ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನ: ಕಲೆಯ ಗತ ವೈಭವಕ್ಕೆ ಆಧುನಿಕತೆಯ ಸ್ಪರ್ಶ!
ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರ ಕರಾವಳಿ ಭಾಗದ ಸಂಸ್ಕೃತಿಯನ್ನು ದೇಶಾದ್ಯಂತ ಪರಿಚಯಿಸಿದ್ದು ಒಂದು ಕಡೆಯಾದರೆ, ಕಳೆದ ನವೆಂಬರ್ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ಯಕ್ಷಗಾನದ ಶುದ್ಧ, ಮೂಲ ರೂಪದ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
Published: 27th November 2022 02:08 PM | Last Updated: 28th November 2022 03:20 PM | A+A A-

ಮಟಪಾಡಿ ಗ್ರಾಮದಲ್ಲಿ ಯಕ್ಷಗಾನ ತಂಡದಿಂದ ಪ್ರದರ್ಶನ
ಉಡುಪಿ: ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರ (Kantara film) ಕರಾವಳಿ ಭಾಗದ ಸಂಸ್ಕೃತಿಯನ್ನು ದೇಶಾದ್ಯಂತ ಪರಿಚಯಿಸಿದ್ದು ಒಂದು ಕಡೆಯಾದರೆ, ಕಳೆದ ನವೆಂಬರ್ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ಯಕ್ಷಗಾನದ ಶುದ್ಧ, ಮೂಲ ರೂಪದ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಮಟಪಾಡಿ ಗ್ರಾಮದಲ್ಲಿ ಯಕ್ಷಗಾನ ತಂಡದವರು(Yakshagana) ಪ್ರದರ್ಶಿಸಿದ ಕಲೆಯ ಸೂಕ್ಷ್ಮತೆಗಳನ್ನು ಮತ್ತೆ ಪರಿಚಯಿಸುವ ಪ್ರಯತ್ನ ಅನೇಕರ ಮನ ಗೆದ್ದಿತು. ಬ್ರಹ್ಮಾವರದ ಮಟಪಾಡಿ ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯು ಯಕ್ಷಗಾನಕ್ಕೆ ಆಧುನಿಕತೆಯ ಸ್ಪರ್ಶ ನೀಡಿ ಪ್ರದರ್ಶಿಸಿದರೂ ಕೂಡ, ಕಲೆಯನ್ನು ಅದರ ಮೂಲ ಸ್ವರೂಪ ಮತ್ತು ವೈಭವದಲ್ಲಿ ಸವಿಯಲು ಪ್ರೇಕ್ಷಕರಿಗೆ ಅವಕಾಶ ನೀಡಿದ್ದು ಸುಳ್ಳಲ್ಲ.
ನಂದಿಕೇಶ್ವರ ಕಲಾ ಮಂಡಳಿಯನ್ನು 57 ವರ್ಷಗಳ ಹಿಂದೆ ತೋನ್ಸೆ ಕಂಠಪ್ಪ ಅವರು ಸ್ಥಾಪಿಸಿದ್ದು, ಮೂಲ ಯಕ್ಷಗಾನ ಕಲೆಯನ್ನು ಉಳಿಸುವಲ್ಲಿ ಕಲಾವಿದರು ಮತ್ತು ತಂಡದಲ್ಲಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ದಶಕಗಳ ಹಿಂದೆ, ಪ್ರದರ್ಶನದ ಸಮಯದಲ್ಲಿ ನೃತ್ಯ ಪ್ರದರ್ಶನಗಳನ್ನು ಒಳಗೊಂಡಿರುವ ಕಲೆಯ ಮಟಪಾಡಿ ಪ್ರಕಾರವು ಪ್ರಾಮುಖ್ಯತೆಯನ್ನು ಗಳಿಸಿತ್ತು. ಯಕ್ಷಗಾನ ವಿಶ್ವಕೋಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ತೋನ್ಸೆ ಕಂಠಪ್ಪ ಅವರು ಕಲಾವಿದರಿಗೆ ಕಲೆಯ ಸೂಕ್ಷ್ಮಗಳನ್ನು ಹೇಳಿಕೊಟ್ಟಿದ್ದರು. ಕಂಠಪ್ಪ ಅವರ ಪುತ್ರ ತೋನ್ಸೆ ಜಯಂತ್ ಕುಮಾರ್ ಈಗ ತಂಡದ ನಿರ್ದೇಶಕರಾಗಿದ್ದಾರೆ. ಪ್ರೇಕ್ಷಕರಿಗೆ ಹಳೆಯ ಶೈಲಿಯನ್ನು ಪಾಲಿಸುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಮಟಪಾಡಿಯಲ್ಲಿ ಯಕ್ಷಗಾನ ಪ್ರೇಮಿಗಳಾದ ಚಂದ್ರಶೇಖರ ಕಲ್ಕೂರ, ಸರ್ಪು ಸದಾನಂದ ಪಾಟೀಲ ಮುಂತಾದ ಸಮಾನ ಮನಸ್ಕರೊಂದಿಗೆ ಸೇರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದರು.
