ಅದು ಹುಲ್ಲಲ್ಲಾ...: ಹಾವು ಜಗಿಯುತ್ತಿರುವ ಜಿಂಕೆ, ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದ Viral Video
ಈ ಜಗತ್ತಿನಲ್ಲಿ ಎಂತೆಂಥಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಎಂದರೆ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಿಲ್ಲ.. ಈ ಸಾಲಿಗೆ ಇಲ್ಲೊಂದು ವೈರಲ್ ವಿಡಿಯೋ ಸೇರ್ಪಡೆಯಾಗಿದೆ.
Published: 12th June 2023 03:07 PM | Last Updated: 03rd July 2023 05:17 PM | A+A A-

ಹಾವನ್ನು ಜಗಿಯುತ್ತಿರುವ ಜಿಂಕೆ
ಈ ಜಗತ್ತಿನಲ್ಲಿ ಎಂತೆಂಥಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಎಂದರೆ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಿಲ್ಲ.. ಈ ಸಾಲಿಗೆ ಇಲ್ಲೊಂದು ವೈರಲ್ ವಿಡಿಯೋ ಸೇರ್ಪಡೆಯಾಗಿದೆ.
ಇಲ್ಲೊಂದು ಜಿಂಕೆ ವಿಷಕಾರಿ ಹಾವನ್ನು ಹುಲ್ಲಿನ ರೀತಿ ಜಗಿಯುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಜಿಂಕೆಗಳು ಶುದ್ಧ ಸಸ್ಯಹಾರಿ ಪ್ರಾಣಿಗಳು, ಕಾಡುಗಳಲ್ಲಿ ಹಸಿರು ಹುಲ್ಲನ್ನು ಗಿಡ ಪೊದೆಗಳಲ್ಲಿ ಬೆಳೆದ ಹಸಿರು ಚಿಗುರೆಲೆಗಳನ್ನು ತಿಂದು ಇವು ಬದುಕುತ್ತವೆ. ಆದರೆ ನಮ್ಮ ಈ ನಂಬಿಕೆಯನ್ನೇ ಇಲ್ಲೊಂದು ಜಿಂಕೆ ಬುಡಮೇಲು ಮಾಡಿದ್ದು, ಕಂದು ಜಿಂಕೆಯೊಂದು ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿಯುತ್ತಿದೆ.
ಸ್ಥಳೀಯರೊಬ್ಬರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆಯಿತು.. ಯಾರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂಬ ಅಂಶ ಬಯಲಾಗಿಲ್ಲವಾದರೂ ಜಿಂಕೆಯ ನಡೆ ಮಾತ್ರ ಸ್ವತಃ ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದೆ.
Cameras are helping us understand Nature better.
— Susanta Nanda (@susantananda3) June 11, 2023
Yes. Herbivorous animals do eat snakes at times. pic.twitter.com/DdHNenDKU0
ಇದನ್ನೂ ಓದಿ: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಜಿಂಕೆ ಕೊಂಬಿಗೆ ಸಿಲುಕಿದ ಮೀನು ಹಿಡಿಯುವ ಬಲೆ; ಫೊಟೋ ವೈರಲ್
@TheFigen_ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾನು ಜಿಂಕೆಯೊಂದು ಹಾವನ್ನು ತಿನ್ನುತ್ತಿರುವುದನ್ನು ಮೊದಲ ಬಾರಿ ನೋಡುತ್ತಿದ್ದೇನೆ. ಇವುಗಳಿಗೆ ಹುಲ್ಲು ನೀಡುತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 21 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಹಾವನ್ನು ಜಿಂಕೆ ಬಬಲ್‌ಗಮ್ ತರ ಜಗಿಯುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.