ಉಡುಪಿ: ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ವಿದ್ಯಾರ್ಥಿಗಳು; ಪರಿಶುದ್ದ ವಾತಾವರಣಕ್ಕಾಗಿ ಹಳ್ಳಿಗಳತ್ತ ಮುಖ ಮಾಡುತ್ತಿರುವ ನಗರವಾಸಿಗಳು!

ಉಡುಪಿ ಜಿಲ್ಲೆಯಲ್ಲಿ, ಖಾರಿಫ್ ಋತುವಿನಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು, ವಿಶ್ರಾಂತಿ ಪಡೆಯಲು ಈ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಗೆ ಬರುತ್ತಾರೆ. ಪ್ರಾಯೋಗಿಕವಾಗಿ ಇಲ್ಲಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳು
ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳು

ಉಡುಪಿ: ಕಾಂಕ್ರೀಟು ಕಾಡಿನಲ್ಲಿ ಸದಾ ಗಿಜುಗುಡುವ ಟ್ರಾಫಿಕ್  ಮತ್ತು ಮಾಲಿನ್ಯದಿಂದ ಬಸವಳಿದಿದ್ದ ವಿದ್ಯಾರ್ಥಿಗಳು, ಪ್ರಕೃತಿಯೊಂದಿಗೆ ಒಂದಾಗಿ ಕುಣಿದು ನಲಿದಿದ್ದಾರೆ.

ಬೆಂಗಳೂರಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪಾಠ ಕಲಿಯುತ್ತಿದ್ದ ಮಕ್ಕಳು, ತುಳುನಾಡಿನ ಗದ್ದೆಗೆ ಇಳಿದು ನಾಟಿ ಮಾಡಿ ಕೃಷಿ ಚಟುವಟಿಕೆಯ ಮಾಹಿತಿ ಪಡೆದುಕೊಂಡರು. ಬೆಂಗಳೂರಿನ ಉತ್ತರದ ಎಂಟು ಕಾಲೇಜುಗಳ ರೋವರ್ಸ್, ರೇಂಜರ್ಸ್‌ನ 82 ವಿದ್ಯಾರ್ಥಿಗಳು ನಕ್ರೆ ಪರಪುವಿನ ಜ್ಯೋತಿ ಜೆ.ಪೈ ಅವರ ಮನೆಯ ಗದ್ದೆಗೆ ಇಳಿದು ಹಾಡುತ್ತ ನಾಟಿ ಮಾಡಿ ಗಮನ ಸೆಳೆದಿದ್ದಾರೆ.

ಬೇಸಾಯ ಎಂದರೇನು? ಹೇಗೆ ಮಾಡಬೇಕು? ಗದ್ದೆ ಅಂದರೇನು? ಎಂಬ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದರೆ ಪ್ರಯೋಜನವಿಲ್ಲ. ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಇರಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಕರೆತರಲಾಗಿತ್ತು. ಯುವ ಸಮುದಾಯ ಕೃಷಿಯಿಂದ ವಿಮುಖರಾಗುತ್ತಿರುವುದು ಬೇಸರದ ಸಂಗತಿ. ಕೃಷಿ ಉಳಿಯಬೇಕಾದರೆ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಕೃಷಿಯ ಅಭಿರುಚಿ ಮೂಡಲಿ ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲೆಯಲ್ಲಿ, ಖಾರಿಫ್ ಬೆಳೆ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು, ವಿಶ್ರಾಂತಿ ಪಡೆಯಲು ಈ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಗೆ ಬರುತ್ತಾರೆ. ಪ್ರಾಯೋಗಿಕವಾಗಿ ಇಲ್ಲಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಬೆಂಗಳೂರಿನ ಆರ್.ಸಿ ಕಾಲೇಜು, ಮಲ್ಲೇಶ್ವರಂ ಎಂ.ಇ.ಎಸ್ ಕಾಲೇಜು, ಬೆಂಗಳೂರು ಆರ್ಟ್ಸ್ ಕಾಲೇಜು, ಜಿಎಫ್‌ಜಿ ಕಾಲೇಜು ರಾಜಾಜಿನಗರ, ಶೇಷಾದ್ರಿಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಎಂ.ಇ.ಎಸ್. ಕಾಲೇಜು, ಕೆ.ಕೆ.ಪಿಯು ಕಾಲೇಜು ಮಲ್ಲೇಶ್ವರ, ಹೀಗೆ ಬೆಂಗಳೂರು ಉತ್ತರದ ಒಟ್ಟು 8 ಕಾಲೇಜಿನ ವಿದ್ಯಾರ್ಥಿಗಳು ಬಂದಿದ್ದರು. ಕಾರ್ಕಳದ ಎಂಪಿಎಂ ಕಾಲೇಜಿನ ವಿದ್ಯಾರ್ಥಿಗಳು ಇವರಿಗೆ ಸಹಕಾರ ನೀಡಿದರು.

