ಕೊಡುವುದರಲ್ಲಿನ ಸಂತೋಷ: ನಿರ್ಗತಿಕ ವರ್ಗಗಳಿಗೆ ಹುಬ್ಬಳ್ಳಿ ದಂಪತಿಗಳ ನೆರವಿನಹಸ್ತ!

ಜೀವನದಲ್ಲಿ ಎಷ್ಟು ಸಂಪಾದನೆ ಮಾಡಿದರೂ, ಪರರಿಗೆ ಕೊಡುವುದರಲ್ಲಿರುವ ಸಂತೋಷವೇ ಬೇರೆ. ಈ ಮಾತನ್ನು ಈ ಹುಬ್ಬಳ್ಳಿಯ ದಂಪತಿಗಳು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದಾರೆ.
ಕೊಡುವುದರಲ್ಲಿರುವ ಸಂತೋಷ
ಕೊಡುವುದರಲ್ಲಿರುವ ಸಂತೋಷ

ಹುಬ್ಬಳ್ಳಿ: ಜೀವನದಲ್ಲಿ ಎಷ್ಟು ಸಂಪಾದನೆ ಮಾಡಿದರೂ, ಪರರಿಗೆ ಕೊಡುವುದರಲ್ಲಿರುವ ಸಂತೋಷವೇ ಬೇರೆ. ಈ ಮಾತನ್ನು ಈ ಹುಬ್ಬಳ್ಳಿಯ ದಂಪತಿಗಳು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದ್ದಾರೆ.

ಈ ದಂಪತಿಗಳು ಸಮಾಜದ ಹಸಿದ ಮತ್ತು ನಿರ್ಗತಿಕ ವರ್ಗಗಳಿಗೆ ಭರವಸೆಯ ಕಿರಣವಾಗಿದ್ದು, ಹುಬ್ಬಳ್ಳಿ ನಗರದಲ್ಲಿ ಸರಾಸರಿ 50 ಮಂದಿಗೆ ಆಹಾರ ನೀಡುತ್ತಿದ್ದಾರೆ. ಇಲ್ಲಿನ ನಿರ್ಗತಿಕರೂ ಕೂಡ ಪ್ರತಿದಿನ ಸರಿಯಾದ ಊಟಕ್ಕೆ ಹೆಚ್ಚು ಕಡಿಮೆ ಅವಲಂಬಿತರಾಗಿದ್ದಾರೆ. ಕರಿಯಪ್ಪ ಮತ್ತು ಸುನಂದಾ ಶಿರಹಟ್ಟಿ ಅವರು ಕಳೆದ 15 ವರ್ಷಗಳಿಂದ ಮೌನವಾಗಿ ತಮ್ಮ ಉದಾತ್ತ ಕಾರ್ಯವನ್ನು ಮಾಡುತ್ತಿದ್ದಾರೆ. ಹೊಸದಾಗಿ ಬೇಯಿಸಿದ ಆಹಾರದ ಜೊತೆಗೆ, ಅವರು ಕೂದಲು ಮತ್ತು ಉಗುರುಗಳನ್ನು ಟ್ರಿಮ್ ಮಾಡಲು ಗ್ರೂಮಿಂಗ್ ಕಿಟ್ ಅನ್ನು ಕೂಡ ಒಯ್ಯುತ್ತಾರೆ ಮತ್ತು ಬೀದಿಗಳಲ್ಲಿ ವಾಸಿಸುವ ನಿರ್ಗತಿಕರಿಗೆ ಕ್ಷೌರ ಮತ್ತು ಸ್ನಾನ ಕೂಡ ಮಾಡಿಸುತ್ತಾರೆ.

