
ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ(ಬಿಟಿಆರ್) ಕೆಲಸ ಮಾಡುತ್ತಿರುವ ಪಶುವೈದ್ಯ ಡಾ. ವಸೀಂ ಮಿರ್ಜಾ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ಗಜ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆಗಸ್ಟ್ 12 ರಂದು ವಿಶ್ವ ಆನೆ ದಿನದಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮೀರ್ಜಾ ಅವರಿಗೆ ಗಜ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಇದನ್ನು ಓದಿ: ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವು!
"ಕರ್ನಾಟಕದ ಅಧಿಕಾರಿಯೊಬ್ಬರು ಇಂತಹ ಪ್ರಶಸ್ತಿಯನ್ನು ಪಡೆಯುತ್ತಿರುವುದು ಇದೇ ಮೊದಲು. ಇದು ತುಂಬಾ ಉತ್ತೇಜನಕಾರಿಯಾಗಿದೆ" ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ಸುಭಾಷ್ ಮಲ್ಖಾಡೆ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಫೆಬ್ರವರಿ 2023ರಲ್ಲಿ ಬಿಟಿಆರ್ ಬಳಿ ವಿದ್ಯುತ್ ತಗುಲಿದ ಆನೆಯ ಜೀವ ಉಳಿಸಲು ಶ್ರಮಿಸಿದ್ದನ್ನು ಗುರುತಿಸಿ ಡಾ. ಮಿರ್ಜಾ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಹೆಚ್ಚುವರಿ ಪಿಸಿಸಿಎಫ್, ವನ್ಯಜೀವಿ, ಕುಮಾರ್ ಪುಷ್ಕರ್ ಅವರು ವನ್ಯಜೀವಿಗಳ ಸಂರಕ್ಷಣೆ, ವಿಶೇಷವಾಗಿ ಆನೆಗಳ ಸಂರಕ್ಷಣೆಯಲ್ಲಿ ತೊಡಗಿರುವ ಡಾ ಮಿರ್ಜಾ ಅವರ ಹೆಸರನ್ನು ಪ್ರಶಸ್ತಿಗೆ ಸೂಚಿಸಿದ್ದರು.
ಈ ವರ್ಷ ಆಗಸ್ಟ್ 12 ರಂದು ಒಡಿಶಾದ ಮಹಾನದಿ ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅಂಗುಲ್ ನಲ್ಲಿ ವಿಶ್ವ ಆನೆ ದಿನ ಕಾರ್ಯಕ್ರಮ ನಡೆಯಲಿದೆ.
Advertisement