ಸ್ವಯಂ-ಕಲಿಕೆಯಿಂದಲೇ NEET ಪರೀಕ್ಷೆ ಗೆದ್ದ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ

ಮನಸಿದ್ದರೆ ಮಾರ್ಗ ಎಂಬ ನಾಣ್ಣುಡಿ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗನ ಜೀವನದಲ್ಲಿ ಅಕ್ಷರಃ ನಿಜವಾಗಿದ್ದು, NEET ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಲಕ್ಷಾಂತರ ರೂ ವ್ಯಯಿಸುತ್ತಿರುವ ಈ ಕಾಲಘಟ್ಟದಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ ಸ್ವಯಂಕಲಿಕೆಯ ಮೂಲಕ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಮೆಹ್ರಾಜ್-ಉದ್-ದಿನ್ ಖಾನ್
ಮೆಹ್ರಾಜ್-ಉದ್-ದಿನ್ ಖಾನ್

ಶ್ರೀನಗರ: ಮನಸಿದ್ದರೆ ಮಾರ್ಗ ಎಂಬ ನಾಣ್ಣುಡಿ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗನ ಜೀವನದಲ್ಲಿ ಅಕ್ಷರಃ ನಿಜವಾಗಿದ್ದು, NEET ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಲಕ್ಷಾಂತರ ರೂ ವ್ಯಯಿಸುತ್ತಿರುವ ಈ ಕಾಲಘಟ್ಟದಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ ಸ್ವಯಂಕಲಿಕೆಯ ಮೂಲಕ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಉತ್ತರ ಕಾಶ್ಮೀರದ ಪಟ್ಟನ್‌ನಲ್ಲಿ ಬೀದಿ ಬದಿ ಬಾರ್ಬೆಕ್ಯು ಮಾರಾಟಗಾರನ ಮಗ ಮೊದಲ ಪ್ರಯತ್ನದಲ್ಲಿ ನೀಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾನೆ. ಬಡ ಕುಟುಂಬಕ್ಕೆ ಸೇರಿದ ಹುಡುಗ ಯಾವುದೇ ಟ್ಯೂಷನ್ ತೆಗೆದುಕೊಳ್ಳದಿದ್ದರೂ ಮತ್ತು NEET-UG ಪರೀಕ್ಷೆಗೆ ಸ್ವಯಂ ಅಧ್ಯಯನ ಮಾಡಿ ಈ ಸಾಧನೆ ಗೈದಿದ್ದಾರೆ. ಗುಲಿಸ್ತಾನ್ ಅಹ್ಮದ್ ಖಾನ್ ಅವರ ನಾಲ್ಕು ಮಕ್ಕಳಲ್ಲಿ ಹಿರಿಯ ಮಗ 20 ವರ್ಷದ ಮೆಹ್ರಾಜ್-ಉದ್-ದಿನ್ ಖಾನ್ ಈ ಸಾಧನೆ ಮಾಡಿದ್ದು, ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟನ್‌ನಲ್ಲಿರುವ ಗುವಾಹ್ ಗ್ರಾಮದ ನಿವಾಸಿಗಳಾಗಿದ್ದಾರೆ. 

ಮೆಹ್ರಾಜ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಒಟ್ಟು 720 ಅಂಕಗಳಲ್ಲಿ 591 ಅಂಕಗಳನ್ನು ಗಳಿಸುವ ಮೂಲಕ ಅರ್ಹತೆ ಪಡೆದಿದ್ದಾರೆ. ಮೆಹ್ರಾಜ್ ಅವರ ತಂದೆ ಗುಲ್ಶನ್ ಅಹ್ಮದ್ ಅವರು ಗ್ರಾಮದಲ್ಲಿ ಬಾರ್ಬೆಕ್ಯು ಅಂಗಡಿಯನ್ನು ನಡೆಸುತ್ತಿದ್ದರು ಮತ್ತು ಮೆಹ್ರಾಜ್ ಕೂಡ ತಮ್ಮ ತಂದೆ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದರು. 

ಈ ಬಗ್ಗೆ ಮಾತನಾಡಿರುವ ಮೆಹ್ರಾಜ್, "ನಾನು ಪ್ರತಿ ತಿಂಗಳು ಕನಿಷ್ಠ ಒಂದು ವಾರ ಅಂಗಡಿಯಲ್ಲಿ ನನ್ನ ತಂದೆಗೆ ಸಹಾಯ ಮಾಡುತ್ತೇನೆ. ನನ್ನ ತಂದೆ ಇಲ್ಲದಿದ್ದಾಗ ಅಂಗಡಿಯನ್ನು ನಿರ್ವಹಿಸುವುದು ನನ್ನ ಮುಖ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಪರೀಕ್ಷೆಗೆ ತಾವು ತಯಾರಿ ನಡೆಸಿದ ಪ್ರಕ್ರಿಯೆ ಕುರಿತು ಮಾತನಾಡಿದ ಮೆಹ್ರಾಜ್, ನಾನು ಸ್ವಯಂ-ತರಬೇತಿ ನಡೆಸುತ್ತಿದ್ದೆ. ನಾನು ಎಲ್ಲದರಲ್ಲೂ ಗಮನಹರಿಸಿದ್ದೇನೆ. ನಾನು ದಿನಕ್ಕೆ 8-10 ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ. ನನ್ನ ಸ್ವಯಂ ಅನುಭವದ ಅಭಿಪ್ರಾಯದಂತೆ ಅಂತರ್ಜಾಲವು ಹೆಚ್ಚಿನ ಆಕಾಂಕ್ಷಿಗಳಿಗೆ ಅಡ್ಡಿಪಡಿಸುತ್ತದೆ. ಆದಾಗ್ಯೂ, ನಾನು ಅಧ್ಯಯನಕ್ಕಾಗಿ ನನ್ನ ಇಂಟರ್ನೆಟ್ ಬಳಕೆಯನ್ನು ಕಡಿಮೆ ಮಾಡಿದ್ದೇನೆ ಮತ್ತು ಅದು ತುಂಬಾ ಸಹಾಯಕವಾಗಿದೆ ಎಂದು ಅವರು ಹೇಳಿದರು. 

ಅವನು VIII ನೇ ತರಗತಿಯಲ್ಲಿದ್ದಾಗಮೆಹ್ರಾಜ್ ಬಳಿ ಮೊಬೈಲ್ ಫೋನ್ ಇಲ್ಲದಿದ್ದರೂ, ಕೋವಿಡ್ ಲಾಕ್‌ಡೌನ್ ಮುಗಿದ ನಂತರ ಪೋಷಕರು ಮೊಬೈಲ್ ಖರೀದಿಸಿದರು. ಮೆಹ್ರಾಜ್ ಗೆ ವೈದ್ಯನಾಗ ಬೇಕೆಂಬ ಮಹದಾಸೆ ಇದ್ದು, ಇದೇ ಕನಸು ಆತನ ಕುಟುಂಬಸ್ಥರದ್ದೂ ಕೂಡ.. ಕುಟುಂಬದ ಕನಸನ್ನು ನನಸಾಗಿಸಲು ಅಂದಿನಿಂದ ಬಹಳ ಕಷ್ಟಪಟ್ಟು ಓದುತ್ತಿದ್ದಾನೆ. ಮೆಹ್ರಾಜ್ ಅವರ ಕಿರಿಯ ಸಹೋದರ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಅವರ ಇಬ್ಬರು ಸಹೋದರಿಯರು XI ಮತ್ತು VI ನೇ ತರಗತಿಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com