ನವೀನ ರೀತಿಯಲ್ಲಿ ರೈತರ ಬೆಳೆ ಸರದಿ ಅಧ್ಯಯನ: ಒಡಿಶಾದ 14 ವರ್ಷದ ಬಾಲಕಿಗೆ ರಾಷ್ಟ್ರಮಟ್ಟದ ಮನ್ನಣೆ!

ಬೆಳೆ ಸರದಿ ಮತ್ತು ದ್ವಿದಳ ಧಾನ್ಯದ ಕೃಷಿಯ ಪ್ರವರ್ತಕ ಅಧ್ಯಯನ ನಡೆಸಿ ಒಡಿಶಾ ರಾಜ್ಯದ ಜಗತ್ ಸಿಂಗ್ ಪುರದ ಪುರೋಹಿತ್‌ಪುರದ ಸರ್ಕಾರಿ ಪ್ರೌಢಶಾಲೆಯ 14 ವರ್ಷದ ವಿದ್ಯಾರ್ಥಿನಿ ಅನಪೂರ್ಣ ಪರಿದಾ ಅವರು ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ತನ್ನ ಅಧ್ಯಯನವನ್ನು ಪ್ರಸ್ತುತಪಡಿಸಿದ ಅನಪೂರ್ಣ ಪರಿದಾ
ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ತನ್ನ ಅಧ್ಯಯನವನ್ನು ಪ್ರಸ್ತುತಪಡಿಸಿದ ಅನಪೂರ್ಣ ಪರಿದಾ
Updated on

ಜಗತ್‌ಸಿಂಗ್‌ಪುರ(ಒಡಿಶಾ): ಬೆಳೆ ಸರದಿ ಮತ್ತು ದ್ವಿದಳ ಧಾನ್ಯದ ಕೃಷಿಯ ಪ್ರವರ್ತಕ ಅಧ್ಯಯನ ನಡೆಸಿ ಒಡಿಶಾ ರಾಜ್ಯದ ಜಗತ್ ಸಿಂಗ್ ಪುರದ ಪುರೋಹಿತ್‌ಪುರದ ಸರ್ಕಾರಿ ಪ್ರೌಢಶಾಲೆಯ 14 ವರ್ಷದ ವಿದ್ಯಾರ್ಥಿನಿ ಅನಪೂರ್ಣ ಪರಿದಾ ಅವರು ಪ್ರಶಂಸೆಗೆ ಪಾತ್ರಳಾಗಿದ್ದಾಳೆ.  ಭುವನೇಶ್ವರದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ಮನ್ನಣೆ ಗಳಿಸಿ, ಮುಂಬರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ (NCSC) ನಲ್ಲಿ ಭಾಗವಹಿಸಲು ಸ್ಥಾನ ಪಡೆದುಕೊಂಡಿದ್ದಾಳೆ.

ಬೆಳೆ ಸರದಿ ಮತ್ತು ದ್ವಿದಳ ಧಾನ್ಯಗಳ ಕೃಷಿಯ ಪ್ರಯೋಜನಗಳ ಬಗ್ಗೆ ಸ್ಥಳೀಯ ರೈತರಲ್ಲಿ ಅರಿವು ಮೂಡಿಸುವತ್ತ ಗಮನಹರಿಸಿದ ಪರಿದಾಳ ಸಂಶೋಧನೆಯು ಮಣ್ಣಿಗೆ ಸಾರಜನಕವನ್ನು ಒದಗಿಸುವಲ್ಲಿ ಮತ್ತು ಮನುಷ್ಯರಲ್ಲಿ ರೋಗಗಳನ್ನು ಕಡಿಮೆ ಮಾಡುವಲ್ಲಿ ದ್ವಿದಳ ಧಾನ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ರೈತರಲ್ಲಿ ಈ ಪದ್ಧತಿಗಳ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಜಗತ್‌ಸಿಂಗ್‌ಪುರ ಬ್ಲಾಕ್‌ನ ತಾರದಪದ ಪಂಚಾಯಿತಿ ವ್ಯಾಪ್ತಿಯ ಚಂದೂರ ಗ್ರಾಮದಲ್ಲಿ ಪರಿದಾ ಇದರ ಅಧ್ಯಯನಕ್ಕೆ ಮುಂದಾದಳು. 