ಕರಿಯಪ್ಪ ಪ್ರತಿದಿನ ಬಿಸಿಯೂಟದೊಂದಿಗೆ ಹೊರಟು ಹುಬ್ಬಳ್ಳಿಯ ರೈಲು ನಿಲ್ದಾಣ, ಆಸ್ಪತ್ರೆ ಗೇಟ್‌ಗಳಲ್ಲಿರುವ ಬಡ ಜನರಿರುವ ಸ್ಥಳಗಳಲ್ಲಿ ಸುತ್ತುತ್ತಾರೆ. ಅವರು ದಿನಕ್ಕೆ ಒಂದು ಒಳ್ಳೆಯ ಊಟಕ್ಕೆ ಸಾಕಾಗುವಷ್ಟು ಚಪಾತಿ ಅಥವಾ ಅನ್ನವನ್ನು ಹೊಂದಿರುವ ಆಹಾರ ಪೊಟ್ಟಣಗಳನ್ನು ಬಡವರಿಗೆ ವಿತರಿಸುತ್ತಾರೆ. ಹಳೇ ಹುಬ್ಬಳ್ಳಿಯ ಆನಂದನಗರದ ನಿವಾಸಿಗಳಾದ ಶಿರಹಟ್ಟಿಯ ಈ ದಂಪತಿಗಳು, ಈಗ ಮದುವೆ ಮತ್ತು ಹುಟ್ಟುಹಬ್ಬದ ಪಾರ್ಟಿಗಳು ಮತ್ತು ಇತರ ಕಾರ್ಯಕ್ರಮಗಳಿಂದ ಹೆಚ್ಚುವರಿ ಆಹಾರವನ್ನು ಸಂಗ್ರಹಿಸುವ ಮೂಲಕ ತಮ್ಮ ಸೇವೆಯನ್ನು ಹೆಚ್ಚಿಸಲು ಯೋಜಿಸಿದ್ದಾರೆ. ಈ ಉದ್ದೇಶಕ್ಕಾಗಿ ತಮ್ಮದೇ ವಾಹನವನ್ನೂ ಖರೀದಿಸಿದ್ದು, ನಗರದಲ್ಲಿ ಹಸಿದಿರುವವರಿಗೆ ಆಹಾರ ವಿತರಿಸಲಿದ್ದಾರೆ.

ಈ ದಂಪತಿಗಳು ಪರೋಪಕಾರಿಯಾಗಿ ಬದಲಾಗಲು ಏನು ಪ್ರೇರೇಪಿಸಿತು? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರಿಯಪ್ಪ ಶಿರಹಟ್ಟಿ ಅವರು ಟಿಎನ್‌ಐಇಗೆ ಮಾತನಾಡಿದ್ದು, 'ನಾನು ಉತ್ತಮ ಕುಟುಂಬದಿಂದ ಬಂದವರಾಗಿದ್ದು, ಆದರೆ ಬಾಲ್ಯದಿಂದಲೂ ಬಡವರಿಗಾಗಿ ಏನಾದರೂ ಮಾಡಬೇಕೆಂಬ ಬಯಕೆ ಅವರಲ್ಲಿತ್ತು. ಅಂತಿಮವಾಗಿ ಆ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ನಮಗೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ನಮ್ಮ ತಂದೆ ಶ್ರೀ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಹೆಸರಿನ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಈ ಸೇವೆಯನ್ನು ಆರಂಭಿಸಿದ್ದೇವೆ. ಕರಿಯಪ್ಪನ ತಂದೆ ನೀಲಪ್ಪ ಪೌರಕಾರ್ಮಿಕರಾಗಿದ್ದರು ಮತ್ತು ಅವರ ಮೂರು ಸದಸ್ಯರ ಕುಟುಂಬಕ್ಕೆ ಸಾಕಾಗುವಷ್ಟು ಆದಾಯವನ್ನು ಹೊಂದಿದ್ದರು. ಕರಿಯಪ್ಪ 15 ವರ್ಷಗಳ ಹಿಂದೆ ಸುನಂದಾ ಅವರನ್ನು ಮದುವೆಯಾಗಿದ್ದು, ಅವರು ತಮ್ಮ ತಾಯಿ ಗೌರಮ್ಮ ಅವರೊಂದಿಗೆ ವಾಸಿಸುತ್ತಿದ್ದಾರೆ. ಗೌರಮ್ಮ ಅವರು ಕಿರಾಣಿ ಅಂಗಡಿಯನ್ನು ನಡೆಸುತ್ತಾರೆ ಮತ್ತು ಅವರು ಗಳಿಸಿದ ಎಲ್ಲವನ್ನೂ ಹಸಿದವರಿಗೆ ಆಹಾರ ನೀಡಲು ಬಳಸುತ್ತಿದ್ದರು ಎಂದು ಹೇಳಿದ್ದಾರೆ.

