ಕೇರಳ: ಮನೆ ಜಪ್ತಿಗೆ ನೋಟಿಸ್ ಬಂದ ಬೆನ್ನಲ್ಲೇ ಮೀನು ಮಾರಾಟಗಾರನಿಗೆ ಹೊಡೆಯಿತು 70 ಲಕ್ಷ ರೂ. ಲಾಟರಿ!

ನಲವತ್ತು ವರ್ಷದ ಪೂಕುಂಜು ಅವರು ತಮ್ಮ ಜೀವನದಲ್ಲಿ ಅಕ್ಟೋಬರ್ 12 ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಕ್ಟೋಬರ್ 12 ಅವರ ಪಾಲಿನ ಅದೃಷ್ಟದ ದಿನವಾಗಿದೆ. 
ಪೂಕುಂಜು ಅವರ ಪತ್ನಿ ಮುಮ್ತಾಜ್, ಮಗ ಮುನೀರ್ ಮತ್ತು ಮಗಳು ಮುಹ್ಸಿನಾ ಅವರೊಂದಿಗೆ
ಪೂಕುಂಜು ಅವರ ಪತ್ನಿ ಮುಮ್ತಾಜ್, ಮಗ ಮುನೀರ್ ಮತ್ತು ಮಗಳು ಮುಹ್ಸಿನಾ ಅವರೊಂದಿಗೆ

ಕೊಲ್ಲಂ: ನಲವತ್ತು ವರ್ಷದ ಪೂಕುಂಜು ಅವರು ತಮ್ಮ ಜೀವನದಲ್ಲಿ ಅಕ್ಟೋಬರ್ 12 ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಕ್ಟೋಬರ್ 12 ಅವರ ಪಾಲಿನ ಅದೃಷ್ಟದ ದಿನವಾಗಿದೆ. 

ಸಾಲದ ಸುಳಿಯಲ್ಲಿ ಸಿಲುಕಿದ್ದ ಪೂಕುಂಜು ಅವರಿಗೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಸುಮಾರು 12 ಲಕ್ಷ ರೂಪಾಯಿ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ಅವರಿಗೆ ಬ್ಯಾಂಕ್ ಅಟ್ಯಾಚ್‌ಮೆಂಟ್(ಜಪ್ತಿ) ನೋಟಿಸ್ ನೀಡಲಾಗಿದೆ. ನೋಟಿಸ್ ಸ್ವೀಕರಿಸಿದ ಒಂದೂವರೆ ಗಂಟೆಯ ನಂತರ ಅವರಿಗೆ ಅವರು ಸಹೋದರ ಕರೆ ಮಾಡಿ, 70 ಲಕ್ಷ ರೂಪಾಯಿ ಲಾಟರಿ ಹೊಡೆದಿರುವ ವಿಚಾರ ತಿಳಿಸಿದ್ದಾರೆ.

ಮೈನಾಗಪಳ್ಳಿಯ ಪಾಲಮೂತಿಲ್ ನಿವಾಸಿ ಪೂಕುಂಜು ಮೀನು ಮಾರಾಟಗಾರರಾಗಿದ್ದು, 40 ವರ್ಷದ ಈತ ತನ್ನ ಮೋಟಾರ್ ಸೈಕಲ್‌ನಲ್ಲಿ ಮೀನು ಮಾರಾಟ ಮಾಡುವ ಮೂಲಕ ಕುಟುಂಬವನ್ನು ಸಾಕುತ್ತಿದ್ದರು.

ಎಂಟು ವರ್ಷಗಳ ಹಿಂದೆ ಪೂಕುಂಜು ಅವರು ಮನೆ ಕಟ್ಟಲು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ 7.45 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಅಂದಿನಿಂದ ಸಾಲ ತೀರಿಸಲು ಹರಸಾಹಸ ಪಡುತ್ತಿದ್ದಾರೆ. ಈಗ ಬಡ್ಡಿ ಸೇರಿ ಸುಮಾರು 12 ಲಕ್ಷ ರೂ. ಆಗಿತ್ತು.

ಸಾಲ ಮರು ಪಾವತಿಸಿದ ಪೂಕುಂಜು ಅವರ ಮನೆ ಜಪ್ತಿ ಮಾಡಲು ನಿರ್ಧರಿಸಿದ್ದ ಬ್ಯಾಂಕ್ ಗುರುವಾರ ನೋಟಿಸ್ ನೀಡಿತ್ತು. ನೋಟಿಸ್ ಬಂದ ನಂತರ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದರು ಮತ್ತು ಬಹುತೇಕ ಮನೆ ಕಳೆದುಕೊಳ್ಳುವ ಹಂತದಲ್ಲಿದ್ದರು. 

ಆದರೆ, ಮಧ್ಯಾಹ್ನ 3.30 ರ ಸುಮಾರಿಗೆ ಅವರಿಗೆ ಅನಿರೀಕ್ಷಿತ ಕರೆ ಬಂದಿದ್ದು, ಅಕ್ಷಯ ಲಾಟರಿಯಲ್ಲಿ ಅಗ್ರ ಬಹುಮಾನ ಗೆದ್ದಿರುವುದಾಗಿ ಅವರ ಸಹೋದರ ತಿಳಿಸಿದ್ದಾರೆ.

ತಂದೆ ಯೂಸುಫ್ ಕುಂಜು ಆಗಾಗ ಲಾಟರಿ ಖರೀದಿಸುತ್ತಾರೆ. ಆದರೆ ಪೂಕುಂಜು ಲಾಟರಿ ಟಿಕೆಟ್‌ಗಳನ್ನು ಖರೀದಿಸುವುದು ವಿರಳ. ಮಂಗಳವಾರ ಅವರು ಪ್ಲಾಮೂಟ್ಟಿಲ್ ಮಾರುಕಟ್ಟೆಯಲ್ಲಿ ಲಾಟರಿ ಮಾರಾಟಗಾರ ಗೋಪಾಲ ಪಿಳ್ಳೈ ಅವರಿಂದ ಲಾಟರಿ ಟಿಕೆಟ್ ಖರೀದಿಸಿದ್ದು, ಗುರುವಾರ ಅವರಿಗೆ 70 ಲಕ್ಷ ರೂಪಾಯಿ ಲಾಟರಿ ಹೊಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com