ವಿರೋಧ, ಅಡೆತಡೆಗಳ ಬದಿಗೊತ್ತಿ ವೇಟ್‌ಲಿಫ್ಟಿಂಗ್'ನಲ್ಲಿ ಸಾಧನೆ ಮಾಡುತ್ತಿರುವ ಬೆಳಗಾವಿಯ ಅಕ್ಷತಾ!

ತಮ್ಮ ಸಾಧನೆಯ ಹಾದಿಯಲ್ಲಿ ಹಲವು ವಿರೋಧಗಳು, ಅಡೆತಡೆಗಳು ಎದುರಾದರೂ ಅವುಗಳ ಬದಿಗೊತ್ತಿ ಗುರಿ ಮುಟ್ಟುವುದರದಿಂದ ಬೆಳಗಾವಿ ಮೂಲಕ ಅಕ್ಷತಾ ಅವರು ಹಿಂದೆ ಸರಿದಿಲ್ಲ.
ಅಕ್ಷತಾ ಬಸಂತ್ ಕಾಮತಿ
ಅಕ್ಷತಾ ಬಸಂತ್ ಕಾಮತಿ

ಬೆಳಗಾವಿ: ತಮ್ಮ ಸಾಧನೆಯ ಹಾದಿಯಲ್ಲಿ ಹಲವು ವಿರೋಧಗಳು, ಅಡೆತಡೆಗಳು ಎದುರಾದರೂ ಅವುಗಳ ಬದಿಗೊತ್ತಿ ಗುರಿ ಮುಟ್ಟುವುದರದಿಂದ ಬೆಳಗಾವಿ ಮೂಲಕ ಅಕ್ಷತಾ ಅವರು ಹಿಂದೆ ಸರಿದಿಲ್ಲ.

ಬೆಳಗಾವಿ ತಾಲೂಕಿನ ಹಲಗಾ ಎಂಬ ಪುಟ್ಟ ಗ್ರಾಮದಿಂದ ಬಂದ 22 ವರ್ಷದ ಅಕ್ಷತಾ ಬಸಂತ್ ಕಾಮತಿ ಅವರು, ವೇಟ್‌ಲಿಫ್ಟಿಂಗ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಇಚ್ಛಾಶಕ್ತಿ ಹಾಗೂ ಕುಟುಂಬದ ಬೆಂಬಲದೊಂದಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಅಕ್ಷತಾ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಶನಿವಾರವಷ್ಟೇ ಅಕ್ಷತಾ ಅವರು ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ನಡೆದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 87 ಕೆಜಿ ತೂಕದ ಗುಂಪಿನಲ್ಲಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ಈ ಹಿಂದೆ ಪುಣೆಯಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ, ಅಕ್ಷತಾ ಅವರು, 76 ಕೆಜಿ ವಿಭಾಗದಲ್ಲಿ 176 ಕೆಜಿ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದರು. ಬಿಹಾರದ ಬೋಧ್ ಗಯಾದಲ್ಲಿ ನಡೆದ 32 ನೇ ಮಹಿಳಾ ಜೂನಿಯರ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿಯೂ 81 ಕೆಜಿ ವಿಭಾಗದಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ಸಹೋದರಿಯ ಸಾಧನೆ ಕುರಿತು ಮಾತನಾಡಿರುವ ಅಕ್ಷತಾ ಅವರ ಹಿರಿಯ ಸಹೋದರ ಆಕಾಶ್ ಕಾಮತಿಯವರು, ಹಲಗಾದ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿ ಅಕ್ಷತಾ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ವೇಟ್‌ಲಿಫ್ಟಿಂಗ್‌ಗಾಗಿ ವಿಶೇಷ ತರಬೇತಿ ತರಗತಿಗಳನ್ನು ಪಡೆದುಕೊಳ್ಳಲು ಮುಂದಾಗಿದ್ದಳು. ಈ ವೇಳೆ ವೇಟ್‌ಲಿಫ್ಟಿಂಗ್‌ ಬಗ್ಗೆ ಸಾಕಷ್ಟು ಆಕರ್ಷಿತಳಾಗಿದ್ದಳು. ವೇಟ್‌ಲಿಫ್ಟಿಂಗ್ ಹುಡುಗಿಯರಿಗೆ ಹೊಂದುವ ಕ್ರೀಡೆಯಲ್ಲ ಎಂದು ಟೀಕಿಸಿದ್ದರು. ಆದರೆ, ಆ ಟೀಕೆಗಳ ಬದಿಗೊತ್ತಿ. ಸಾಧನೆ ಮಾಡಿ ಅಂತಹ ಆಲೋಚನೆ ತಪ್ಪು ಎಂಬುದನ್ನು ಸಾಬೀತುಪಡಿಸಿದರು. 10ನೇ ತರಗತಿಯಲ್ಲಿದ್ದಾಗ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಗ್ರಾಮಕ್ಕೆ ಕೀರ್ತಿ ತಂದುಕೊಟ್ಟಿದ್ದಳು. ಇದು ಗ್ರಾಮಸ್ಥರಿಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಅಕ್ಷತಾ ಅವರ ತಂದೆ ಬಸವಂತ್ ಅವರು ಮಾತನಾಡಿ, 10 ಗುಂಟೆ ಭೂಮಿ ಇದ್ದು, ಇದನ್ನು ಮೂವರು ಸಹೋದರರಿಗೆ ಹಂಚಲಾಗಿದೆ. ಅಕ್ಷತಾ ಅವರ ಉಳಿದುಕೊಳ್ಳುವಿಕೆ, ತರಬೇತಿ ಮತ್ತು ಆಹಾರವನ್ನು ಸರ್ಕಾರ ನೋಡಿಕೊಳ್ಳುತ್ತದೆಯಾದರೂ, ಅವರಿಗೆ ನೀಡಬೇಕಾಗಿರುವ ಪ್ರೋಟೀನ್‌ಯುಕ್ತ ವಿಶೇಷ ಆಹಾರ ಇತರೆ ಖರ್ಚುಗಳಿಗೆ ಪ್ರತೀ ತಿಂಗಳು ರೂ.25,000 ವೆಚ್ಚವಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com