ಚಂಡೂರ ಗ್ರಾಮದಲ್ಲಿ, ಪರಿದಾ 160 ಕುಟುಂಬಗಳೊಂದಿಗೆ ಈ ಬೆಳೆ ವಿಧಾನದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾಳೆ. ಬೆಳೆ ಸರದಿ , ದ್ವಿದಳ ಧಾನ್ಯಗಳ ಕೃಷಿ, ಮಣ್ಣು ಪರೀಕ್ಷೆ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ನಿವಾಸಿಗಳನ್ನು ಪ್ರಶ್ನಿಸಿದರು. ಕೇವಲ ಶೇಕಡಾ 33ರಷ್ಟು ಭೂಮಿಯನ್ನು ಮಾತ್ರ ದ್ವಿದಳ ಧಾನ್ಯಗಳನ್ನು ಬೆಳೆಯಲು ಬಳಸಲಾಗುತ್ತಿತ್ತು, ಕೇವಲ ಶೇಕಡಾ 40ರಷ್ಟು ರೈತರು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನವರಿಗೆ ಬೆಳೆ ಸರದಿ ವಿಧಾನಗಳು ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ಜ್ಞಾನದ ಕೊರತೆಯಿದೆ ಎನ್ನುತ್ತಾಳೆ ಪರಿದಾ.

ಈ ಜ್ಞಾನದ ಕೊರತೆಯಿಂದ ದ್ವಿದಳ ಧಾನ್ಯಗಳ ಸಂಭಾವ್ಯ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ ಅವುಗಳ ಸೀಮಿತ ಬಳಕೆಯಾಗುತ್ತಿದೆ. ಈ ಸಮಸ್ಯೆಗಳನ್ನು ಗುರುತಿಸಿ, ಪರಿದಾ ಜಾಗೃತಿ ಮೂಡಿಸುವುದಲ್ಲದೆ, ಗುಣಮಟ್ಟದ ಉತ್ಪಾದನೆ, ಮಣ್ಣಿನ ಪರೀಕ್ಷೆ ಮತ್ತು ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಬೆಳೆ ಸರದಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಒಳನೋಟಗಳನ್ನು ರೈತರಿಗೆ ಒದಗಿಸುತ್ತಾರೆ. ಅವರ ಈ ಅಧ್ಯಯನ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ಅವರ ಪ್ರಸ್ತುತಿಯು ಡಿಸೆಂಬರ್ 27 ರಿಂದ ಪ್ರಾರಂಭವಾಗುವ ಪ್ರತಿಷ್ಠಿತ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‌ಗೆ ಆಯ್ಕೆಯಾಗಲು ಕಾರಣವಾಗಿದೆ. 

ವಿಜ್ಞಾನ ಶಿಕ್ಷಕ ಮತ್ತು ಪರಿದಾ ಅವರ ಮಾರ್ಗದರ್ಶಕ ಅಂಜನ್ ಕುಮಾರ್ ಸಾಹೂ ಅವರು ಪರಿದಾ ಅವರ ವಿನೂತನ ಅಧ್ಯಯನವನ್ನು ಶ್ಲಾಘಿಸುತ್ತಾರೆ. ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಮತ್ತು ರೋಗಗಳನ್ನು ಎದುರಿಸಲು ಸರದಿ ಮೂಲಕ ದ್ವಿದಳ ಧಾನ್ಯಗಳನ್ನು ಬೆಳೆಸುವ ಅವರ ಸಂಶೋಧನೆಯು ರಾಜ್ಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ಮಾಡಿದೆ ಎನ್ನುತ್ತಾರೆ. 

ಈ ಅಧ್ಯಯನಕ್ಕೆ ಪರಿದಾ ಅವರ ತಾಯಿ, ಶಾಲಾ ಶಿಕ್ಷಕಿ ಕಬಿತಾ ಸಾಹೂ, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುವ ತಂದೆ ರಬಿನಾರಾಯಣ ಪರಿದಾ ಮತ್ತು ಅವರ ಅಜ್ಜ ನಿವೃತ್ತ ಶಿಕ್ಷಕ ಜಟಾಧಾರಿ ಪರಿದಾ ಬೆಂಬಲ ನೀಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com