ಭತ್ತದ ಗದ್ದೆಗಳಿಗೆ ಹೆಜ್ಜೆ  ಆನಂದ ಪಟ್ಟರು. ಈ ವಿದ್ಯಾರ್ಥಿಗಳು ಈ ಹಿಂದೆ ಭತ್ತ ನಾಟಿ ಮಾಡುವುದನ್ನು ಕಾರಿನಲ್ಲಿ ಅಥವಾ ರೈಲಿನಲ್ಲಿ ಹೋಗುವಾಗ ನೋಡಿದ್ದರು, ಆದರೆ ಈಗ ಸ್ವತಃ ಅವರೇ ಅದರ ಭಾಗವಾಗಿದ್ದರು. ಹಚ್ಚ ಹಸಿರಿನ ತಾಜಾ ಗಾಳಿಯನ್ನು ಉಸಿರಾಡುತ್ತಾ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ಬೆಂಗಳೂರು ಉತ್ತರ ಜಿಲ್ಲೆಯ ಸಹಯೋಗದಲ್ಲಿ ಈ ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಕರಾವಳಿ ಪ್ರದೇಶದ ಸಂಪ್ರದಾಯ ಅವರನ್ನು ಮಂತ್ರಮುಗ್ಧರನ್ನಾಗಿಸಿತು. ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಕಮಿಷನರ್, ಪಿಜಿಆರ್ ಸಿಂಧಿಯಾ ಅವರು ಈ ಯೋಜನೆ ರೂಪಿಸಿದ್ದರು.

ಕಾರ್ಕಳ ತಾಲೂಕಿನ ನಕ್ರೆ ಪ್ರದೇಶದಲ್ಲಿ ಉಡುಪಿ ಜಿಲ್ಲೆ ಗೈಡ್ಸ್ ಆಯುಕ್ತೆ ಜ್ಯೋತಿ ಜೆ ಪೈ ಅವರ ಗದ್ದೆಯಲ್ಲಿ ಎಂಇಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಪಂಚಮಿ ಟ್ರ್ಯಾಕ್ಟರ್ ಓಡಿಸಿದರು. ಟ್ರ್ಯಾಕ್ಟರ್ ಓಡಿಸಿದ ನಂತರ ಆಕೆ ಪುಳಕಿತಳಾಗಿದ್ದಳು.

ನಗರ ಮೂಲದ ವಿದ್ಯಾರ್ಥಿಗಳು ಭತ್ತದ ಕೃಷಿ ಚಟುವಟಿಕೆಗಳನ್ನು ಅರ್ಥಮಾಡಿಕೊಂಡು ಆನಂದಿಸಬೇಕು, ಇದು ಈ ಯೋಜನೆಯ ಉದ್ದೇಶವಾಗಿದೆ ಎಂದು ಪೈ ಹೇಳಿದರು. ಮೈದಾನದಲ್ಲಿ ಶ್ರಮವಹಿಸಿ ಕೆಲಸ ಮಾಡಿದ ನಂತರ, ತುಳು ಮಾತನಾಡುವ ಜನರ ಸಂಸ್ಕೃತಿಯನ್ನು ಪರಿಚಯಿಸಲಾಯಿತು ಮತ್ತು ಸಾಂಪ್ರದಾಯಿಕ ಮಧ್ಯಾಹ್ನದ ಊಟವನ್ನು ಸವಿದರು, ಇದರಲ್ಲಿ ಹಲಸು, ಪತ್ರೋಡೆ, ಹುರುಳಿ ಚಟ್ನಿ, ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿಯ ಅನ್ನ, ಸಾರು ಹೀಗೆ ತುಳುನಾಡಿನ ಖಾದ್ಯವನ್ನು ಸವಿದು ಖುಷಿ ಪಟ್ಟರು.