ಇದನ್ನೂ ಓದಿ: ಮಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ 'ಯಕ್ಷಗಾನ' ತರಬೇತಿ ನೀಡುತ್ತಿರುವ ಸಹೋದರರು!
ತಂಡವು ನಾಲ್ಕು ವಿಭಿನ್ನ ನಿರ್ಮಾಣಗಳನ್ನು ಒಳಗೊಂಡು ರಾತ್ರಿ 8.30 ರ ಸುಮಾರಿಗೆ ತನ್ನ ಪ್ರದರ್ಶನವನ್ನು ಪ್ರಾರಂಭಿಸಿತು, ಕೊನೆಯ ಸಂಚಿಕೆಯು ಬೆಳಿಗ್ಗೆ 6.30 ಕ್ಕೆ ಮುಕ್ತಾಯವಾಯಿತು. ಸಾಗರ, ಭಟ್ಕಳ, ತೀರ್ಥಹಳ್ಳಿ, ಕುಮಟಾ, ಶೃಂಗೇರಿ, ಸುಳ್ಯ, ಪುತ್ತೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಮಾಯಾಪುರಿ ಮಹಾತ್ಮೆ, ವೀರಮಣಿ ಕಾಳಗ, ಕರ್ಣಾರ್ಜುನ ಕಾಳಗ, ಮೀನಾಕ್ಷಿ ಕಲ್ಯಾಣ ಮುಂತಾದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲು ಮಂದಾರ್ತಿ, ಮಾರನಕಟ್ಟೆ, ಅಮೃತೇಶ್ವರಿ ಯಕ್ಷಗಾನ ತಂಡಗಳಿಂದ ಸುಮಾರು 45 ಕಲಾವಿದರನ್ನು ಆಹ್ವಾನಿಸಲಾಗಿತ್ತು.
ಕಲೆಯು ಮೂರು ಪ್ರಕಾರಗಳನ್ನು ಹೊಂದಿದೆ -- ತೆಂಕು ತಿಟ್ಟು, ಇದನ್ನು ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿಯ ದಕ್ಷಿಣ ಭಾಗಗಳಲ್ಲಿ ಪ್ರದರ್ಶಿಸಲಾಗುತ್ತದೆ; ಬಡಗು ತಿಟ್ಟು, ಉಡುಪಿಯ ಉತ್ತರ ಭಾಗಗಳಲ್ಲಿ ಪ್ರದರ್ಶನ; ಮತ್ತು ಉತ್ತರ ಕನ್ನಡದಲ್ಲಿ ಬಡಾ-ಬಡಗು. ಮಟಪಾಡಿ ತಿಟ್ಟು ಮತ್ತು ಹಾರಾಡಿ ತಿಟ್ಟುಗಳನ್ನು ಇತರ ವಿಶಿಷ್ಟ ರೂಪಗಳೆಂದು ಪರಿಗಣಿಸಲಾಗಿದೆ. ಆದರೆ, ಕಾಲಾನಂತರದಲ್ಲಿ, ಕಲಾವಿದರು ವಿಶಿಷ್ಟ ಲಕ್ಷಣಗಳನ್ನು ಕಡೆಗಣಿಸಿದ್ದಾರೆ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಕಾಳಜಿ ವಹಿಸದೆ ಪ್ರದರ್ಶನ ನೀಡುತ್ತಾರೆ ಎಂದು ಹಲವು ಸಂಘಗಳಲ್ಲಿ ಯಕ್ಷಗಾನ ಕಲಿಸುವ ಜಯಂತ್ ಕುಮಾರ್ ಹೇಳುತ್ತಾರೆ.
ಕಾರ್ಯಕ್ರಮವನ್ನು ಆಯೋಜಿಸಿದ್ದ ಸದಾನಂದ ಪಾಟೀಲ್ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುತ್ತಾ, ವಿವಿಧ ತಂಡಗಳ ಕಲಾವಿದರನ್ನು ಸಂಪರ್ಕಿಸುವ ಮೂಲಕ ಕಾರ್ಯಕ್ರಮದ ಯೋಜನೆಯನ್ನು ಕಾರ್ಯಗತಗೊಳಿಸಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದಾರೆ. ಮಟಪಾಡಿ ತಿಟ್ಟಿನಲ್ಲಿ ಕಲಾವಿದರ ಈ ರೂಪದಲ್ಲಿರುವ ಕಲಾವಿದರು ‘ಕಟ್ಟು ಮೀಸೆ’ ಧರಿಸುತ್ತಾರೆ, ಇದು ಪಾತ್ರಕ್ಕೆ ಪುಲ್ಲಿಂಗ ನೋಟವನ್ನು ನೀಡುತ್ತದೆ.