ನಮ್ಮ ಕಾರ್ಯದಲ್ಲಿ ನನ್ನ ಪತ್ನಿಯ ಕೊಡೆಗೆಯೂ ಇದ್ದು, ಅವಳು ದೈಹಿಕವಾಗಿ ವಿಕಲಾಂಗಳಾಗಿದ್ದರೂ ಅಡುಗೆ ಮಾಡಲು ಅವಳು ಎಂದಿಗೂ ಆಯಾಸಗೊಳ್ಳುವುದಿಲ್ಲ. ನಾವು ಎಂದಿಗೂ ಇತರರಿಂದ ದೇಣಿಗೆಯನ್ನು ನಿರೀಕ್ಷಿಸುವುದಿಲ್ಲ ಮತ್ತು ನಮ್ಮ ಸಂಪಾದನೆ ನಮಗೆ ಸಾಕಾಗುತ್ತದೆ ಎಂದು ಹೇಳಿದರು.

ಕರಿಯಪ್ಪ ಅವರ ಆಪ್ತರೊಬ್ಬರು ಮಾತನಾಡಿ, 'ಅವರ ಕಾರ್ಯದಿಂದ ಉತ್ತೇಜಿತನಾಗಿ ನಾನು ಹಲವಾರು ಬಾರಿ ಆರ್ಥಿಕ ಸಹಾಯವನ್ನು ನೀಡಲು ಪ್ರಯತ್ನಿಸಿದೆ. ಆದರೆ ಕರಿಯಪ್ಪ ನಿರಾಕರಿಸಿದ್ದು ಮಾತ್ರವಲ್ಲದೇ ಅದನ್ನು ಅಗತ್ಯವಿರುವವರಿಗೆ ನೀಡುವಂತೆ ಹೇಳಿದರು. ಒಬ್ಬರಿಗೊಬ್ಬರು ಸಹಾಯ ಮಾಡುವುದು ಮಾನವರ ಜವಾಬ್ದಾರಿಯಾಗಿದೆ. ಒಬ್ಬ ವ್ಯಕ್ತಿಯು ಹಸಿದವರಿಗೆ ಬಿಸ್ಕತ್ತು ಪ್ಯಾಕೆಟ್ ನೀಡಿದರೂ, ರಾಷ್ಟ್ರದಲ್ಲಿ ಹಸಿವಿನ ನಿರ್ಮೂಲನೆಯಾಗುತ್ತದೆ ಎಂದು ಹೇಳಿದರು.

ಸಂತೋಷ ಮತ್ತು ಕೃತಜ್ಞತೆ
ದಂಪತಿಗಳು ನಿರಾಶ್ರಿತರನ್ನು, ನಿರ್ಗತಿಕರನ್ನೂ ಕೂಡ ತಮ್ಮವರೇ ಎಂದು ಪರಿಗಣಿಸುತ್ತಾರೆ. ಅವರಿಗೆ ಆಹಾರ ಮತ್ತು ಇತರ ಸೇವೆಗಳಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಕರಿಯಪ್ಪ ಅವರು ನಿತ್ಯವೂ ಊಟಕ್ಕೆ ಸಹಾಯ ಮಾಡುತ್ತಾರೆ ಎಂದು ಅವರ ಫಲಾನುಭವಿಯೊಬ್ಬರು ಸಂತಸ ವ್ಯಕ್ತಪಡಿಸಿದರು. "ನಾವು ಫಿಟ್ ಮತ್ತು ಫೈನ್ ಆಗಿ ಕಾಣುತ್ತೇವೆ, ಆದರೆ ಶಿಕ್ಷಣದ ಕೊರತೆ ಮತ್ತು ಆಂತರಿಕ ಆರೋಗ್ಯ ಸಮಸ್ಯೆಗಳಿಂದಾಗಿ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿಂದ ನಾವು ಅನೇಕ ವಿಷಯಗಳನ್ನು ಕಲಿತಿದ್ದೇವೆ. ನಾವು ಜನರನ್ನು ಹೆಚ್ಚು ಗೌರವದಿಂದ ನೋಡುತ್ತೇವೆ ಎಂದು ಅವರು ಹೇಳಿದರು.