ಸರಳ ಆಹಾರವೇ ರೈತರ ಫಿಟ್‌ನೆಸ್‌ನ ರಹಸ್ಯ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ಪಂಚಮಿ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಕುಶಿ ಮಾತನಾಡಿ, ಹಳ್ಳಿಯ ಜೀವನವನ್ನು ಅನುಭವಿಸಿದ ನಂತರ ಮತ್ತು ರೈತರ ಕಷ್ಟಗಳನ್ನು ನೋಡಿದ ನಂತರ ನಾನು ಪುಳಕಿತನಾಗಿದ್ದೇನೆ ಎಂದು ಹೇಳಿದರು. "ಕೆಸರು ಗದ್ದೆಯಲ್ಲಿ ಆಟವಾಡುವುದು ಮತ್ತು ಪ್ರಕೃತಿಯ ಸೌಂದರ್ಯ ಅನುಭವಿಸುವುದು ನನ್ನ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಮಾಡಿರುವ ಯುವ ದಂತವೈದ್ಯರಾದ ಡಾ.ಭಾರ್ಗವ್ ಭಟ್ ಅವರು ಭಾನುವಾರ ಕೆಲಸದಿಂದ ವಿರಾಮ ತೆಗೆದುಕೊಂಡು ಭತ್ತದ ಗದ್ದೆಯಲ್ಲಿ ಕೆಲಸ ಮಾಡಿದರು. ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಡಾ.ಭಟ್ ತಮ್ಮ ಪೂರ್ವಿಕರ ಮನೆಯಲ್ಲಿ ಭತ್ತದ ಗದ್ದೆಯನ್ನು ಉಳುಮೆ ಮಾಡಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು. ಅವರು ಬಾಲ್ಯದಿಂದಲೂ ಭತ್ತದ ಕೃಷಿಯನ್ನು ಮಾತ್ರ ನೋಡುತ್ತಿದ್ದರು. ಕಳೆದ ವಾರ, ಸ್ಥಳೀಯರ ಸಲಹೆಗಳೊಂದಿಗೆ ಮತ್ತು ಅವರ ಮಾರ್ಗದರ್ಶನದೊಂದಿಗೆ, ಡಾ ಭಟ್ ಅಂತಿಮವಾಗಿ ಭತ್ತದ ಗದ್ದೆ ಪ್ರವೇಶಿಸಿದರು. ಯಂತ್ರ ಬಳಸಿ ಸ್ವತಃ ತಾವೇ ಭತ್ತದ ಸಸಿ ನಾಟಿ ಮಾಡಿದರು.

ಸಮಾಜಸೇವಕ ಜಿ ವಾಸುದೇವ ಭಟ್ ಪೆರಂಪಳ್ಳಿ ವೈದ್ಯರನ್ನು ಶ್ಲಾಘಿಸಿ, ಭತ್ತದ ಕೃಷಿಯಿಂದ ಅಪಾರ ಸಂತಸ ತರುತ್ತದೆ ಎಂಬುದನ್ನು ತೋರಿಸಿಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಯುವಕರು ತಮ್ಮ ರಜಾದಿನಗಳಲ್ಲಿಯೂ ಗ್ಯಾಜೆಟ್‌ಗಳಲ್ಲಿ ಮುಳುಗಿರುತ್ತಾರೆ, ಆದರೆ ಈ ಸಂತೋಷವು ಪ್ರಕೃತಿಯ ನಡುವೆ  ಬೆರೆತು ನಮ್ಮ ಸಂಪ್ರದಾಯ ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.

ಕೆಲವು ವಾರಗಳ ಹಿಂದೆ ಉಡುಪಿ ಜಿಲ್ಲೆಯ ಕೋಟ ತಟ್ಟು ಗ್ರಾಮದಲ್ಲಿ ಗೀತಾನಂದ ಫೌಂಡೇಶನ್ ಆಯೋಜಿಸಿದ್ದ ಇನ್ನೊಂದು ಕಾರ್ಯಕ್ರಮದಲ್ಲಿ ಕೋಟ ತಟ್ಟು, ಪಡುಕೆರೆ, ಮಣೂರು ಭಾಗದ ವಿದ್ಯಾರ್ಥಿಗಳು ಭತ್ತದ ಕೃಷಿಯಲ್ಲಿ ತೊಡಗಿದ್ದರು.

ಕಳೆದ 11 ವರ್ಷಗಳಿಂದ ಉಡುಪಿಯಲ್ಲಿ ಯುವಕರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಟೀಮ್ ನೇಷನ್ ಫಸ್ಟ್ ಜುಲೈ 23 ರಂದು ಉಡುಪಿಯಲ್ಲಿಯೂ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಟೀಮ್ ನೇಷನ್ ಫಸ್ಟ್ ಅಧ್ಯಕ್ಷ ಸೂರಜ್ ಕಿದಿಯೂರು ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ತಮ್ಮ ತಂಡದ ಸುಮಾರು 200 ಸದಸ್ಯರು ಉಡುಪಿಯ ಕಿದಿಯೂರಿನ ನಾಲ್ಕು ಎಕರೆ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com