ್ಯಜೀವಿ ಉತ್ಸಾಹಿ, ಛಾಯಾಗ್ರಾಹಕ, ಪಕ್ಷಿವೀಕ್ಷಕ ಮತ್ತು ಹಾವು ರಕ್ಷಕ. ತನ್ನ ಒಣಭೂಮಿಯಲ್ಲಿ ಕಿರು ಅರಣ್ಯವನ್ನು ನಿರ್ಮಿಸುವ ಕನಸು ಕಂಡಾಗ, ಅವರು ಅಂದುಕೊಂಡದ್ದನ್ನು ಸಾಧಿಸಬಹುದು ಎಂದು ಹಲವರು ನಂಬಲಿಲ್ಲ. ಆದರೆ ಇಂದು, ಅದೇ ಜನರು ಭೂಮಿಯಲ್ಲಿ ಆದ ಬದಲಾವಣೆ, ಮಳಿಮಠ ಅವರ ಸಾಧನೆ ಕಂಡು ಖುಷಿಪಡುತ್ತಾರೆ. ಅಲ್ಲಿ 2013 ರಲ್ಲಿ ನೆಟ್ಟ 60 ಪ್ರಭೇದಗಳ 800 ಮರಗಳು ಎತ್ತರವಾಗಿ ನಿಂತಿವೆ. 

<strong>ಪಂಪಯ್ಯ ಮಳಿಮಠ</strong>
ಪಂಪಯ್ಯ ಮಳಿಮಠ

ಮಳಿಮಠ ಅವರ ಹಾದಿ ಸುಲಭವಾಗಿರಲಿಲ್ಲ. ಮೊದಲು ಸಸಿಗಳನ್ನು ನೆಡಲು ಒಣ ಭೂಮಿಯನ್ನು ಸಿದ್ಧಪಡಿಸಬೇಕಿತ್ತು. ದೊಡ್ಡ ಬಂಡೆಗಳನ್ನು ಸರಿಸಿ ನೀರು ಮತ್ತು ಸಾವಯವ ಗೊಬ್ಬರ ಹಾಕಿ ಮಣ್ಣನ್ನು ಸಿದ್ಧಪಡಿಸಿದರು. ಮಳಿಮಠ ಅವರು ಪಶ್ಚಿಮ ಘಟ್ಟಗಳ ನೆರಳು ನೀಡುವ ಮರಗಳಿಂದ ತಮ್ಮ ಸಣ್ಣ ಜಮೀನನ್ನು ಶ್ರೀಮಂತಗೊಳಿಸುವುದರ ಜೊತೆಗೆ, ವಿಜಯನಗರದ ಆಡಳಿತವು ತನಗೆ ಗುತ್ತಿಗೆಗೆ ನೀಡಿದ 2.5 ಎಕರೆ ಸರ್ಕಾರಿ ಭೂಮಿಯನ್ನು ಸಣ್ಣ ಅರಣ್ಯವಾಗಿ ಪರಿವರ್ತಿಸಿದರು. ಹಸಿರು ಹೊದಿಕೆ ಈಗ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳನ್ನು ಆಕರ್ಷಿಸುತ್ತದೆ. ಹಳದಿ-ಗಂಟಲಿನ ಬುಲ್ಬುಲ್ ಪಕ್ಷಿ ಹೇರಳವಾಗಿದೆ. ಮಳಿಮಠ ಅವರು ಪ್ರವಾಸಿಗರಿಗಾಗಿ ಬೇಸ್ ಕ್ಯಾಂಪ್ ನ್ನು ಸ್ಥಾಪಿಸಿರುವ ಕಿರು ಅರಣ್ಯದಲ್ಲಿ ಪಕ್ಷಿ ವೀಕ್ಷಣೆಯ ಅವಧಿಗಳು, ಹರ್ಪಿಟಾಲಜಿ ಮತ್ತು ಪರಿಸರ ಪ್ರವಾಸಗಳ ಕುರಿತು ಅವರ ಬಳಿ ಹೋದವರಿಗೆ ವಿವರಿಸುತ್ತಾರೆ. 