ವೇಷಭೂಷಣಗಳು ಸಾಂಪ್ರದಾಯಿಕವಾಗಿದ್ದವು, ಕಲಾವಿದನ ಪ್ರವೇಶದಿಂದ ಪ್ರದರ್ಶನದ ಉದ್ದಕ್ಕೂ ಮತ್ತು ನೃತ್ಯ ಮತ್ತು ಸಂಭಾಷಣೆಯ ಸಮಯದಲ್ಲಿಯೂ ಸಹ ಇದನ್ನು ನಿರ್ವಹಿಸಲಾಯಿತು. ಸಿಲ್ವರ್ ಕಲರ್ ಆರ್ಮ್ಲೆಟ್ (ಭುಜ ಕೀರ್ತಿ) ಸಹ ಕಲಾವಿದರ ವೇಷಭೂಷಣದ ಭಾಗವಾಗಿತ್ತು. ಆಧುನಿಕ ಕಿರೀಟದ ಮೊರೆ ಹೋಗುವ ಬದಲು ಸಾಂಪ್ರದಾಯಿಕ ‘ಕೇದಗೆ ಮುಂಡಾಸು’ ಎಂಬ ಬಟ್ಟೆಯಿಂದ ತಯಾರಿಸಿದ ಕಿರೀಟವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ವಿವರಿಸಿದರು.
ಇದನ್ನೂ ಓದಿ: ತುಳುನಾಡಿನ ಹೆಮ್ಮೆ ಭೂತ ಕೋಲ; ಏನಿದು ಶತಮಾನಗಳ ಆಚರಣೆ?
ಪ್ರದರ್ಶನದ ಹೊರತಾಗಿ, ವೇಷಭೂಷಣದಲ್ಲಿರುವ ಕಲಾವಿದನ ನೋಟವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ, ಅವರ ನೆನಪುಗಳನ್ನು ಹಳೆಯ ದಿನಗಳಿಗೆ ಕೊಂಡೊಯ್ಯುತ್ತದೆ. ಯಕ್ಷಗಾನದ ಹಿರಿಯ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ, ಅಜ್ರಿ ಗೋಪಾಲ ಗಾಣಿಗ, ಐರೋಡಿ ಗೋವಿಂದಪ್ಪ, ಮಾಧವ ನಾಗೂರ್, ಕೊಳಲಿ ಕೃಷ್ಣ ಶೆಟ್ಟಿ, ನಾರಾಡಿ ಭೋಜರಾಜ ಶೆಟ್ಟಿ, ಉಪ್ಪುಂದ ನಾಗೇಂದ್ರ ರಾವ್ ಮುಂತಾದವರು ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಪ್ರೇಕ್ಷಕರು ಗ್ರೀನ್‌ರೂಮ್‌ಗೆ ಬಂದು ‘ಕೇದಗೆ ಮುಂಡಾಸು’ ಹೇಗೆ ನಿರ್ಮಾಣವಾಗಿದೆ ಎಂಬುದನ್ನು ಕುತೂಹಲದಿಂದ ನೋಡುತ್ತಿದ್ದರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಯಕ್ಷಗಾನ ಪ್ರೇಮಿ ಮಟಪಾಡಿ ಚಂದ್ರಶೇಖರ ಕಲ್ಕೂರ ಸ್ಮರಿಸಿದರು. ಭಾಗವತರಾದ ಕಿಗ್ಗ ಹಿರಿಯಣ್ಣ ಆಚಾರ್ಯ, ನಾಗೇಶ್ ಕುಲಾಲ್, ಹೆರಂಜಾಲು ಗೋಪಾಲ ಗಾಣಿಗ, ಹೊಸಲ ಉದಯ್ ಕುಮಾರ್ ತಮ್ಮ ಉತ್ತಮ ಮತ್ತು ಶಕ್ತಿಯುತ ನಿರೂಪಣೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ''ಯಕ್ಷಗಾನ ಕಲೆ ಹೇಗೆ ವಿಶಿಷ್ಟವಾಗಿದೆ ಮತ್ತು ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂಬುದನ್ನು ಹೊಸ ಪೀಳಿಗೆಗೆ ತಿಳಿಸಲು ನಾವು ಈ ಪ್ರದರ್ಶನವನ್ನು ಆಯೋಜಿಸಲು ಬಯಸಿದ್ದೇವೆ ಎಂದು ಹೇಳಿದರು.