ಕೂದಲಿಗೆ ಜಡೆ ಹಾಕಿದ್ದು, ಕೊಳಕಾಗಿ ಕಾಣುವುದರಿಂದ ಜನ ನಮ್ಮಿಂದ ದೂರವಾಗುತ್ತಾರೆ ಎನ್ನುತ್ತಾರೆ ಮತ್ತೊಬ್ಬ ಫಲಾನುಭವಿ ಪಕೀರಪ್ಪ. ನಾನೂ ಕೂಡ ಕ್ಷೌರ ಮಾಡಿಸಿಕೊಳ್ಳುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಕರಿಯಪ್ಪ ಅವರು ತಾವೇ ಖುದ್ಧು ಮುಖ ಮತ್ತು ಕೂದಲನ್ನು ಸ್ವಚ್ಛಗೊಳಿಸಲು ನಿಲ್ಲುತ್ತಾರೆ. ಪೊಲೀಸರು ಮತ್ತು ಇತರ ಜನರು ನಮಗೆ ತೊಂದರೆ ನೀಡುವುದರಿಂದ ನಾವು ನಗರದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಿರುಗಾಡುತ್ತಲೇ ಇರುತ್ತೇವೆ, ನಮ್ಮ ದೈನಂದಿನ ಅಗತ್ಯಗಳಿಗಾಗಿ ನಾವು ಭಿಕ್ಷೆ ಬೇಡಿಕೊಳ್ಳುತ್ತೇವೆ. ಕರಿಯಪ್ಪ ಮಾತ್ರ ನಮ್ಮನ್ನು ಕಂಡರೆ ನಿಲ್ಲುತ್ತಾರೆ. ಅವರಂತಹ ಸ್ನೇಹಿತರನ್ನು ಪಡೆದ ನಾವು ತುಂಬಾ ಅದೃಷ್ಟವಂತರು ಎಂದು ಹೇಳಿದರು.

“ನಾವು ಭಿಕ್ಷುಕರು ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ನಮ್ಮ ಕಲ್ಯಾಣದಲ್ಲಿ ಯಾರಿಗೂ ಆಸಕ್ತಿಯಿಲ್ಲ. ಕೆಲವು ಜನರು ತಮ್ಮ ಸಂಪತ್ತನ್ನು ತೋರಿಸಲು ಅಥವಾ ಭಿಕ್ಷುಕರನ್ನು ತೊಡೆದುಹಾಕಲು ನಮಗೆ ಹಣವನ್ನು ನೀಡುತ್ತಾರೆ. ಆದರೆ ಕರಿಯಪ್ಪ ಭಿನ್ನ. ಅವರು ನಮ್ಮನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಎಂದು ಮತ್ತೋರ್ವ ಫಲಾನುಭವಿ ಇಬ್ರಾಹಿಂ ಹೇಳಿದರು.

ಈ ಪರೋಪಕಾರದ ಜೊತೆಗೇ ಕರಿಯಪ್ಪ ಈಗ ಹೊಸ ಪಾತ್ರವನ್ನು ವಹಿಸಿದ್ದು, ನಿಷೇಧಿತ ಪ್ಲಾಸ್ಟಿಕ್‌ನಿಂದ ದೂರವಿರಲು ಜನರಿಗೆ ಶಿಕ್ಷಣ ನೀಡುವುದು ಮತ್ತು ಕಾಗದದ ಪ್ಯಾಕೆಟ್‌ಗಳಲ್ಲಿ ಆಹಾರವನ್ನು ನೀಡಲು ಅವರೇ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com