ಇಂದು, ಅನೇಕ ನಿಸರ್ಗ ಆಸಕ್ತರು ಮಳಿಮಠ ಅವರ ಕಿರು ಅರಣ್ಯಕ್ಕೆ ಭೇಟಿ ನೀಡುತ್ತಾರೆ. ತಮ್ಮ ಜಮೀನಿನಲ್ಲಿ ಸರಿಯಾದ ಜಾತಿಗಳನ್ನು ನೆಡಲು ಅವರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. “ಇಲ್ಲಿನ ಒಣ ಭೂಮಿಯಲ್ಲಿ ಹಸಿರು ತೇಪೆಯನ್ನು ಅಭಿವೃದ್ಧಿಪಡಿಸಬೇಕೆಂದು ನಾನು ಕನಸು ಕಂಡಿದ್ದೆ. ಅಂತಿಮವಾಗಿ, ನಾನು ನನ್ನ ಗುರಿಯನ್ನು ಪೂರೈಸಿದೆ. ಮರಗಳನ್ನು ನನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇನೆ’ ಎನ್ನುತ್ತಾರೆ ಮಳಿಮಠ. ಆದರೆ ಒಣ, ಕಲ್ಲಿನ ಪ್ರದೇಶವು ದೊಡ್ಡ ಮರಗಳನ್ನು ಬೆಳೆಸಲು ಸೂಕ್ತವಲ್ಲ. “ಹಂಪಿ ಮತ್ತು ಸುತ್ತಮುತ್ತಲಿನ ಸ್ಥಳಗಳು ಅನೇಕ ಕಲ್ಲಿನ ತೇಪೆಗಳನ್ನು ಹೊಂದಿದ್ದು, ದೊಡ್ಡ ಮರಗಳನ್ನು ಬೆಳೆಸಲು ಯೋಗ್ಯವಾಗಿಲ್ಲ. ವಾರ್ಷಿಕ ಮಳೆಯೂ ಕಡಿಮೆ. ಆದರೆ ಸಮರ್ಪಣೆ ಮತ್ತು ನಿರಂತರ ಕಾಳಜಿಯಿಂದ ಈ ಒಣಭೂಮಿಯಲ್ಲಿ ದೊಡ್ಡ ಮರಗಳನ್ನು ಬೆಳೆಸಲು ಸಾಧ್ಯವಾಯಿತು ಎನ್ನುತ್ತಾರೆ. 

“ಇಂದು, ನಾನು ಪಕ್ಷಿ ವೀಕ್ಷಣೆ ಮತ್ತು ಹರ್ಪಿಟಾಲಜಿ ತರಗತಿಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಕಿರು ಅರಣ್ಯಕ್ಕೆ ಶಾಲಾ ಮಕ್ಕಳನ್ನು ಸ್ವಾಗತಿಸುತ್ತೇನೆ. ಪ್ರಕೃತಿ ಕಾರ್ಯಕ್ರಮಗಳ ಸಮಯದಲ್ಲಿ ಹಾವುಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಹಲವಾರು ನಿದರ್ಶನಗಳಿವೆ. ವಿದ್ಯಾರ್ಥಿಗಳು ಸರೀಸೃಪಗಳನ್ನು ಹತ್ತಿರದಿಂದ ನೋಡಿ ಅನುಭವವನ್ನು ಹೊಂದಿದ್ದಾರೆ. ಹಲವಾರು ಅಪರೂಪದ ಪಕ್ಷಿ ಪ್ರಭೇದಗಳು ಇಲ್ಲಿವೆ ಎನ್ನುತ್ತಾರೆ.

ಹಂಪಿಯ ಖ್ಯಾತ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರು, ಮಳಿಮಠ ಅವರು ತಮಗೆ ಹಾಗೂ ಹಲವಾರು ವನ್ಯಜೀವಿ ಛಾಯಾಗ್ರಾಹಕರಿಗೆ ಸ್ಫೂರ್ತಿಯಾಗಿದ್ದಾರೆ. “ಮಿನಿ ಅರಣ್ಯವನ್ನು ರಚಿಸುವಲ್ಲಿ ಅವರ ಪ್ರಯತ್ನಗಳು ಎಲ್ಲರಿಗೂ ತಿಳಿದಿವೆ. ಪ್ರಕೃತಿ ಸಂರಕ್ಷಣೆಯ ಬಗೆಗಿನ ಅವರ ಬದ್ಧತೆ ಅದ್ಭುತವಾಗಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com